More

    1 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಕಸಿದು ಮರವೇರಿದ ಕೋತಿ; ಮುಂದೇನಾಯ್ತು? ಈ ಸುದ್ದಿ ಓದಿ

    ಉತ್ತರಪ್ರದೇಶ: ಉತ್ತರಪ್ರದೇಶದ ರಾಂಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕಿನ ಹ್ಯಾಂಡಲ್​ಗೆ 1 ಲಕ್ಷ ರೂ. ಹಣವಿದ್ದ ಬ್ಯಾಗನ್ನು ನೇತುಹಾಕಿದ್ದರು. ಈ ವೇಳೆ ಆಹಾರ ಅರಸಿ ಬಂದ ಕೋತಿ, ಬ್ಯಾಗನ್ನು ಕಸಿದು ಮರ ಹತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಇದನ್ನೂ ಓದಿ: ಆನ್​ಲೈನ್​​ ಕ್ಲಾಸ್​ನಲ್ಲಿ ಅಶ್ಲೀಲ ವರ್ತನೆ: ಯೂಟ್ಯೂಬ್​ ವೀಕ್ಷಣೆಗಾಗಿ ಕೀಳುಮಟ್ಟಕ್ಕಿಳಿದ ಇತಿಹಾಸ ಶಿಕ್ಷಕಿ!?
    ಘಟನೆಯ ವಿವರ: ಆಹಾರವನ್ನು ಅರಸಿ ನಾಡಿನತ್ತ ಬರುತ್ತಿರುವ ಪ್ರಾಣಿಗಳ ಪೈಕಿ ಮಂಗಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಸದ್ಯ ಇದೇ ರೀತಿಯ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದ್ದು, ತನ್ನ ವೈಯಕ್ತಿಕ ಕೆಲಸದ ಮೇರೆಗೆ ಶಹಾಬಾದಿನಲ್ಲಿರುವ ನೋಂದಣಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಮೋಟಾರ್ ಸೈಕಲ್‌ಗೆ 1 ಲಕ್ಷ ರೂ. ಹಣವಿದ್ದ ಬ್ಯಾಗನ್ನು ನೇತುಹಾಕಿದ್ದರು. ಈ ವೇಳೆ ಆಹಾರವನ್ನು ಹುಡುಕಿಕೊಂಡು ಬಂದ ಕೋತಿ ನಗದು ಇದ್ದ ಬ್ಯಾಗನ್ನು ಹೊತ್ತು ಮರ ಏರಿದೆ.

    1 ಲಕ್ಷ ರೂ. ನಗದು ಇರುವ ಬ್ಯಾಗನ್ನು ಮಂಗ ಹೊತ್ತೊಯ್ದ ದೃಶ್ಯ ಸ್ಥಳದಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲಸ ಮುಗಿಸಿಕೊಂಡು ಬೈಕ್ ನೋಡಿದ ಶರಾಫತ್ ಹುಸೇನ್, ತಮ್ಮ 1 ಲಕ್ಷ ರೂ. ಹಣವಿದ್ದ ಬ್ಯಾಗ್​​ ಕಳ್ಳತನವಾಗಿದೆ ಎಂದು ಗಾಬರಿಗೊಂಡು ಚಿರಾಡಿದ್ದಾರೆ. ಕೂಡಲೇ ಸುತ್ತಮುತ್ತಲಿದ್ದ ಸ್ಥಳೀಯರು ಬಂದು ಪರಿಶೀಲನೆ ನಡೆಸಿ, ಮಂಗವನ್ನು ಪತ್ತೆಹಚ್ಚಲು ಹುಡುಕಾಟ ನಡೆಸಿದ್ದಾರೆ.

    ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ವಂದೇ ಭಾರತ್ ರೈಲು ಟಿಕೆಟ್​ ದರ ಶೀಘ್ರದಲ್ಲೇ ಇಳಿಕೆ

    ಕೆಲ ಸಮಯದ ನಂತರ ಶರಾಫತ್ ಹುಸೇನ್ ಅವರ ಬ್ಯಾಗ್​ ತೆರೆದು ಮರದ ಮೇಲೆ ಕುಳಿತ್ತಿದ್ದ ಕೋತಿಯನ್ನು ಪತ್ತೆಹಚ್ಚಿದ ಸ್ಥಳೀಯರು, ಬ್ಯಾಗ್​​ ಅನ್ನು ಹಿಂಪಡೆಯಲು ಹರಸಾಹಸ ಪಟ್ಟಿದ್ದಾರೆ. ಮಂಗ ಹಣವಿದ್ದ ಬ್ಯಾಗನ್ನು ಕೈಬಿಟ್ಟು ಹೋಗಿದ್ದೇ ತಡ, ಬ್ಯಾಗನ್ನು ಎತ್ತಿಕೊಂಡು ನಿಟ್ಟುಸಿರು ಬಿಟ್ಟ ಶರಾಫತ್, ಸಹಾಯ ಮಾಡಿದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts