More

    ಸಾಮಾಜಿಕ ಜಾಲತಾಣ ಕಲಿಕೆಗೆ ಅಡ್ಡಿ

    ಮೊಳಕಾಲ್ಮೂರು: ಶಾಲೆಗಳ ವಸ್ತು ಸ್ಥಿತಿ ಮತ್ತು ವಿದ್ಯಾರ್ಥಿಗಳ ಕಲಿಕಾಮಟ್ಟ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ಡಯಟ್ ಉಪನ್ಯಾಸಕರ ತಂಡ ಇಲ್ಲಿನ ಆದರ್ಶ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಚಿತ್ರದುರ್ಗದ ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ನಿರತರಾಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಈಚೆಗೆ ದೊಡ್ಡ ರೋಗವಾಗಿ ಬಾಧಿಸುತ್ತಿದೆ. 10ನೇ ತರಗತಿ ಪರೀಕ್ಷೆ ಮುಂದಿನ ಭವಿಷ್ಯ ರೂಪಿಸುವ ಹಂತ. ಈ ವೇಳೆ ಹೆಚ್ಚು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಉಪನ್ಯಾಸಕ ಬಿ.ವಿ.ತಿಪ್ಪೇಸ್ವಾಮಿ ಮಾತನಾಡಿ, ಶರಣರು, ದಾಸರು, ಸಂತರ ಕೊಡುಗೆಗಳಿಂದ ಭಾರತ ವಿಶ್ವಗುರುವಾಗಿದೆ. ಸಾಹಿತ್ಯ, ಸಂಸ್ಕಾರ ವ್ಯಕ್ತಿತ್ವ ವಿಕಸನಕ್ಕೆ ಆಧಾರವಾಗುತ್ತದೆ ಎಂದರು.

    ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಮಾತನಾಡಿ, ತರಗತಿ ಕೊಠಡಿಗಳಲ್ಲಿ ಶಿಕ್ಷಕರು ಮಕ್ಕಳ ನಡುವೆ ಬೆರೆತು ಬೋಧನೆ ಮಾಡಿದರೆ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು.

    ಪ್ರಭಾರ ಮುಖ್ಯ ಶಿಕ್ಷಕ ಗುರುಸ್ವಾಮಿ, ಶಿಕ್ಷಕರಾದ ನಂದೀಶ್, ಬಸವನಗೌಡ, ರೂಪಾ, ಎಂ.ಅನಿತಾ, ಸುಪ್ರಿಯಾ, ಸೌಮ್ಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts