More

    ಅಭಿವೃದ್ಧಿಗೆ ಹಂಬಲಿಸುತ್ತಿದೆ ಚಿಕ್ಕೋಬನಹಳ್ಳಿ

    ಕೆ.ಕೆಂಚಪ್ಪ ಮೊಳಕಾಲ್ಮೂರು: ಶಿಕ್ಷಣ, ಆರೋಗ್ಯ ಸೇರಿ ಮೂಲ ಸೌಕರ್ಯಗಳಿಗೆ ಹಂಬಲಿಸುತ್ತಿದೆ ಕರ್ನಾಟಕ-ಆಂಧ್ರ ಗಡಿಭಾಗದ ಚಿಕ್ಕೋಬನಹಳ್ಳಿ!

    ಜನಸಂಖ್ಯೆಯಲ್ಲಿ ಊರು ದೊಡ್ಡದಾದರೂ ಸಮಸ್ಯೆಗಳೇನೂ ಕಡಿಮೆ ಇಲ್ಲ. ಹದಗೆಟ್ಟ ರಸ್ತೆ, ಚರಂಡಿ ಅವ್ಯವಸ್ಥೆ, ಅನೈರ್ಮಲ್ಯ, ಆರೋಗ್ಯ ಸೇವೆ ಕೊರತೆ ಹೀಗೆ ಪಟ್ಟಿ ಮಾಡಬಹುದು. ವೈದ್ಯರ ಅಲಭ್ಯ, ಶಾಲಾ ಕೊಠಡಿಗಳ ಕೊರತೆ ಹೀಗೆ ಪಟ್ಟಿ ಮಾಡಬಹುದು.

    ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. 400 ಮಕ್ಕಳಿರುವ ಸರ್ಕಾರಿ ಶಾಲೆ ಇದ್ದರೂ ಅಗತ್ಯ ಕೊಠಡಿಗಳಿಲ್ಲ. ಆಟದ ಮೈದಾನವಿಲ್ಲ.

    ಸೌಲಭ್ಯ ಕೋರಿ ಊರಿನ ಹಿರಿಯರು, ಜನಪ್ರತಿನಿಧಿಗಳು ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳ ನಿರ್ಲಕ್ಷೃ ವಹಿಸಿದ ಕಾರಣ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪರಿಶಿಷ್ಟ ಜಾತಿ, ಪಂಗಡದ ಜನರೇ ಹೆಚ್ಚು ವಾಸವಿರುವ ಹಿಂದುಳಿದ ಈ ಗ್ರಾಮದ ಜನಸಂಖ್ಯೆ 2888.ಅಭಿವೃದ್ಧಿಗೆ ಹಂಬಲಿಸುತ್ತಿದೆ ಚಿಕ್ಕೋಬನಹಳ್ಳಿ

    ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೆ 688 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಂಡವರ ಸಂಖ್ಯೆ ಬೆರಳೆಣಿಕೆ ಮಾತ್ರ. ಕೃಷಿ ಹಾಗೂ ಕಾರ್ಮಿಕ ಪದ್ಧತಿ ಬಿಟ್ಟರೆ ಕೂಲಿ ಅರಸಿ ವಲಸೆ ಹೋಗುವವರೆ ಹೆಚ್ಚು.

    ದೇವಗಣದ ತವರೂರು: ಕೆಂಚೋಬಳೇಶ್ವರಸ್ವಾಮಿ, ಬಸವೇಶ್ವರ, ಹಟ್ಟಿ ಮಾರಮ್ಮ, ಗ್ರಾಮದೇವತೆ ದುರುಗಮ್ಮ, ಸುಂಕಲಮ್ಮ, ಆಂಜನೇಯಸ್ವಾಮಿ, ತಿಪ್ಪೇರುದ್ರಸ್ವಾಮಿ ಪಾದಗಟ್ಟೆ ದೇವಸ್ಥಾನಗಳಿವೆ. ದುರುಗಮ್ಮ ಮತ್ತು ಹಟ್ಟಿಮಾರಮ್ಮ ದೇವಸ್ಥಾನಗಳು ಕಾಯಕಲ್ಪ ಬಯಸುತ್ತಿವೆ.

                ಗ್ರಾಮದ ಬೇಡಿಕೆಗಳು
    • ಗ್ರಾಮ ಪಂಚಾಯಿತಿ ಕೇಂದ್ರವಾಗಿ ಪರಿಗಣಿಸಬೇಕು.
    • ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್.
    • ಸಾರಿಗೆ ವ್ಯವಸ್ಥೆ, ರಸ್ತೆ, ಚರಂಡಿ ಅಭಿವೃದ್ದಿ
    • ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ.
    • ಬಡವರು ಹಾಗೂ ಅವಿಭಕ್ತ ಕುಟುಂಬಗಳಿಗೆ ನಿವೇಶನ, ವಸತಿ.

    ಪೂರ್ವ ಕಾಲದಿಂದಲೂ ನಮಗೆ ಕಷ್ಟ ತಪ್ಪಿದ್ದಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಅತ್ಯವಶ್ಯಕ. ನಮ್ಮೂರ ಮಕ್ಕಳು ಶೈಕ್ಷಣಿಕ ಪ್ರಗತಿ ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಹಂಬಲ ನಮ್ಮಲ್ಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಮಗ್ರ ಸವಲತ್ತು ನೀಡಲು ಸರ್ಕಾರ ಮತ್ತು ಇಲಾಖೆ ಗಮನಹರಿಸಬೇಕಿದೆ.
    ಓ.ಕರಿಬಸಪ್ಪ ಗ್ರಾಪಂ ಸದಸ್ಯ

    ಚಿಕ್ಕೊಬನಹಳ್ಳಿ ಗ್ರಾಪಂ ಕೇಂದ್ರ ಘೋಷಿಸಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯಕೀಯ ಸೇವೆ ಕಲ್ಪಿಸಬೇಕು. ಸುಜ್ಜಿತ ಬಯಲು ರಂಗಮಂದಿರ, ಸಮುದಾಯ ಭವನ ಹಾಗೂ ಕೈಗಾರಿಕಾ ತರಬೇತಿ ಕೇಂದ್ರ ನಿರ್ಮಿಸಬೇಕು.
    ಡಿ.ಓ.ಮುರಾರ್ಜಿ ಕಲಾವಿದ

    ಗ್ರಾಮದ ಹೊರವಲಯದ ಹೊಡ್ರುಪೆಂಟೆ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಖಬರ್ ಸ್ಥಾನ ಪಕ್ಕದ ಎಸಿ ಕಾಲನಿಯಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ಜಿಲ್ಲಾಧಿಕಾರಿ ಇಲ್ಲಿಯೇ ಗ್ರಾಮ ವಾಸ್ತವ್ಯ ಮಾಡಬೇಕು.
    ಎಚ್.ಎಂ.ನಾಗಭೂಷಣ ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts