More

    ಉತ್ತಮ ನಾಯಕನಿಗೆ ಮತ ಚಲಾಯಿಸಿ

    ಮೊಳಕಾಲ್ಮೂರು: ಪ್ರಜಾತಂತ್ರ ವ್ಯವಸ್ಥೆ ಸದೃಢಗೊಳಿಸಲು 18 ವರ್ಷ ತುಂಬಿದ ಯುವಕ ಯುವತಿಯರು ಕಡ್ಡಾಯವಾಗಿ ಮತದಾನದ ಹಕ್ಕು ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಎಂ. ಬಸವರಾಜ್ ಮನವಿ ಮಾಡಿದರು.

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮತದಾನ ಜಾಗೃತಿ ಅಭಿಯಾನದಡಿ ಹಮ್ಮಿಕೊಂಡಿದ್ದ 18 ವರ್ಷ ತುಂಬಿದವರ ಮಿಂಚಿನ ನೋಂದಣಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಹೊಸದಾಗಿ ಮತದಾನದ ಹಕ್ಕು ಪಡೆದುಕೊಳ್ಳುವ ಮತದಾರರು, ಚುನಾವಣೆ ವೇಳೆ ಯಾವುದೇ ರೀತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ನಾಯಕನಿಗೆ ಮತ ಚಲಾಯಿಸಬೇಕು ಎಂದು ತಿಳಿಸಿದರು.

    ಉಪ ತಹಸೀಲ್ದಾರ್ ಜಿ. ಮಹಾಂತೇಶ್ ಮಾತನಾಡಿ, ದೇಶದ ಸಾರ್ವಭೌಮತ್ವ ಕಾಪಾಡಲು, ಸಂವಿಧಾನದ ಆಶಯ ಎತ್ತಿ ಹಿಡಿಯಲು ಮತದಾನದ ಹಕ್ಕು ಅತ್ಯಗತ್ಯ. ಉದಾಸೀನ ಮಾಡದೆ ಅರ್ಹರು ತಪ್ಪದೆ ಹೆಸರು ನೋಂದಣಿ ಮಾಡಿಸಿ ಮತದಾನದ ಹಕ್ಕು ಪಡೆದುಕೊಳ್ಳಬೇಕು ಎಂದರು.

    ಕಂದಾಯ ಅಧಿಕಾರಿ ಪ್ರಾಣೇಶ್, ಉಪನ್ಯಾಸಕರಾದ ಕೆ.ವಿ. ಪ್ರಜ್ಞಾ, ಪ್ರೊ. ಲಲಿತಾ, ಗ್ರಂಥಪಾಲಕ ವಿಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts