More

    ಕಾನೂನು ಅರಿತರೆ ಹಣ, ಸಮಯ ಉಳಿವು

    ಮೊಳಕಾಲ್ಮೂರು: 732 ವಿವಿಧ ಪ್ರಕರಣಗಳ ಪೈಕಿ 689 ಕೇಸ್‌ಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ ಪಾರ್ಟಿದಾರರಿಂದ 7.33 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ತಿಳಿಸಿದರು.

    ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮದಡಿ ರಾಜಿ ಸಂಧಾನಕ್ಕೆ ಒಳಪಡುವ ಜೀವನಾಂಶ, ಸಿವಿಲ್ ವ್ಯಾಜ್ಯ, ಚಕ್‌ಬೌನ್ಸ್, ಜನನ ಮತ್ತು ಮರಣ ಇತ್ಯಾದಿ ಪ್ರಕರಣಗಳ ಉಭಯ ಪಕ್ಷಗಾರರ ಸಕ್ಷಮದಲ್ಲಿ ಪರಸ್ಪರರ ಒಪ್ಪಿಗೆ ಮೇರೆಗೆ ನ್ಯಾಯ ಒದಗಿಸಲಾಗಿದೆ ಎಂದರು.

    ಕಾನೂನಾತ್ಮಕ ಕಾಯ್ದೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದರಿಂದ ಅಪರಾಧ ಪ್ರಮಾಣ ಕಡಿಯಾಗುತ್ತದೆ. ದ್ವೇಷ, ಅಸೂಯೆ ದೂರಾಗಿ ಹಣ, ಸಮಯದ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

    ವಕೀಲರು ಕಕ್ಷಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮೇಲಿನ ನಂಬಿಕೆ ಗಟ್ಟಿಗೊಳಿಸಿದ್ದರಿಂದ ನೂರಾರು ಪ್ರಕರಣಗಳು ಇತ್ಯರ್ಥವಾಗಲು ಸಾಧ್ಯವಾಗಿದೆ. ಮುಂದಿನ ಜನತಾ ಕೋರ್ಟ್ ಏ.11ರಂದು ನಡೆಯಲಿದೆ ಎಂದು ತಿಳಿಸಿದರು.

    ವಕೀಲರ ಸಂಘದ ಅಧ್ಯಕ್ಷ ಪಿ ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ವಕೀಲರಾದ ಕೆ.ಆನಂದ್, ಎಚ್.ಬಾಬು, ಚಾಣಕ್ಯ, ಕೆ. ವಿನೋದಾ, ಎಂ.ಅನುಸೂಯಾ, ಸಿ.ಚಂದ್ರಶೇಖರ, ಅನಂತಮೂರ್ತಿ, ಕೆ.ಎಂ.ರಾಮಾಂಜಿನಿ, ಸುರೇಶ್, ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts