More

    ಆಂಧ್ರ ಗಡಿಯಲ್ಲಿ ಸೋಂಕು ನಿವಾರಕ ಸುರಂಗ ಮಾರ್ಗ

    ಮೊಳಕಾಲ್ಮೂರು: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಆಂಧ್ರ ಗಡಿಯಲ್ಲಿ ನಿರ್ಮಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಸುರಂಗ ಮಾರ್ಗಕ್ಕೆ ಮಂಗಳವಾರ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಲಿದ್ದಾರೆ.

    ಇಲ್ಲಿನ ಯದ್ದಲಬೊಮ್ಮಯ್ಯನಹಟ್ಟಿ ಸಮೀಪದ ಆಂಧ್ರ ಮತ್ತು ಕರ್ನಾಟಕದ ಸಂಪರ್ಕ ರಸ್ತೆಗೆ ಅಡ್ಡಲಾಗಿ ಪಟ್ಟಣ ಪಂಚಾಯಿತಿ 2 ಲಕ್ಷ ರೂ. ವೆಚ್ಚದಲ್ಲಿ ಸೋಂಕು ನಿವಾರಕ ಸುರಂಗ ಮಾರ್ಗ ನಿರ್ಮಿಸಿದೆ. ಇದೇ ಮಾರ್ಗದಲ್ಲಿ ಆಂಧ್ರದಿಂದ ಬರುವ ಹಣ್ಣು, ತರಕಾರಿ ಇನ್ನಿತರ ಅಗತ್ಯ ವಸ್ತುಗಳನ್ನು ಹೊತ್ತು ತರುವ ವಾಹನ, ಬೈಕ್ ಸವಾರರ ತಪಾಸಣೆ ಜತೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

    ಆರ್ಗ್ಯಾನಿಕ್ ಕೆಮಿಕಲ್ ಸೋಂಕು ನಿವಾರಕ ದ್ರಾವಣವನ್ನು ನೀರಿನ ಟ್ಯಾಂಕರ್‌ನಲ್ಲಿ ಬೆರೆಸಿ 2 ಎಚ್‌ಪಿ ಮೋಟರ್ ಸಹಾಯದಿಂದ ಸುರಂಗ ಮಾರ್ಗದಲ್ಲಿ ಬರುವ ವಾಹನ, ವ್ಯಕ್ತಿಗಳಿಗೆ ಸಿಂಪಡಣೆ ವ್ಯವಸ್ಥೆ ಮಾಡಲಾಗಿದೆ. ಸುರಂಗ ಉದ್ಘಾಟನೆ ವೇಳೆ ಸಂಸದ ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ತಹಸೀಲ್ದಾರ್ ಎಂ. ಬಸವರಾಜ್, ತಾಪಂ ಇಒ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಎಚ್. ಕಾಂತರಾಜ್ ತಿಳಿಸಿದ್ದಾರೆ.

    ತಹಸೀಲ್ದಾರ್ ಎಂ.ಬಸವರಾಜ್ ಹೇಳಿಕೆ: ಕರೊನಾ ವೈರಸ್ ತಡೆ ದ್ರಾವಣ ಸಿಂಪಡಣೆ ಸುರಂಗ ಮಾರ್ಗವನ್ನು ತಮ್ಮೇನಹಳ್ಳಿ ಚಕ್‌ಪೋಸ್ಟ್ ಕೇಂದ್ರದಲ್ಲಿ ನಿರ್ಮಿಸುವ ಅಗತ್ಯವಿದೆ. ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಶೀಘ್ರವೇ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts