More

    ಶಾಲಾ ಮಕ್ಕಳಿಗೆ ತಿಂಗಳಲ್ಲಿ ಒಂದು ದಿವಸ ಬ್ಯಾಗ್​ ಇಲ್ಲ; ಆ ದಿನ ಪೂರ್ತಿ ಶಾಲೆಯಲ್ಲಿ ಸಂಭ್ರಮ!

    ಬೆಂಗಳೂರು: ಶಾಲಾ ಮಕ್ಕಳು ಖುಷಿ ಪಡುವಂತಹ ಆದೇಶವೊಂದು ಹೊರ ಬಿದ್ದಿದ್ದು, ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್ ರಹಿತ ದಿನ (ಸಂಭ್ರಮ ಶನಿವಾರ) ಆಚರಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ‘ಸಂಭ್ರಮ ಶನಿವಾರ’ ಆಚರಿಸುವ ಸಂಬಂಧ ವಿದ್ಯಾರ್ಥಿ ಚಟುವಟಿಕೆ ಪುಸ್ತಕಗಳು ಹಾಗೂ ಶಿಕ್ಷಕರ ಕೈಪಿಡಿಗಳನ್ನು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಸಾಮಗ್ರಿಗಳನ್ನು ಬಳಸಿಕೊಳ್ಳುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

    ಬ್ಯಾಗ್ ರಹಿತ ದಿನದಂದು ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆ ಬೆಳೆಸುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳಿಗೆ ವಿವಿಧ ೧೦ ವಿಷಯಗಳಲ್ಲಿ ಸ್ವಯಂ ವಿವರಣಾತ್ಮಕ ಚಿತ್ರಸಹಿತ ಚಟುವಟಿಕೆಗಳ ಪುಸ್ತಕಗಳನ್ನು ಹಾಗೂ ಅವುಗಳನ್ನು ತರಗತಿಗಳಲ್ಲಿ ನಿರ್ವಹಿಸಲು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿ ಸಿದ್ಧಗೊಳಿಸಲಾಗಿದೆ.

    ಈಗಾಗಲೇ ‘ಕಲಿಕಾ ಚೇತರಿಕೆ’ ಯೋಜನೆಯಡಿ ವಿದ್ಯಾರ್ಥಿಗಳಲ್ಲಿ ಅನ್ವಯಿಕ ಕಲಿಕಾ ಮನೋಭಾವ ಪ್ರೋತ್ಸಾಹಿಸುವಂತೆ ಕಲಿಕಾ ಹಾಳೆಗಳಲ್ಲಿ ಚಟುವಟಿಕೆಗಳನ್ನು ನೀಡಲಾಗಿದೆ. ಈ ಕಲಿಕಾ ಹಾಳೆಗಳಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿ ‘ಸಂಭ್ರಮ ಶನಿವಾರ’ ಚಟುವಟಿಕಾ ಪುಸ್ತಕಗಳನ್ನು ರೂಪಿಸಲಾಗಿದೆ. ಇದರಿಂದ ಪ್ರತಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್​ರಹಿತ ದಿನ ಆಚರಿಸುವುದಾಗಿದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಮಾಸಿಕ ಸಮಾಲೋಚನಾ ಸಭೆಗಳು ನಡೆಯುವ ದಿನಗಳಂದು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ‘ಸಂಭ್ರಮ ಶನಿವಾರ’ ಆಚರಿಸಬಹುದು ಎಂದು ಸಲಹೆ ನೀಡಲಾಗಿದೆ.

    ಹಳೆಯ ಯೋಜನೆ ಈಗ ಅನುಷ್ಠಾನ: ಶಾಲಾ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂಬ ಉದ್ದೇಶದಿಂದ ತಿಂಗಳಲ್ಲಿ ಒಂದು ದಿನ ಬ್ಯಾಗ್ ರಹಿತ ದಿನ ಆಚರಿಸುವ ಸಂಬಂಧ 2019ರಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತು. ಕರೊನಾ ಕಾರಣದಿಂದ ಎರಡು ವರ್ಷ ಯೋಜನೆ ಅನುಷ್ಠಾನ ಮಾಡಿರಲಿಲ್ಲ. ಇದೀಗ, ಯೋಜನೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

    2022-23ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ವಿವರ..

    ಕೆಎಂಎಫ್​ ರಾಯಭಾರಿ ಆಗಿದ್ದ ಪುನೀತ್​ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts