More

    ಜಿಲ್ಲಾಡಳಿತ ಆದೇಶಕ್ಕೆ ಕಿಮ್ಮತ್ತು ಕೊಡದ ಜನ

    ಕೆಂಭಾವಿ : ಲಾಕ್ಡೌನ್ ನಡುವೆಯೂ ಸೋಮವಾರ ಪಟ್ಟಣದಲ್ಲಿ ಜನತೆ ಜಿಲ್ಲಾಡಳಿತದ ಆದೇಶಕ್ಕೆ ಕಿಮ್ಮತ್ತು ಕೊಡದೆ ಸಂತೆಯಲ್ಲಿ ಸೇರಿದ ಘಟನೆ ನಡೆಯಿತು.

    ಲಾಕ್ಡೌನ್ ನಿಯಮ ವಿಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿ ಸಭೆ, ಸಮಾರಂಭ, ವಾರದ ಸಂತೆ ಸೇರಿ ಸಾರ್ವಜನಿಕರು ಸೇರುವ ಎಲ್ಲ ಕಾರ್ಯಕ್ರಮ ನಿಷೇಧಿಸಿ ಆದೇಶ ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

    ಕೆಂಭಾವಿ ಪುರಸಭೆ ಜಿಲ್ಲಾಧಿಕಾರಿಗಳ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದಕ್ಕೆ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ಬೆಳಗ್ಗೆ 8ಕ್ಕೆ ಮೊದಲು ಸಂಜೀವನಗರ ಬಡಾವಣೆಯಲ್ಲಿ ಜಮಾವಣೆಗೊಂಡ ಸಂತೆ ವ್ಯಾಪಾರಸ್ಥರು ಪರಸ್ಪರ ಅಂತರ ಕಾಯ್ದುಕೊಳ್ಳದೆ ಸಂತೆ ವ್ಯಾಪಾರ ನಡೆಸುತ್ತಿದ್ದು, ಇದನ್ನು ನೋಡಿದರೂ ನಿಸ್ಸಾಹಾಯಕರಾಗಿ ತಮ್ಮ ಸಂತೆ ಚೀಲಗಳನ್ನು ತುಂಬಿಸಿಕೊಳ್ಳುವಲ್ಲಿ ಮಾತ್ರ ಪುರಸಭೆ ಸಿಬ್ಬಂದಿ ಮಗ್ನರಾಗಿದ್ದರು.

    ನಂತರ ಆಗಮಿಸಿದ ಎಎಸ್ಐ ಬಲರಾಮ ಚವ್ಹಾಣ್ ನೇತೃತ್ವದ ಪೊಲೀಸ್ ತಂಡ ತಮ್ಮ ಲಾಠಿ ರುಚಿ ತೋರಿಸುತ್ತಿದ್ದಂತೆ ವ್ಯಾಪಾರಿಗಳು ಮತ್ತು ಜನತೆ ಅಲ್ಲಿಂದ ಕಾಲ್ಕಿತ್ತಿದರು. ಮತ್ತೆ 11ನಂತರ ಹಳೇ ಬಸ್ ನಿಲ್ದಾಣ ಪ್ರದೇಶಗಳಲ್ಲಿ ಸೇರಿದ ವ್ಯಾಪಾರಸ್ಥರು ತಮ್ಮ ಮನಸೋ ಇಚ್ಛೆ ವ್ಯಾಪಾರ ನಡೆಸಿದರು. ಕರೊನಾ ಭೀತಿಯ ನಡುವೆಯೂ ಜನತೆ ಜಿಲ್ಲಾಡಳಿತದ ಆದೇಶಕ್ಕೂ ಕೇರ್ ಮಾಡದೆ ಸಂತೆ ಮಾಡಿದ್ದು ಪ್ರಜ್ಞಾವಂತ ನಾಗರಿಕರ ನಿದ್ದೆಗೆಡಿಸಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts