More

    ಮಗನ ಕೊಲೆಯಾಗಿ ತಿಂಗಳ ನಂತರ ವಿಷಯ ತಿಳಿಯಿತು; ಆಗಿನಿಂದ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಪದ್ಮಶ್ರೀ ಪುರಸ್ಕೃತ ಮಹಮ್ಮದ್​ ಶರೀಫ

    ಅಯೋಧ್ಯೆ: “ಸುಲ್ತಾನಪುರ ಎಂಬಲ್ಲಿ ನನ್ನ ಮಗನ ಕೊಲೆಯಾಯಿತು. ಇದು ನನಗೆ ತಿಳಿದಿದ್ದು ಒಂದು ತಿಂಗಳ ನಂತರ. ಇದು ನಡೆದದ್ದು 27 ವರ್ಷಗಳ ಹಿಂದೆ ಎಂದು ಭಾವುಕರಾಗುತ್ತಾರೆ” ಮಹಮ್ಮದ್​ ಶರೀಫ್​ ಅವರು.

    ಅಂದಹಾಗೆ ಈ ಬಾರಿಯ ಪದ್ಮಶ್ರೀ ಪುರಸ್ಕೃತರಲ್ಲಿ ಫರಿದಾಬಾದ್​ನ ಮಹಮ್ಮದ್​ ಶರೀಫ್​ ಕೂಡ ಒಬ್ಬರು. ಎಲ್ಲರೂ ಇವರನ್ನು ಚಾಚಾ ಶರೀಫ ಎಂದೇ ಕರೆಯುತ್ತಾರೆ. ಇವರು ಫರಿದಾಬಾದ್​ನಲ್ಲಿ ಸೈಕಲ್​ ಶಾಪ್​ ಇಟ್ಟುಕೊಂಡಿದ್ದಾರೆ.

    “ಮಗನ ಸಾವಿನಿಂದ ನನಗೆ ತೀವ್ರ ದುಃಖವಾಯಿತು. ಅನಾಥ ಶವಗಳನ್ನು ಮಣ್ಣು ಮಾಡಲು ಆಗಲೇ ನಿರ್ಧರಿಸಿದೆ” ಎನ್ನುತ್ತಾರೆ ಶರೀಫ ಅವರು. “ಈವರೆಗೆ 3 ಸಾವಿರ ಹಿಂದು ಮತ್ತು 2500 ಮುಸ್ಲಿಂ ಶವಗಳ ಸಂಸ್ಕಾರ ನೆರವೇರಿಸಿದ್ದೇನೆ” ಎನ್ನುತ್ತಾರೆ.

    ಶರೀಫ ಅವರು ಧರ್ಮದ ಆಧಾರದ ಮೇಲೆ ಶವಗಳಿಗೆ ಭೇದ ಮಾಡಿಲ್ಲ. ಮೃತ ವ್ಯಕ್ತಿಯ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಅವರು ಅಂತಿಮ ವಿಧಿಗಳನ್ನು ನಡೆಸಿದ್ದಾರೆ. ಹಿಂದುಗಳ ಶವವನ್ನು ದಹನ ಮಾಡುವುದು ಮತ್ತು ಮುಸ್ಲಿಮರ ಶವಗಳನ್ನು ಸಮಾಧಿ ಮಾಡುವ ಕೆಲ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts