More

    ಹಿರಿಯ ಷ.ಬ್ರ. ಮೂಕಪ್ಪಸ್ವಾಮೀಜಿ ಲಿಂಗೈಕ್ಯ

    ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

    ತಾಲೂಕಿನ ಪ್ರಸಿದ್ಧ ಧಾರ್ವಿುಕ ಕ್ಷೇತ್ರ ಗುಡ್ಡದಮಲ್ಲಾಪುರ ದಾಸೋಹಮಠದ ಹಿರಿಯ ಷ.ಬ್ರ. ಮೂಕಪ್ಪಸ್ವಾಮಿಗಳು ಗುರುವಾರ ಬೆಳಗ್ಗೆ ಲಿಂಗೈಕ್ಯರಾದರು.

    ಕಳೆದ ನಾಲ್ಕು ವರ್ಷಗಳ ಹಿಂದೆ ಸೊರಬ ತಾಲೂಕು ಬೆಟ್ಟದ ಕೂರ್ಲಿ ಗ್ರಾಮದಲ್ಲಿ ಪುನರ್​ಜನ್ಮ ತಾಳಿದ್ದ ಶ್ರೀಗಳು 2017ರಲ್ಲಿ ಮಠಕ್ಕೆ ಉತ್ತರಾಧಿಕಾರಿಗಳಾಗಿ ಪಟ್ಟಾಧಿಕಾರ ಹೊಂದಿದ್ದರು. ಅಂದು ಶ್ರೀಶೈಲದ 1008 ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಸೇರಿ ಹಲವು ಹರಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ಜರುಗಿದ್ದವು.

    ಹಿರಿಯ ಷ.ಬ್ರ. ಮೂಕಪ್ಪಸ್ವಾಮಿಗಳು 4 ವರ್ಷಗಳಲ್ಲಿ ಶ್ರೀಶೈಲ, ಕೇರಳ ಸೇರಿ ನಾಡಿನ ಎಲ್ಲ ಜಿಲ್ಲೆಗಳ ಭಕ್ತರ ಮನೆಗಳಿಗೆ ತೆರಳಿ ಆಶೀರ್ವಾದ ನೀಡಿದ್ದರು. ಶ್ರೀಗಳ ಅವಧಿಯಲ್ಲಿ ಹಲವಾರು ಧಾರ್ವಿುಕ ಜಾಗೃತಿ ಕಾರ್ಯಕ್ರಮ ನಡೆದಿವೆ. ಕ್ಷೇತ್ರದಲ್ಲಿ ದೊಡ್ಡಮಟ್ಟದ ಅನ್ನದಾಸೋಹ ಕಟ್ಟಡ ಕಟ್ಟಲು ಶ್ರೀಗಳು ಭೂಮಿ ಪೂಜೆ ನೆರವೇರಿಸುವ ಮೂಲಕ ಮಹಾದಾಸೋಹಕ್ಕೆ ಚಾಲನೆ ನೀಡಿದ್ದರು.

    ಸಕಲ ಸಿದ್ಧತೆ: ಲಿಂಗೈಕ್ಯ ಹಿರಿಯ ಮೂಕಪ್ಪ ಶ್ರೀಗಳ ಅಂತ್ಯ ಸಂಸ್ಕಾರ ಮಾ. 20ರಂದು ಮಧ್ಯಾಹ್ನ 12 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಜರುಗಲಿವೆ. ಶ್ರೀಗಳ ಅಂತ್ಯಸಂಸ್ಕಾರವನ್ನು ಮಠದ ಆವರಣದಲ್ಲಿ ಮಾಡಲು ಮಠದ ಧರ್ವಧಿಕಾರಿಗಳು ನಿರ್ಧರಿಸಿದ್ದಾರೆ. ನಾಡಿನ ಮೂಲೆಮೂಲೆಗಳಿಂದ ಭಕ್ತರು ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದು, ಮಠದಲ್ಲಿ ಭಕ್ತರಿಗೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಮುಂಜಾಗ್ರತವಾಗಿ ಪೊಲೀಸ್ ಇಲಾಖೆ ಎಲ್ಲ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

    ಹಿರಿಯ ಶ್ರೀಗಳು ಲಿಂಗೈಕ್ಯರಾಗಿದ್ದರಿಂದ ಮಠದ ಭಕ್ತವೃಂದ ದುಃಖದ ಮುಡುವಿನಲ್ಲಿದೆ. ನಾಡಿನಾದ್ಯಂತ ಕರೊನಾ ವೈರಸ್ ಹರಡುವುದನ್ನು ತಪ್ಪಿಸಲು ಮಠ ಮುಂಜಾಗ್ರತೆ ವಹಿಸಿದೆ. ಭಕ್ತರು ಆದಷ್ಟು ಆರೋಗ್ಯದ ಕಾಳಜಿಯೊಂದಿಗೆ ಆಗಮಿಸಿ ಶ್ರೀಗಳ ಅಂತಿಮ ದರ್ಶನಕ್ಕೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಭಕ್ತರು ಗೊಂದಲ ಉಂಟುಮಾಡಿಕೊಳ್ಳದೆ, ಧಾರ್ವಿುಕ ಪದ್ಧತಿಗಳನ್ನು ಪಾಲಿಸಬೇಕಿದೆ.

    | ವೇ. ಮೃತ್ಯುಂಜಯಸ್ವಾಮಿ ದಾಸೋಹಮಠ, ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts