More

    ದೇಗುಲಕ್ಕೆ ಬಂತು ಭಕ್ತರ ದಂಡು

    ಮೊಳಕಾಲ್ಮೂರು: ತಾಲೂಕಿನ ಇತಿಹಾಸ ಪ್ರಸಿದ್ಧ ನುಂಕೆಮಲೆ ಸಿದ್ದೇಶ್ವರ ಸ್ವಾಮಿ, ಜಟ್ಟಂಗಿ ರಾಮೇಶ್ವರ, ಬ್ರಹ್ಮಗಿರಿ ಬೆಟ್ಟ, ಬಾಂಡ್ರಾವಿ ಆಂಜನೇಯ್ಯಸ್ವಾಮಿ, ಗುರು ರಾಘವೇಂದ್ರ ಮಠದಲ್ಲಿ ಸುರಕ್ಷತಾ ಕ್ರಮ ಪಾಲಿಸಿ ಭಕ್ತರು ದೇವರ ದರ್ಶನ ಪಡೆದರು.

    ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳಿಂದ ದೇಗುಲ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದರು. ಸೋಮವಾರ ದೇಗುಲಗಳ ಬಾಗಿಲು ತೆರೆಯುತ್ತಿದ್ದಂತೆ ಭಕ್ತ ಸಮೂಹ ಬೆಳಗ್ಗೆಯಿಂದಲೇ ಹಣ್ಣು, ಕಾಯಿ, ಹೂವು ಸಮೇತ ಗುಡಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.

    ಮೊಳಕಾಲ್ಮೂರಿನ ವೆಂಕಟರಮಣ, ಪಾಂಡುರಂಗ, ಬಸವೇಶ್ವರ, ಮಾರ್ಕಂಡೇಯ ಸ್ವಾಮಿ, ದುರ್ಗಾಪರಮೇಶ್ವರಿ ಹಾಗೂ ರಾಯಾಪುರ ಮ್ಯಾಸರಹಟ್ಟಿ ಮಾರಿಮಹೇಶ್ವರಿ, ಚಿಕ್ಕುಂತಿ ಕಂಪಳರಂಗ ಸ್ವಾಮಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿ ಭಕ್ತಗಣ ಕಂಡುಬಂದಿತು.

    ದಿನಕ್ಕೆ 25 ಕೆಜಿ ಹೂ ಮಾರಾಟವಾಗುತ್ತಿತ್ತು. ಕರೊನಾ ಕಾರಣಕ್ಕಾಗಿ ಮೂರು ತಿಂಗಳಿಂದ ವ್ಯಾಪಾರ ಇಲ್ಲದೆ ಕಷ್ಟ ಎದುರಾಗಿತ್ತು. ಇಂತಹ ಕಠಿಣ ದಿನಗಳನ್ನು 60 ವರ್ಷಗಳಲ್ಲಿ ಎಂದೂ ಕಂಡಿರಲಿಲ್ಲ. ದೇಗುಲ ತೆರೆದಿದ್ದು ಭಕ್ತರು ಹೂವಿನ ಹಾರಕ್ಕಾಗಿ ಭಾನುವಾರ ಸಂಜೆಯೇ ಮುಂಗಡ ಹಣ ಕೊಟ್ಟಿದ್ದರು. ಸೋಮವಾರವಂತು ವ್ಯಾಪಾರಕ್ಕೆ ಹೊಸ ಜೀವ ಕಳೆ ಬಂತು.
    ತಿಪ್ಪಮ್ಮ ಹೂವಿನ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts