More

    ಮೊಳಕಾಲ್ಮೂರಲ್ಲಿ ತುಂಬಿ ಹರಿದ ಹಳ್ಳ ಕೊಳ್ಳ

    ಮೊಳಕಾಲ್ಮೂರು: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.

    ಮೊಳಕಾಲ್ಮೂರು, ರಾಯಾಪುರ, ರಾಂಪುರ, ದೇವಸಮುದ್ರ ಭಾಗದಲ್ಲಿ ಇಡೀ ರಾತ್ರಿ ಹೆಚ್ಚು ಮಳೆಯಾಗಿದೆ. ಹಳ್ಳಗಳು ಹರಿಯುತ್ತಿವೆ. ಹತ್ತಿರದ ಕೆರೆಗಳಿಗೆ ಜೀವ ಕಳೆ ತಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆ ಶೇಂಗಾ ಬಿತ್ತನೆಗೆ ಅಡ್ಡಿಯಾಗಿದೆ.

    ಮೊಳಕಾಲ್ಮೂರಿನ ಕೋನಸಾಗರ ರಸ್ತೆ ಬದಿಯ ಬೇವಿನಮರ ನೆಲಕ್ಕುರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಮೇಗಳ ಕಣಿವೆ ಹತ್ತಿರ ಗುಡ್ಡದ ಬಂಡೆ ಮೇಲೆ ಜಲಪಾತದಂತೆ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಮಳೆ ವರದಿ: ಮೊಳಕಾಲ್ಮೂರು 44.06 ಮಿಮೀ, ರಾಯಾಪುರ 44.04, ಬಿಜಿಕೆರೆ 30.08, ದೇವಸಮುದ್ರ 34.02, ರಾಂಪುರ 32.02 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts