More

    ಮಕ್ಕಳಲ್ಲಿ ಮೂಡಲಿ ವೈಜ್ಞಾನಿಕ ತಂತ್ರಜ್ಞಾನದ ಅರಿವು

    ಉಪ್ಪಿನಬೆಟಗೇರಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು, ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಧಾರವಾಡ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕಿ ಮೌಲ್ಯ ಎಚ್.ವೈ. ಹೇಳಿದರು.

    ಸಮೀಪದ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ವತಿಯಿಂದ ನಾಲ್ಕು ದಿನಗಳ ಕಾಲ ಜರುಗಿದ ದಸರಾ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಬಿರದಲ್ಲಿ ಪ್ರತಿದಿನ ವಿಭಿನ್ನ ಚಟುವಟಿಕೆಗಳನ್ನು ಮಾಡುವ ಮೂಲಕ ಕಲಿಕೆಯಲ್ಲಿ ತೊಡಗಿಸುವುದು, ಕಸದಿಂದ ರಸ ತೆಗೆಯುವುದು, ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗ ಮಾಡಿಸುವ ಮೂಲಕ ಮಕ್ಕಳಿಗೆ ವೈಜ್ಞಾನಿಕ ತಂತ್ರಜ್ಞಾನದ ಅರಿವು ಮೂಡಿಸಲಾಯಿತು.

    ಶಾಲೆಯ 100 ವಿದ್ಯಾರ್ಥಿಗಳು ದಸರಾ ಶಿಬಿರದ ಲಾಭ ಪಡೆದರು. ಶಾಲೆಯ ಎಸ್​ಡಿಎಂಸಿ ಸದಸ್ಯ ಮಂಜುನಾಥ ಮುದಕಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಮಕ್ತುಂಹುಸೇನ ಖಾಜೆನವರ, ಲಲಿತಾ ಬಸಿಡೋಣಿ, ಶ್ರೀದೇವಿ ಕೋಟೂರ, ವಿರೂಪಾಕ್ಷಪ್ಪ ಕೋಟೂರ, ಗೌರಮ್ಮ ಅಮರಗೋಳ, ಉಮಾ ಜಾಲಿಕೊಪ್ಪ, ಯಲ್ಲಪ್ಪ ಗಾಣಿಗೇರ, ಪ್ರಿಯಾಂಕಾ ಚಿಟ್ಟಿ, ಪ್ರೇಮಾ ಮೇಟಿ, ಪ್ರತಿಭಾ ದುಲಾರೆ ಹಾಗೂ ಪ್ರೇಮಾ ತಿಮ್ಮಾಪೂರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts