More

    ಮೊಳಕಾಲ್ಮೂರಲ್ಲಿ ಶೇ.90ರಷ್ಟು ಪಡಿತರ

    ಮೊಳಕಾಲ್ಮೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶೇ.90ರಷ್ಟು ಮಂದಿಗೆ ಪಡಿತರ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದ್ದಾರೆ.

    ತಾಲೂಕಿನಲ್ಲಿ ಒಟ್ಟು 49 ನ್ಯಾಯಬೆಲೆ ಅಂಗಡಿಗಳಿವೆ. ರಾಂಪುರ ಮತ್ತು ಬಿ.ಜಿ.ಕೆರೆ ತಲಾ 1500ಕ್ಕೂ ಅಧಿಕ ಪಡಿತರ ಚೀಟಿಗಳನ್ನು ಹೊಂದಿರುವ ಕೇಂದ್ರಗಳಾಗಿವೆ.

    ಉಡೇವು 150 ಅತೀ ಕಡಿಮೆ ಕಾರ್ಡ್‌ದಾರರನ್ನು ಹೊಂದಿರುವ ಊರಾಗಿದೆ. ತಾಲೂಕಿನಲ್ಲಿ 6481 ಅಂತ್ಯೋದಯ, 29645 ಬಿಪಿಎಲ್ ಕಾರ್ಡ್‌ದಾರರಿದ್ದಾರೆ.

    ಅಂತ್ಯೋದಯ ಫಲಾನುಭವಿಗೆ 70 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯರಿಗೆ 2 ತಿಂಗಳ ಲೆಕ್ಕದಂತೆ ತಲಾ 10 ಕೆಜಿ ಅಕ್ಕಿ, ಪ್ರತಿ ಕಾರ್ಡ್‌ಗೆ 4 ಕೆಜಿ ಗೋದಿ ಒಟ್ಟು 14616 ಕ್ವಿಂಟಲ್ ಅಕ್ಕಿ ಹಾಗೂ 185.80 ಕ್ವಿಂಟಲ್ ಗೋಧಿ ವಿತರಣೆಗೆ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಆಹಾರ ನಿರೀಕ್ಷಕ ಎಂ.ಉದಯಕುಮಾರ್ ಹೇಳಿಕೆ: ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳ ಕಾರ್ಯದರ್ಶಿಗಳಿಗೆ ಸೂಚಿಸಿದ್ದರಿಂದ ಈತನಕ ತಾಲೂಕಿನಲ್ಲಿ ಶೇ.90ರಷ್ಟು ಅಕ್ಕಿ, ಗೋಧಿ ವಿತರಣೆ ಮಾಡಲು ಸಾಧ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts