More

    ಮುಂಗಾರು ಬಿತ್ತನೆಗೆ ರೈತರ ಸಿದ್ಧತೆ- ಅಳವಂಡಿ ವಲಯದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

    ಅಳವಂಡಿ: ಮುಂಗಾರು ಪೂರ್ವ ಮಳೆ ಆಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಭಾಗದಲ್ಲಿ ಮುಂಗಾರು ಹಂಗಾಮು ಬಿತ್ತನೆಗೆ ಯೋಗ್ಯವಾದ ಕೆಂಪು ಭೂಮಿ ಹಾಗೂ ಹಿಂಗಾರು ಹಂಗಾಮಿಗೆ ಯರಿಭೂಮಿ ಸಾಕಷ್ಟು ಇದೆ.

    ಇದನ್ನೂ ಓದಿ: ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ

    ಬೆಳಗಟ್ಟಿ, ಹಟ್ಟಿ, ಹೈದರನಗರ, ಕೇಸಲಾಪುರ, ಹಲವಾಗಲಿ, ನಿಲೋಗಿಪುರ, ಬೋಚನಹಳ್ಳಿ ಗ್ರಾಮಗಳು ಮಸಾರಿ (ಕೆಂಪು) ಭೂಮಿ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ ಹೆಸರು, ಸೂರ್ಯಕಾಂತಿ, ಮೆಕ್ಕಜೋಳ, ಸಜ್ಜೆ, ಎಳ್ಳು, ತೊಗರಿ, ಶೇಂಗಾ ಬೆಳೆಯುತ್ತಾರೆ. ಬೆಟಗೇರಿ, ಅಳವಂಡಿ, ಕವಲೂರು, ಘಟ್ಟಿರಡ್ಡಿಹಾಳ, ಮುರ್ಲಾಪುರ, ಹಂದ್ರಾಳ, ಕಂಪ್ಲಿ, ಮೋರನಾಳ ಗ್ರಾಮಗಳು ಕಪ್ಪು (ಯರಿ) ಹಾಗೂ ಮಸಾರಿ ಭೂಮಿ ಹೊಂದಿದ್ದು, ಸದ್ಯ ಕೆಲವೆಡೆ ಹೆಸರು ಬಿತ್ತನೆಗೆ ತಯಾರಿ ನಡೆದಿದೆ.

    ಅಳವಂಡಿ ವಲಯದ 10 ಗ್ರಾಪಂ ವ್ಯಾಪ್ತಿಯ 37 ಹಳ್ಳಿಗಳಲ್ಲಿ ಒಟ್ಟು ಭೌಗೋಳಿಕ ಕ್ಷೇತ್ರ 1,21,577.5 ಎಕರೆ ಇದೆ. ಇದರಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಕ್ಷೇತ್ರ 17,345 ಎಕರೆ ಹಾಗೂ ಸಾಗುವಳಿಗೆ 1,04,233 ಎಕರೆ ಯೋಗ್ಯವಾಗಿದೆ. ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಸೇರಿ ಇತರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಮುಂಗಾರು ಬಿತ್ತನೆಗೆ ರೈತರ ಸಿದ್ಧತೆ- ಅಳವಂಡಿ ವಲಯದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

    ಮುಂಗಾರು ಪೂರ್ವ ಮಳೆಯಿಂದ ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳಲಾಗುತ್ತಿದೆ. ಹದಗೊಂಡ ಜಮೀನು ತೇವಾಂಶ ಹಿಡಿದಿಟ್ಟುಕೊಳ್ಳುವುದರಿಂದ ಬಿತ್ತನೆಗೆ ಅನೂಕೂಲವಾಗಲಿದೆ.
    | ಹನುಮಂತ ಮೂಲಿಮನಿ, ರೈತ, ಅಳವಂಡಿ

    ಮುಂಗಾರು ಬಿತ್ತನೆಗೆ ರೈತರ ಸಿದ್ಧತೆ- ಅಳವಂಡಿ ವಲಯದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

    ಕಳೆದ ಕೆಲ ದಿನಗಳಿಂದ ಅಳವಂಡಿ ವಲಯದಲ್ಲಿ ಮಳೆಯಾಗುತ್ತಿರವುದರಿಂದ ರೈತರು ಜಮೀನನ್ನು ಮುಂಗಾರು ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಅಲಸಂದಿ ಬಿತ್ತನೆ ಮಾಡುತ್ತಾರೆ.
    | ಪ್ರತಾಪಗೌಡ ನಂದನಗೌಡ, ಕೃಷಿ ಅಧಿಕಾರಿ, ಆರ್‌ಎಸ್‌ಕೆ, ಅಳವಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts