More

    ನಾಡ ಹಬ್ಬ ಆಚರಣೆಗೆ ಸಹಕಾರ ಅವಶ್ಯ

    ಮೊಳಕಾಲ್ಮೂರು: ತಾಲೂಕು ಆಡಳಿತದಿಂದ ಜ.26ರಂದು ಆಯೋಜಿಸಿರುವ ಗಣರಾಜ್ಯೋತ್ಸವದಲ್ಲಿ ಸರ್ವರು ಪಾಲ್ಗೊಂಡು ಐಕ್ಯತೆ ಮೆರೆಯಬೇಕೆಂದು ತಹಸೀಲ್ದಾರ್ ಎಂ.ಬಸವರಾಜ್ ಮನವಿ ಮಾಡಿದರು.

    ತಾಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣರಾಜ್ಯೋತ್ಸವವು ಸಂವಿಧಾನದ ಆಶಯವನ್ನು ಸಾರುವ ಅರ್ಥಪೂರ್ಣ ನಾಡ ಹಬ್ಬವಾಗಿದೆ. ಸ್ವಾತಂತ್ರ ಸಂಗ್ರಾಮದ ಮೂಲಕ ಬಲಿಷ್ಠ ರಾಷ್ಟ್ರವನ್ನು ಕಟ್ಟಿ ಬೆಳೆಸಿದ ನಾಡಿನ ಮಹಾತ್ಮರ ಸ್ಮರಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದರು.

    ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಡಹಬ್ಬಗಳನ್ನು ಸಕಲ ಗೌರವದಿಂದ ನಡೆಸಿಕೊಡುವುದು ತಾಲೂಕು ಆಡಳಿತದ ಕರ್ತವ್ಯ. ಪೂರ್ವಭಾವಿ ಸಭೆ ಮತ್ತು ಕಾರ್ಯಕ್ರಮ ನಡೆಯುವ ದಿನ ಕೆಲ ಅಧಿಕಾರಿಗಳು ಪದೇ ಪದೆ ಗೈರಾಗುತ್ತಿದ್ದು, ಅಂತಹವರಿಗೆ ನೊಟೀಸ್ ನೀಡಿ ಶಿಸ್ತು ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು.

    ಇಒ ಪ್ರಕಾಶ್ ಮಾತನಾಡಿ, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ಕರೆತರಬೇಕು. ಪಟ್ಟಣದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಶಿಕ್ಷಕರು ಎಚ್ಚರ ವಹಿಸಬೇಕು ಸಲಹೆ ನೀಡಿದರು.

    ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ.ಲೋಕೇಶ್, ಓ.ಚಿತ್ತಯ್ಯ, ಬಿಸಿಎಂ ಶೇಖರ್, ಎಂ.ಭಾಗ್ಯಲಕ್ಷ್ಮೀ, ದೇವೇಂದ್ರಪ್ಪ, ಎ.ಕೆ.ಪಾಪಣ್ಣ, ಓಬಣ್ಣ, ನಾಗರಾಜ್, ರಂಗನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts