More

    ಕೆರೆಗಳ ಪುನಶ್ಚೇತನಕ್ಕೆ ಚಾಲನೆ

    ಮೊಳಕಾಲ್ಮೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಾಮೃತ ಯೋಜನೆಯಡಿ ತಾಲೂಕಿನ ಮೂರು ಕೆರೆಗಳು ಪುನಶ್ಚೇತನಗೊಳ್ಳಲಿವೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಪಂಚಾಯತ್‌ರಾಜ್ ಇಲಾಖೆ ನಿರ್ದೇಶನದಂತೆ ಸ್ಥಳೀಯ ಗ್ರಾಪಂ ಆಡಳಿತದಿಂದ ಮೂರು ಕೆರೆಗಳ ಹೂಳೆತ್ತುವ ಕಾಮಗಾರಿಗೆ ಚಾಲನೆ ಕೊಡಲಾಗಿದೆ.

    ನಾಗಸಮುದ್ರ ಕೆರೆಗೆ 10.70 ಲಕ್ಷ ರೂ., ಅಶೋಕ ಸಿದ್ದಾಪುರ ಕೆರೆಗೆ 10.65 ಲಕ್ಷ ಹಾಗೂ ಅಮುಕುಂದಿ ಕೆರೆಗೆ 8.90 ಲಕ್ಷ ರೂ. ವಿಸ್ತೀರ್ಣ ಅನುಸಾರ ಅನುದಾನ ನಿಗದಿ ಮಾಡಲಾಗಿದೆ.

    ಹೆಚ್ಚು ಮಳೆ ನೀರು ಸಂಗ್ರಹವಾಗುವ ಕೆರೆಗಳಲ್ಲಿ ಹೂಳು ತೆಗೆದರೆ ಮಳೆಗಾಲದಲ್ಲಿ ಅನುಕೂಲವಾಗಿದೆ. ಕೆರೆಗಳ ಏರಿಯಲ್ಲಿ ನೀರಿನ ಸೋರಿಕೆ ತಡೆಯಲು ಮತ್ತು ಕಾಲುವೆಗಳ ಅಭಿವೃದ್ಧಿ ಕೆಲಸಕ್ಕೂ ಆದ್ಯತೆ ನೀಡಲಾಗಿದೆ.

    ನುಸಿ ಮಿಶ್ರಿತ ಗೊಬ್ಬರದ ಮಣ್ಣು ಕೆರಗಳಲ್ಲಿ ಶೇಖರಣೆಯಾಗಿದ್ದು, ಸಾವಯವ ಗೊಬ್ಬರದಂತೆ ಪೌಷ್ಟಿಕವಾಗಿದೆ. ಕೃಷಿಕರು ಕೆರೆ ಮಣ್ಣನ್ನು ಜಮೀನಿಗೆ ಬಳಸಿಕೊಳ್ಳಬಹುದು ಎಂದು ಇಒ ಪ್ರಕಾಶ್ ತಿಳಿಸಿದ್ದಾರೆ.

    ರೈತಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಹೇಳಿಕೆ: ಜಲಾಮೃತ ಯೋಜನೆ ರೈತಾಪಿ ವರ್ಗದವರ ಪಾಲಿಗೆ ಸಂಜೀವಿನಿಯಂತಿದೆ. ಯೋಜನೆ ಹೆಸರಿನಲ್ಲಿ ತುಟಿಗೆ ತುಪ್ಪ ಸವರುವ ಬದಲು ಉತ್ತಮ ಕಾಮಗಾರಿಗಳನ್ನು ಕೈಗೊಳ್ಳಬೇಕು.

    ರೈತಮುಖಂಡ ಬೆಳಗಲ್ ಈಶ್ವರಯ್ಯಸ್ವಾಮಿ ಹೇಳಿಕೆ: ರಾಜ, ಮಹಾರಾಜರ ಕಾಲದಲ್ಲಿ ಕಟ್ಟಿದ ಕೆರೆಗಳು ಅಭಿವೃದ್ಧಿ ಕಾಣದೆ ದಶಕಗಳೇ ಕಳೆದಿವೆ. ನಿರ್ವಹಣೆ ಹೊತ್ತ ಇಲಾಖೆಗಳು ಅನುದಾನದ ಕೊರತೆಯಿಂದ ಅಷ್ಟಾಗಿ ಕಾಳಜಿ ವಹಿಸಿಲ್ಲ. ಮುಳ್ಳಿನ ಜಾಲಿ ಬೆಳೆದು ಕೆರೆಗಳು ಮೂಲರೂಪ ಕಳೆದುಕೊಂಡಿವೆ. ಕೆರೆಗಳ ಒತ್ತುವರಿ ತೆರವು ಸೇರಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts