More

    ಅಪರೂಪದ ಮೂನ್ ಫಿಶ್ ಪತ್ತೆ; 45 ಕೆಜಿ ತೂಕದ ಮೀನು ಕಂಡು ಬೆರಗಾದ ಜನ

    ವಾಷಿಂಗ್ಟನ್: ಅತ್ಯಂತ ಅಪರೂಪದ ಘಟನೆಯಲ್ಲಿ, ಓಪಾ ಹೆಸರಿನ ದೊಡ್ಡ ಮೀನೊಂದು ಇತ್ತೀಚೆಗೆ ಅಮೆರಿಕದ ಒರೆಗಾನ್​ನಲ್ಲಿ ಪತ್ತೆಯಾಗಿದೆ. ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದ ಮೀನನ್ನು ಕಂಡು ಜನರು ಉತ್ಸುಕರಾಗಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಓಪಾಫಿಶ್​ಗೆ ಮೂನ್​ಫಿಶ್ ಎಂದೂ ಕರೆಯಲಾಗುತ್ತದೆ. ಸುಮಾರು 3.5 ಅಡಿ ಉದ್ದದ ಮೀನು ಕಳೆದ ಬುಧವಾರದಂದು ಸನ್ಸೆಟ್ ಬೀಚ್​ನಲ್ಲಿ ಪತ್ತೆಯಾಗಿದೆ. ಗೋಲ್ಡನ್ ರೆಡ್ ಬಣ್ಣದ ಮೀನಿನಲ್ಲಿ ಮಧ್ಯೆ ಮಧ್ಯೆ ಬೆಳ್ಳಿ ಬಣ್ಣದ ಚುಕ್ಕೆಗಳಿದ್ದು, ನೋವುವವರ ಕಣ್ಣಿಗೆ ಅದ ಸುಂದರವಾದ ಕಲಾಕೃತಿಯಂತೆ ಕಂಡಿದೆ ಎನ್ನಲಾಗಿದೆ.

    ಈ ಮೀನು ‘ಒರೆಗಾನ್ ಕರಾವಳಿಗೆ ಅಪರೂಪ’ ಎಂದು ಕಡಲತೀರದ ಅಕ್ವೇರಿಯಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ. ಅದರ ಹಲವು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆ ಮೀನು 45 ಕೆಜಿ ತೂಕ ಇದ್ದಿದ್ದಾಗಿ ತಿಳಿಸಲಾಗಿದೆ.

    ಓಪಾ ಮೀನು ಯಾವ ಕಾರಣಕ್ಕಾಗಿ ಸಾವನ್ನಪ್ಪಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ಕಡಲತೀರದ ಅಕ್ವೇರಿಯಂನ ಜನರಲ್ ಮ್ಯಾನೇಜರ್ ಕೀತ್ ಚಾಂಡ್ಲರ್ ತಿಳಿಸಿದ್ದಾರೆ. ಮೀನು ತೇಲುತ್ತಾ ದಡ ಸೇರಿದ ಒಂದು ಗಂಟೆಯೊಳಗೆ ಅಧಿಕಾರಿಗಳನ್ನು ಅದನ್ನು ಪತ್ತೆ ಹಚ್ಚಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)

    ಪ್ರಜಾಪ್ರಭುತ್ವಕ್ಕೆ 5ನೇ ಅಂಗ ಸೇರ್ಪಡೆ! ಯಾವುದು ಅದು? ರಾಯರಡ್ಡಿ ಹೇಳ್ತಾರೆ ಕೇಳಿ…

    VIDEO: ಪಾಕ್‌ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಿದ ಎಮ್ಮೆ- ನೀವಿಂಥ ಇಂಟರ್‌ವ್ಯೂ ನೋಡಿರಲಾರಿರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts