More

    VIDEO | ಐಸಿಸಿ ನಿಯಮ ಮೀರಿ ಚೆಂಡಿಗೆ ಎಂಜಲು ಹಚ್ಚಿದ ಪಾಕ್​ ವೇಗಿ ಆಮೀರ್​

    ಮ್ಯಾಂಚೆಸ್ಟರ್​: ಕ್ರಿಕೆಟ್​ನಲ್ಲಿ ವೇಗದ ಬೌಲರ್​ಗಳಿಗೆ ಸ್ವಿಂಗ್​ ಎಸೆತಗಳ ಮೂಲಕ ಬ್ಯಾಟ್ಸ್​ಮನ್​ಗಳ ಮೇಲೆ ಕಡಿವಾಣ ಹೇರಲು ಚೆಂಡಿನ ಮೇಲೆ ಎಂಜಲು ಹಚ್ಚಿನ ಹೊಳಪು ತರುವುದು ಅಗತ್ಯ. ಆದರೆ ಕರೊನಾ ವೈರಸ್​ ಹಾವಳಿ ಶುರುವಾದ ಬಳಿಕ ಐಸಿಸಿ, ಕ್ರಿಕೆಟಿಗರು ಚೆಂಡಿನ ಮೇಲೆ ಎಂಜಲು ಹೆಚ್ಚುವುದನ್ನು ನಿಷೇಧಿಸಿದೆ. ಸೋಂಕು ಹರಡುವ ಭಯ ಇದಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನದ ವೇಗದ ಬೌಲರ್​ ಮೊಹದ್​ ಆಮೀರ್​ ಆತಿಥೇಯ ಇಂಗ್ಲೆಂಡ್​ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿ ತಿಕ್ಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಪಂದ್ಯದಲ್ಲಿ ಆಮೀರ್​ ಬೌಲಿಂಗ್​ ಮಾರ್ಕ್​​ಗೆ ಮರಳುವ ವೇಳೆ ಬಾಯಿಯಿಂದ ಎಂಜಲು ತೆಗೆದು ಚೆಂಡಿಗ ಹಚ್ಚಿರುವುದು ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಮೀರ್​ರ ಮೊದಲ ಓವರ್​ನ ಬಳಿಕ ಅಂಪೈರ್​ಗಳು ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ ಬಳಿಕ ಅವರು ಇದನ್ನು ಮುಂದುವರಿಸಿಲ್ಲ ಎನ್ನಲಾಗಿದೆ.

    ಐಸಿಸಿ ನಿಯಮದ ಪ್ರಕಾರ, ಮೊದಲ 2 ಬಾರಿ ಚೆಂಡಿಗೆ ಎಂಜಲು ಹಚ್ಚಿದಾಗ ಎಚ್ಚರಿಕೆ ನೀಡಲಾಗುವುದು. 3ನೇ ಬಾರಿ ಇದೇ ತಪ್ಪನ್ನು ಮಾಡಿದರೆ 5 ರನ್​ ದಂಡ ವಿಧಿಸಲಾಗುತ್ತದೆ.

    ಇದನ್ನೂ ಓದಿ: ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಮುನ್ನಾದಿನವೇ ಇಹಲೋಕ ತ್ಯಜಿಸಿದ ಪುರುಷೋತ್ತಮ್ ರೈ

    ಆಮೀರ್​ ಚೆಂಡಿಗೆ ಎಂಜಲು ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್​ ಆಗಿದೆ. ಅಲ್ಲದೆ ಆಮೀರ್​ ಇದೇ ತಪ್ಪನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾಡಿದ್ದರೂ, ಅಂಪೈರ್​ ಇದನ್ನು ಗಮನಿಸದಿರುವುದು ಭಾರಿ ಚರ್ಚೆಗೂ ಗ್ರಾಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts