More

    ಶೋಷಿತ ವರ್ಗದವರ ಧ್ವನಿಯಾಗಿದ್ದ ಮೊಹಮ್ಮದ್ ಫೈಗಂಬರ್

    ಎನ್.ಆರ್.ಪುರ: ಪ್ರತಿಯೊಂದು ಧರ್ಮವು ತನ್ನದೇ ಆದ ಸಿದ್ಧಾಂತ, ಆಚಾರ, ವಿಚಾರಗಳನ್ನು ಒಳಗೊಂಡಿದ್ದು, ಎಲ್ಲ ಧರ್ಮವನ್ನು ಗೌರವಿಸಬೇಕು ಎಂಬುವುದು ಮೊಹಮ್ಮದ್ ಫೈಗಂಬರ್ ಅವರ ಚಿಂತನೆಯಾಗಿತ್ತು ಎಂದು ಮಂಗಳೂರಿನ ಹಜರತ್ ಮೌಲಾನಾ ಹುಸೇನ್ ಹಾಶ್ಮಿಸಾಬ್ ಹೇಳಿದರು.
    ಜಾಮಿಯಾ ಮಸ್ಜಿದ್‌ನಲ್ಲಿ ಸೋಮವಾರ ಸಂಜೆ ಹಜರತ್ ಮೊಹಮದ್ ಫೈಗಂಬರ್ ಅವರ ಜನ್ಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಇಸ್ಲಾಂ ಎಂದರೆ ಎಲ್ಲರೊಂದಿಗೆ ಒಳ್ಳೆಯ ಮಾತನಾಡುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಸಾಂತ್ವಾನ ಹೇಳುವುದು ಹಾಗೂ ಸಂಯಮದಿಂದ ಇರುವುದಾಗಿದೆ ಎಂದರು.
    ಮಹಮ್ಮದ್ ಫೈಗಂಬರು 1400 ವರ್ಷಗಳ ಹಿಂದೆಯೇ ಮೂಲಭೂತ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ್ದರು. ಪ್ರತಿಯೊಬ್ಬರಿಗೂ ಸ್ವತಂತ್ರೃ, ಸ್ವಾಭಿಮಾನದಿಂದ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದರು. ಪ್ರತಿಯೊಬ್ಬ ರು ಗೌರವ ನೀಡಬೇಕು. ತಂದೆ, ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅವರಿಗೆ ತೊಂದರೆ ಕೊಟ್ಟರೆ ಒಳಿತಾಗುವುದಿಲ್ಲ ಎಂಬುವುದು ಅವರ ವಾದವಾಗಿತ್ತು. ಅನಾಥರಿಗೆ ಸಾಂತ್ವಾನ ಹೇಳಬೇಕು. ಹಸಿವಿನಿಂದ ಬಳಲುವವರಿಗೆ ಆಹಾರ ನೀಡಬೇಕು ಎಂಬ ಸಂದೇಶ ನೀಡುವ ಮೂಲಕ ಶೋಷಿತ ವರ್ಗದವರ ಧ್ವನಿಯಾಗಿದ್ದರು. ಸ್ತ್ರೀ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು ಎಂದರು.
    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಹಿಂದು, ಮುಸ್ಲಿಂ, ಕ್ರೈಸ್ತ್ತ, ಜೈನ, ಸಿಖ್ ಯಾವುದೇ ಧರ್ಮ ಗ್ರಂಥಗಳು ಪ್ರೀತಿ, ಸಮಾನತೆ, ಸಹಬಾಳ್ವೆ ಪ್ರತಿಪಾದಿಸಿವೆ. ಪ್ರತಿಯೊಬ್ಬರೂ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಅವುಗಳಲ್ಲಿರುವ ತತ್ವಗಳನ್ನು ಅಳವಡಿಸಿಕೊಂಡರೆ ಸಹಬಾಳ್ವೆಯಿಂದ ಬದುಕಲು ಸಾಧ್ಯ. ಆದಿಶಂಕರಾಚಾರ್ಯರು, ಮಹಮ್ಮದ್ ಫೈಗಂಬರರು ಪ್ರೀತಿ, ಸಹೋದರತೆ, ಮಾನವೀಯ ಮೌಲ್ಯಗಳ ಬಗ್ಗೆ ಬೋಧನೆ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೆಲವು ಧಾರ್ಮಿಕ ಪ್ರವಚನಗಳಲ್ಲಿ ಧರ್ಮ, ಧರ್ಮಗಳ ನಡುವೆ ದ್ವೇಷದ ವಿಷದ ಬೀಜ ಬಿತ್ತುವ ಕೆಲಸವಾಗುತ್ತಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಜಾತಿ, ಮತ, ಧರ್ಮಗಳನ್ನು ಒಡೆದು ಆಳುವ, ಅವಹೇಳ ಮಾಡಿ ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.
    ಬೆಂಗಳೂರು ಜಾಮಿಯಾ ಮಸ್ಜಿದ್‌ನ ಧರ್ಮ ಗುರುಗಳಾದ ಡಾ.ಹಜರತ್ ಮೌಲಾನಾ ಮುಕ್ಸುದ್‌ಇಬ್ರಾನ್ ಸಾಬ್ ಮಾತನಾಡಿ, ಧರ್ಮಕ್ಕೆ ವಿರುದ್ಧವಾಗಿಯಾರು ನಡೆದು ಕೊಂಡರು ಶಿಕ್ಷೆ ಅನುಭವಿಸಲೇ ಬೇಕು. ಪ್ರತಿಯೊಬ್ಬರೂ ಮಾನವೀಯತೆ ಬೆಳೆಸಿಕೊಳ್ಳಬೇಕು. ಉತ್ತಮ ದಾರಿಯಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಹೊಂದಬಹುದು. ಹಂಚಿ ತಿನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಬೇರೆಯವರ ಹಕ್ಕುಗಳನ್ನು ಕಿತ್ತು ಕೊಳ್ಳಬಾರದು. ಸತ್ಯದ ಮಾರ್ಗದಲ್ಲಿ ನಡೆದರೆ ದೇವರನುಗ್ರಹ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts