More

  ಯೋಗಿ ವೇಮನ ಹೆಸರಲ್ಲಿ ಬ್ಯಾಂಕ್ ಸ್ಥಾಪನೆ

  ಮೊಳಕಾಲ್ಮೂರು: ರಡ್ಡಿ ಸಮುದಾಯದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪಟ್ಟಣದಲ್ಲಿ ಯೋಗಿ ವೇಮನ ಹೆಸರಿನಲ್ಲಿ ಬ್ಯಾಂಕ್ ತೆರೆಯಲು ಸ್ಥಿತಿವಂತರು ಮುಂದಾಗಬೇಕೆಂದು ಸಮಾಜದ ತಾಲೂಕು ಕಾರ್ಯದರ್ಶಿ ಸೋಮರಡ್ಡಿ ತಿಳಿಸಿದರು.

  ತಾಲೂಕು ಕಚೇರಿಯಲ್ಲಿ ಮಂಗಳವಾರ ಯೋಗಿ ವೇಮನ ಅವರ 608 ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

  ಸಮಾಜದಲ್ಲಿ ತಾಂಡವವಾಡುತ್ತಿದ್ದ ಅನಿಷ್ಟ ಪದ್ಧತಿಗಳ ನಿರ್ಮೂಲನೆಯಲ್ಲಿ ವೇಮನರ ಕೊಡುಗೆ ಅಪಾರವಾಗಿದೆ. ಯುವ ಸಮುದಾಯ ಅವರ ಆದರ್ಶ ಪಾಲಿಸಬೇಕು ಎಂದರು.

  ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮರಡ್ಡಿ ಮಾತನಾಡಿ, ಸರ್ಕಾರಗಳು ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಇಚ್ಛಾಶಕ್ತಿ ತೋರಬೇಕು ಎಂದರು.

  ತಹಸೀಲ್ದಾರ್ ಎಂ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿರಸ್ತೇದಾರ ಅಂಜಿನಪ್ಪ, ಸಮಾಜದ ಮುಖಂಡರಾದ ನರಸಿಂಹರಡ್ಡಿ, ಕೆ.ಆರ್. ರಾಮರಡ್ಡಿ, ಬಿ. ಶಿವಾರಡ್ಡಿ, ವೆಂಕಟೇಶ್ ರಡ್ಡಿ, ಚಿದಾನಂದರಡ್ಡಿ, ಜಿ.ಪಿ. ಉಮಾಪತಿ, ಕೆ.ಟಿ. ಹನುಮಂತರಡ್ಡಿ, ರಂಗಸ್ವಾಮಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts