More

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಬೆಂಗಳೂರು: ಸೇಫ್​ ಆಗಿರಲಿ ಎಂದು ಹಣ-ಆಭರಣ, ಮಹತ್ವದ ದಾಖಲೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್​ ಲಾಕರ್​ನಲ್ಲಿ ಕೆಲವರು ಇಡುತ್ತಾರೆ. ಆದರೆ ಹಾಗಿಟ್ಟ ಹಣ ಕೂಡ ಈಗ ಅಲ್ಲಿ ಸೇಫ್​ ಅಲ್ಲ ಎನ್ನುವಂಥ ಪ್ರಕರಣವೊಂದು ಜರುಗಿದೆ. ಸೇಫ್​ ಆಗಿರಲಿ ಎಂದು ಶುಲ್ಕ ಕಟ್ಟಿ ಲಾಕರ್​ನಲ್ಲಿಟ್ಟ ಹಣವೂ ಇಲ್ಲದಂತಾಗಿರುವುದು ಗ್ರಾಹಕರೊಬ್ಬರನ್ನು ನಷ್ಟಕ್ಕೆ ಒಳಗಾಗಿಸಿದ್ದಷ್ಟೇ ಅಲ್ಲ, ಬೇರೆ ಗ್ರಾಹಕರೂ ಹಣವನ್ನು ಬ್ಯಾಂಕ್​ ಲಾಕರ್​ನಲ್ಲಿ ಇಡುವ ಮುಂಚೆ ಒಮ್ಮೆ ಯೋಚನೆ ಮಾಡುವಂತಾಗಿದೆ.

    ಬ್ಯಾಂಕ್​ವೊಂದರ ಗ್ರಾಹಕರೊಬ್ಬರು 2.2 ಲಕ್ಷ ರೂಪಾಯಿಯನ್ನು ಬ್ಯಾಂಕ್​ ಲಾಕರ್​ನಲ್ಲಿ ಇಟ್ಟು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಏಕೆಂದರೆ ಅವರಿಗೆ ನಷ್ಟವಾದ ಹಣಕ್ಕೆ ಬ್ಯಾಂಕ್​ ಅಧಿಕಾರಿಗಳು ತಾವು ಜವಾಬ್ದಾರರಲ್ಲ ಎಂದು ಹೇಳಿದ್ದರೆ, ರಿಸರ್ವ್ ಬ್ಯಾಂಕ್​ ನಿಯಮಗಳು ಕೂಡ ಅವರ ಹೇಳಿಕೆಗೆ ಪೂರಕವಾಗಿಯೇ ಇದೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಗುಜರಾತ್​ನ ವಡೋದರದಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಅಲ್ಲಿನ ಬ್ಯಾಂಕ್​ನ ಲಾಕರ್ ನಂಬರ್ 252ನಲ್ಲಿ ಗ್ರಾಹಕರೊಬ್ಬರು 2.2 ಲಕ್ಷ ರೂಪಾಯಿ ಇಟ್ಟಿದ್ದರು. ಆದರೆ ಕೆಲ ದಿನಗಳ ಬಳಿಕ ಹೋಗಿ ಲಾಕರ್ ತೆರೆದಾಗ ಅಲ್ಲಿದ್ದ ಹಣಕ್ಕೆ ಗೆದ್ದಲು ಹಿಡಿದಿದ್ದು, ನೋಟುಗಳೆಲ್ಲ ಛಿದ್ರವಾಗಿದ್ದವು. ಅದನ್ನು ನೋಡಿ ಆಘಾತಗೊಂಡ ಗ್ರಾಹಕ ಬ್ಯಾಂಕ್​ನವರನ್ನು ಪ್ರಶ್ನಿಸಿದರೂ ನ್ಯಾಯ ಸಿಗಲಿಲ್ಲ. ಜತೆಗೆ ಬ್ಯಾಂಕ್​ ಆಫ್​ ಬರೋಡದ ಭದ್ರತಾ ವ್ಯವಸ್ಥೆ ಬಗ್ಗೆಯೇ ಹಲವಾರು ಅನುಮಾನಗಳು ವ್ಯಕ್ತವಾಗಿವೆ.

    ಇದನ್ನೂ ಓದಿ: ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

    ಮತ್ತೊಂದೆಡೆ ಭಾರತೀಯ ರಿಸರ್ವ್ ಬ್ಯಾಂಕ್​ ನಿಯಮ ಕೂಡ ಇಂಥ ಸಂದರ್ಭದಲ್ಲಿ ಗ್ರಾಹಕರಿಗೆ ಅನನುಕೂಲವಾಗುವಂತೆಯೇ ಇದೆ. ಆರ್​ಬಿಐ ನಿಯಮಗಳ ಪ್ರಕಾರ ಲಾಕರ್​ನಲ್ಲಿಟ್ಟ ಹಣ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳ ನಷ್ಟ ಇಲ್ಲವೇ ಕಳವು ಇತ್ಯಾದಿಗೆ ಬ್ಯಾಂಕ್ ಹೊಣೆಯಲ್ಲ ಎಂಬುದಾಗಿ ಇದೆ. ಅದರಲ್ಲೂ ಈ ಪ್ರಕರಣದಲ್ಲಿ ಹಣವನ್ನು ಗೆದ್ದಲು ತಿಂದಿರುವುದರಿಂದ ಅದಕ್ಕೆ ಬ್ಯಾಂಕ್ ಜವಾಬ್ದಾರಿಯಲ್ಲ ಎಂಬ ಉತ್ತರ ಸಿಕ್ಕಿದ್ದು, ಹಣ ಕಳೆದುಕೊಂಡಿರುವ ಗ್ರಾಹಕ ದಿಕ್ಕುತೋಚದಂತಾಗಿದ್ದಾರೆ. (ಏಜೆನ್ಸೀಸ್)

    ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts