More

    ಮೂರುಸಾವಿರ ಮಠ ವಿವಾದ: ಸಮಸ್ಯೆ ಇತ್ಯರ್ಥಕ್ಕೆ ಡಾ.ವಿಜಯ ಸಂಕೇಶ್ವರರ ಮಹತ್ವದ ಸಲಹೆ ಇಲ್ಲಿದೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠಕ್ಕೆ ಸಂಬಂಧಿಸಿದಂತೆ ಭಕ್ತರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಗೊಂದಲದಲ್ಲಿ ಇರುವುದು ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತ್ರ ಎಂದು ವಿಆರ್‍ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

    ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ವಿಜಯ ಸಂಕೇಶ್ವರ ಅವರು, ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಪರಸ್ಪರ ಚರ್ಚಿಸಿ, ಒಮ್ಮತದ ನಿರ್ಧಾರಕ್ಕೆ ಬರುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಬೇಕು. ಇಬ್ಬರೂ ಸ್ವಾಮೀಜಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ಸಮಾಜ ಒಪ್ಪುತ್ತದೆ ಎಂದರು.

    ಮಠದ ಉನ್ನತ ಸಮಿತಿಯಲ್ಲಿ ನಮ್ಮ ಹೆಸರು ಸೇರಿಸುವಂತೆ ನಾವೇನೂ ಸ್ವಾಮೀಜಿಯವರ ಬಳಿ ಹೋಗಿರಲಿಲ್ಲ. ಅವರೇ ನಮ್ಮೆಲ್ಲರ ಮನೆಗಳಿಗೆ ಭೇಟಿ ನೀಡಿ, ಮಠದ ಅಭಿವೃದ್ಧಿಗಾಗಿ ಉನ್ನತ ಸಮಿತಿಯಲ್ಲಿ ನಿಮ್ಮ ಹೆಸರು ಸೇರಿಸುತ್ತೇನೆ ಎಂದಿದ್ದರು. ಕೇವಲ 7 ಜನ ಸದಸ್ಯರಿಂದ ಮಠದ ಉದ್ಧಾರ ಆಗುವುದಿಲ್ಲ. ಹಿಂದಿನ ಸ್ವಾಮೀಜಿ ಅವರಿಗೂ ಸಹಕಾರ ನೀಡಿದ್ದೆವು. ನಿಮಗೂ ಅಗತ್ಯ ಸಹಕಾರ ನೀಡುತ್ತೇವೆ. ಸಮಿತಿಯಲ್ಲಿ ಸ್ಥಾನ ಬೇಡ ಎಂದರೂ ಮಠದ ಆಡಳಿತ ನನ್ನೊಬ್ಬನಿಂದ ಸಾಧ್ಯವಿಲ್ಲ. ನಿಮ್ಮ ಸಹಾಯ ಬೇಕು ಎಂದು ಕೋರಿದ್ದರಿಂದ ಉನ್ನತ ಸಮಿತಿಗೆ ಸೇರಿದೇವು ಎಂದು ಡಾ.ವಿಜಯ ಸಂಕೇಶ್ವರ ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿರಿ ಡಾ.ರಾಜ್​ ಅಪಹರಣ ಪ್ರಕರಣ: ರಾಜ್ಯ ಸರ್ಕಾರ ಮುಚ್ಚಿಹಾಕಿದ್ದ ಸ್ಫೋಟಕ ರಹಸ್ಯ ಬಯಲು

    ನಂತರ ಮಠದಲ್ಲಿ ಬೇರೆ ಬೇರೆ ಬೆಳವಣಿಗೆಗಳು ಆದವು. ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಪಟ್ಟಕಟ್ಟಲು ತೀರ್ಮಾನಿಸಿದ್ದೇನೆ ಎಂದು ಸ್ವತಃ ಗುರುಸಿದ್ಧೇಶ್ವರ ಸ್ವಾಮೀಜಿ ಉನ್ನತ ಸಮಿತಿ ಸದಸ್ಯರಿಗೆ ತಿಳಿಸಿದ್ದರು. ಆದರೆ, ಮುಂದಿನ ದಿನಗಳಲ್ಲಿ ಮಠದ ಸ್ವಾಮೀಜಿ ಮನಸ್ಸು ಬದಲಾಯಿಸಿದರು ಎಂದರು.

    ಈಗ ಮಠದ ವಿಷಯ ಮುಗಿದ ಅಧ್ಯಾಯ. ನಾನು ಉನ್ನತ ಕಮಿಟಿಯಲ್ಲಿದ್ದಾಗ ಸಭೆ ಕರೆದು, ಮಠದ ಅಭಿವೃದ್ಧಿ ಬಗ್ಗೆ ಚರ್ಚಿಸುವಂತೆ ಹೇಳಿದ್ದೆ. ಆದರೆ, ಯಾರೊಬ್ಬರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಸಾಲ-ತಾಪತ್ರಯ ಇದೆಯೆಂದು ಅಳುತ್ತಾ ಇದ್ದರು. ಹಣದ ಅವ್ಯವಹಾರ ಇರುವಲ್ಲಿ ನಾನು ಇರುವುದಿಲ್ಲ. ಹೀಗಾಗಿ, 10 ವರ್ಷಗಳ ಹಿಂದೆಯೇ ರಾಜೀನಾಮೆ ಕೊಟ್ಟಿದ್ದೇನೆ. ಅಲ್ಲಿಂದ ಇದುವರೆಗೆ ಮಠಕ್ಕೆ ಕಾಲು ಇಟ್ಟಿಲ್ಲ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

    ಮೂರುಸಾವಿರ ಮಠದ ಬಗ್ಗೆ ನನಗೆ ಗೌರವ ಇದೆ. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳ ಬಗ್ಗೆಯೂ ಗೌರವ ಇದೆ. ಈಗಿನ ಸ್ವಾಮೀಜಿಯವರನ್ನು ಬದಲಾಯಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಿದ್ದೆ. ಆದರೆ, ಯಥಾಸ್ಥಿತಿ ಮುಂದುವರಿಯಲಿಯೆಂದು ಶೆಟ್ಟರ್ ಪ್ರತಿಕ್ರಿಯಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ಇದುವರೆಗೆ ಈಗಿನ ಸ್ವಾಮೀಜಿಯವರ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸ್ವಾಮೀಜಿಯವರ ಪಾದ ಸ್ಪರ್ಶಿಸಿ, ಆಶೀರ್ವಾದ ಪಡೆಯಲು ಭಕ್ತರು ಅವರ ಹಿಂದೆ ಓಡೋಡಿ ಹೋದರೂ ಸ್ವಾಮೀಜಿ ಒಂದು ನಿಮಿಷವೂ ನಿಲ್ಲುವುದಿಲ್ಲ. ಅವಸರದಲ್ಲಿ ಮಠದ ಒಳಗೆ ಹೋಗುತ್ತಾರೆ. ಆದರೆ, ಮೈಸೂರಿನ ಸುತ್ತೂರು ಮಠದ ಸ್ವಾಮೀಜಿ, ಕೊಪ್ಪಳದ ಗವಿಸಿದ್ಧೇಶ್ವರ ಮಠದ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ತಾಳ್ಮೆಯಿಂದ ಭಕ್ತರೊಂದಿಗೆ ಮಾತನಾಡುತ್ತಾರೆ. ಭಕ್ತರ ಕಷ್ಟ-ಸುಖ ವಿಚಾರಿಸುತ್ತಾರೆ. ಮಠಾಧೀಶರು ಎಂದರೆ ಹೀಗಿರಬೇಕು ಎಂದರು.

    ರಾಜಕೀಯ ವ್ಯಕ್ತಿಗಳಂತೆ ಕೆಲ ಸ್ವಾಮೀಜಿಗಳು ಲಂಗುಲಗಾಮಿಲ್ಲದೆ ಮಾತನಾಡುತ್ತಿದ್ದಾರೆ. ಹೋರಾಟ ಯಾವುದೇ ರೀತಿಯದ್ದು ಇದ್ದರೂ ಲಕ್ಷ್ಮಣ ರೇಖೆ ದಾಟಬಾರದು. ಮುಖ್ಯಮಂತ್ರಿಯೇ ಆಗಿರಲಿ, ನ್ಯಾಯಮೂರ್ತಿಗಳೇ ಇರಲಿ ಅವರ ಸ್ಥಾನಕ್ಕೆ ಗೌರವ ಕೊಡಬೇಕು. ಮನಬಂದಂತೆ ಮಾತನಾಡಬಾರದು ಎಂದು ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಭ್ರಷ್ಟಾಚಾರದಲ್ಲಿ ಕರ್ನಾಟಕ ಮುಂದೆ ಇದೆ. ವಿಧಾನಸೌಧ ಹಾಗೂ ಮಠಗಳ ಹೊರಗೆ-ಒಳಗೆ ಜಾತಿ, ಭಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಇದು ಕರ್ನಾಟಕದ ಭವಿಷ್ಯಕ್ಕೆ ಗಂಡಾಂತರ ಎಂದು ಎಚ್ಚರಿಸಿದರು.

    ದಿಂಗಾಲೇಸ್ವರ ಸ್ವಾಮೀಜಿ ಪ್ರತಿ ಹೆಜ್ಜೆ ತಪ್ಪುತ್ತಿದ್ದಾರೆ…
    ಕೆಎಲ್‍ಇ ಸಂಸ್ಥೆ ಕೇವಲ ಲಿಂಗಾಯತರ ಸಂಸ್ಥೆ ಅಲ್ಲ. ಎಲ್ಲ ಜಾತಿ ಮತ್ತು ಧರ್ಮದ ಜನತೆಗೆ ಸೇರಿದ್ದು. ಕೆಎಲ್‍ಇ ಸೇವೆ ಅದ್ಭುತವಾಗಿದೆ. ಮೂರುಸಾವಿರ ಮಠದ ಹಿಂದಿನ ಜಗದ್ಗುರುಗಳಾದ ದಿ. ಶ್ರೀ ಗಂಗಾಧರ ಸ್ವಾಮೀಜಿ ಅವರು 35 ವರ್ಷದ ಹಿಂದೆಯೇ ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ ಅವರನ್ನು ಕರೆಯಿಸಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ 24 ಎಕರೆ ಜಮೀನು ನೀಡಿರುವುದಾಗಿ ತಿಳಿಸಿದ್ದರು. ಈ ಕಾಲೇಜು ಆಗಬೇಕೆಂಬುದು ಹಿಂದಿನ ಸ್ವಾಮೀಜಿಗಳ ಕನಸಾಗಿತ್ತು ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.

    ಶ್ರೀ ಗಂಗಾಧರ ಸ್ವಾಮೀಜಿ ಲಿಂಗೈಕ್ಯರಾದ 9 ವರ್ಷಗಳ ನಂತರ ಈ ಜಾಗವನ್ನು ಕೆಎಲ್‍ಇಗೆ ಹಸ್ತಾಂತರಿಸಲಾಯಿತು. ಕಾನೂನಿನ ಸಮರ, ಸರ್ಕಾರದಿಂದ ಸಿಗಬೇಕಾದ ಪರ್ಮಿಷನ್ ಮುಂತಾದ ಕಾರಣಗಳಿಂದಾಗಿ ವಿಳಂಬವಾಯಿತು ಎಂದು ವಿವರಿಸಿದರು.

    ದಿಂಗಾಲೇಸ್ವರ ಸ್ವಾಮೀಜಿ ಪ್ರತಿ ಹೆಜ್ಜೆ ತಪ್ಪುತ್ತಿದ್ದಾರೆ. ಬಾಲೆಹೊಸೂರು ಮಠದ 1.30 ಕೋಟಿ ರೂ. ಅನ್ನು ಮೂರುಸಾವಿರ ಮಠದ ವಿವಾದ ಬಗೆಹರಿಸಲು ಖರ್ಚು ಮಾಡಿದ್ದಾಗಿ ಹೇಳುತ್ತಿದ್ದಾರೆ. ಆ ಮಠದ ಹಣವನ್ನು ಈ ಮಠಕ್ಕೆ ಖರ್ಚು ಮಾಡುವ ಅಧಿಕಾರ ಇವರಿಗೆ ಯಾರಿಗೆ ಕೊಟ್ಟರು? ಎಂದು ಡಾ.ವಿಜಯ ಸಂಕೇಶ್ವರ ಪ್ರಶ್ನಿಸಿದರು.

    ಕೆಎಲ್‍ಇಗೆ ನೀಡಿರುವ 24 ಎಕರೆ ಜಮೀನಿನ ಬೆಲೆ 500 ಕೋಟಿ ರೂ. ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳುತ್ತಿದ್ದಾರೆ. ಹಾಗಿದ್ದರೆ, ಅವರು 100 ಕೋಟಿ ರೂ. ಕೊಟ್ಟರೆ ಅವರಿಗೆ ಅದನ್ನು ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

    ಡಾ.ರಾಜ್​ ಅಪಹರಣ ಪ್ರಕರಣ: ರಾಜ್ಯ ಸರ್ಕಾರ ಮುಚ್ಚಿಹಾಕಿದ್ದ ಸ್ಫೋಟಕ ರಹಸ್ಯ ಬಯಲು

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ

    ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts