More

    ಖರ್ಗೆ ಆಸ್ತಿ V/S ಮೋದಿ; ಇಬ್ಬರ ಆಸ್ತಿ ಮೌಲ್ಯ ಎಷ್ಟು? ಯಾರ ವಿರುದ್ಧ ಹೆಚ್ಚು ಕ್ರಿಮಿನಲ್​ ಕೇಸ್​​,ಯಾರು ಅತೀ ಶ್ರೀಮಂತರು?!

    ಮೋದಿ V/s ಖರ್ಗೆ ಇಬ್ಬರ ಆಸ್ತಿ ಎಷ್ಟಿದೆ, ಪ್ರೊಫೈಲ್​​ ಹೇಗಿದೆ? ಈ ಪ್ರಶ್ನೆ ಹುಟ್ಟುಕೊಂಡಿದೆ. ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಅಭ್ಯರ್ಥಿ ಮಾಡ್ಬೇಕು ಅನ್ನುವಂತಹ ಚರ್ಚೆಗಳು INDIA ಕೂಟದಲ್ಲಿ ಕೆಲವರು ಪ್ರಸ್ಥಾಪಿಸಿದ್ದಾರೆ.

    ಸದ್ಯ ಖರ್ಗೆ ಮೋದಿ ವಿರುದ್ಧ ಸ್ಪರ್ಧಿಸುತ್ತಾರೆ ಅನ್ನೋ ವಿಚಾರಗಳು ಮುನ್ನೆಲೆಗೆ ಬಂದಾಗಿನಿಂದಲೂ ಇಬ್ಬರ ರಾಜಕೀಯ ಅನುಭವ, ಇಬ್ಬರ ಪ್ರೊಫೈಲ್​, ಆಸ್ತಿ, ದಾಖಲಾದ ಕ್ರಿಮಿನಲ್​ ಕೇಸ್​​​ಗಳ ಕುರಿತಂತೆ ಇಬ್ಬರ ಮಧ್ಯೆ ಪೈಪೋಟಿ ಜತೆಗೆ ಜನರು ಹೋಲಿಕೆ ಮಾಡುವ ಟ್ರೆಂಡ್​​ ಪ್ರಾರಂಭವಾಗಿದೆ.

    ಹಾಗಿದ್ರೆ ಇವರಿಬ್ಬರ ಪ್ರೊಫೈಲ್​​​ ಹೇಗಿದೆ; ಹಿನ್ನಲೆ; ಯಾರು ಹೆಚ್ಚು ಶ್ರೀಮಂತ ನೋಡೋಣ 1. ಮೋದಿ ಸಂಪತ್ತು v/s ಖರ್ಗೆ ಆಸ್ತಿ; ಯಾರಿಗೆ ಹೆಚ್ಚು ಆದಾಯ?

    *ಮಲ್ಲಿಕಾರ್ಜುನ ಖರ್ಗೆ

    2019ರ ಚುನಾವಣೆಯ ಅಫಿಡವಿಟ್​​​ನಲ್ಲಿ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿ -ರೂ. 20, 12,46, 422. ಸಾಲ- ರೂ. 23, 75,000. ಇನ್ನು 2018-19 ರ ಖರ್ಗೆಯವರ ವಾರ್ಷಿಕ ಆದಾಯ-ರೂ. 27,84, 530 ಇದೇ ಅವಧಿಯಲ್ಲಿ ಖರ್ಗೆ ಪತ್ನಿ ರಾಧಾಬಾಯಿ ಖರ್ಗೆ ಆದಾಯ ರೂ. 55,20,980 ತೋರಿಸಿಕೊಂಡಿದ್ದಾರೆ.

    ಆದಾಯದ ಮೂಲ: ಖರ್ಗೆಯವರ ಆದಾಯದ ಮೂಲ ಸಂಬಳ, ಹೌಸ್​ ಪ್ರಾಪರ್ಟಿ, ಫಿಕ್ಸೆಡ್​ ಡೆಪಾಸಿಟ್​​ , ಅಗ್ರಿಕಲ್ಚರ್​​ ಇನ್​ಕಮ್​​

    ಯಾರ ಕೈಯಲ್ಲಿ ಎಷ್ಟು ಕ್ಯಾಶ್​ ಇದೆ?: ಮಲ್ಲಿಕಾರ್ಜುನ ಖರ್ಗೆಯವರ ಬಳಿ 3 ಲಕ್ಷರೂ. ಕ್ಯಾಶ್​ ಇರೋದಾಗಿ ಜತೆಗೆ ಪರ್ನಿಯ ಬಳಿ 2, 50,000 ಲಕ್ಷರೂಪಾಯಿ ಎಂದು ತಿಳಿಸಿದ್ದಾರೆ.

    ಯಾವ ಬ್ಯಾಂಕ್​ಗಳಲ್ಲಿ ಡೆಪಾಸಿಟೆ ಇದೆ? ಖರ್ಗೆ ಹೆಸರಿನಲ್ಲಿ ಸುಮಾರು 15 ಬ್ಯಾಂಕ್​ ಖಾತೆಗಳಿದ್ದು, ಪತ್ನಿಯ ಹೆಸರಿನಲ್ಲಿ 5 ಬ್ಯಾಂಕ್​ ಅಕೌಂಟ್​ಗಳಿವೆ. ಕುಟುಂಬದ ಮತ್ತೊಬ್ಬ ಸದಸ್ಯರು 1 ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದಾರೆ. 3 ಮಂದಿ ಸೇರಿ 2ಕೋಟಿ 91 ಲಕ್ಷ 5 ಸಾವಿರದ 721 ಕೋಟಿ ರೂ.ಪಾಯಿಯಷ್ಟು ಡೆಪಾಸಿಟ್​ ಇಟ್ಟಿದ್ದಾರೆ.

    ಯಾರ ಬಳಿ ಹೆಚ್ಚು ಭೂಮಿ? ಖರ್ಗೆಯವರ ಹೆಸರಿನಲ್ಲಿ ಸುಮಾರು 1 ಎಕರೆಯಷ್ಟು ನಾನ್​ ಅಗ್ರಿಕಲ್ಚರಲ್​ ಲ್ಯಾಂಡ್​ ಇದೆ. ಆದ್ರೆ ಪತ್ನಿ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಲ್ಯಾಂಡ್​ ಇದೆ. ಚಿತ್ತಾಪುರ ತಾಲೂಕಿನ ಗುಂಡುಗುರುತಿ ಊರಿನಲ್ಲಿ 6.20 ಭೂಮಿ ಮತ್ತೊಂದೆಡೆ 15.20 ಎಕರೆ ಭೂಮಿ ಹೆಂಡತಿ ಹೆಸರಿನಲ್ಲಿದೆ.

    ಚಿನ್ನ ಎಷ್ಟಿದೆ? ಚಿನ್ನ-255ಗ್ರಾಂ, ಬೆಳ್ಳಿ 6 ಕೆ.ಜಿ. ಪತ್ನಿಯ ಬಳಿ 805 ಗ್ರಾಂ ಚಿನ್ನ ಮತ್ತು 11 ಕೆ.ಜಿ. ಬೆಳ್ಳಿ ಇದೆ. ಒಟ್ಟಾರೆ 52, 68,000 ರೂಪಾಯಿ ಬೆಲೆ ಬಾಳುವ ಚಿನ್ನ ಬೆಳ್ಳಿ ಇದೆ.

    ವಾಹನಗಳು ಏಷ್ಟಿವೆ? ಖರ್ಗೆಯವರ ಬಳಿ ಯಾವುದೇ ಸ್ವಂತ ವಾಹನವಿಲ್ಲ ಖರ್ಗೆಯವರ ಮೇಲೆ ಯಾವುದೇ ಕ್ರಿಮಿನಲ್​ ಕೇಸ್​​ಗಳೂ ಇಲ್ಲ

    ಶಿಕ್ಷಣ- BALLB , 1964-65 ರಲ್ಲಿ ಪದವಿ, 1967ರಲ್ಲಿ ಕಲಬುರಗಿಯ SSL ಕಾಲೇಜಿನಲ್ಲಿ LLB

    ——————-

    *ಪ್ರಧಾನಿ ನರೇಂದ್ರ ಮೋದಿ

    2019ರ ಚುನಾವಣೆಯ ಅಫಿಡವಿಟ್​​​ನಲ್ಲಿ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವ ಆಸ್ತಿ- ರೂ. 2,51,36,119. ಆದಾಯದ ಮೂಲ: ಸರ್ಕಾರದಿಂದ ಬರುವ ಸಂಬಳ ಹಾಗೂ ಆದುಡ್ಡಿಗೆ ಬ್ಯಾಂಕ್​ನಿಂದ ಬರುವಂತಹ ಬಡ್ಡಿ. ಇದೇ ನನ್ನ ಆದಾಯದ ಮೂಲವೆಂದು ಮೋದಿ ಡಿಕ್ಲೇರ್​​ ಮಾಡಿಕೊಂಡಿದ್ದಾರೆ.

    ಯಾರ ಕೈಯಲ್ಲಿ ಎಷ್ಟು ಕ್ಯಾಶ್​ ಇದೆ?: ನರೇಂದ್ರ ಮೋದಿಯವರ ಬಳಿ ರೂ. 38,750 ಕ್ಯಾಶ್​​​ ಇರೋದಾಗಿ 2019ರ ಅಫಿಡವಿಟ್​​ನಲ್ಲಿ ಮೋದಿ ತಿಳಿಸಿದ್ದಾರೆ.

    ಯಾವ ಬ್ಯಾಂಕ್​ಗಳಲ್ಲಿ ಡೆಪಾಸಿಟೆ ಇದೆ? ಮೋದಿಯವರು 2 ಬ್ಯಾಂಕ್​ ಖಾತೆಗಳನ್ನ ಹೊಂದಿದ್ದಾರೆ. ಒಂದರಲ್ಲಿ 4, 143ರೂಪಯಿ ಇದೆ. ಮತ್ತೊಂದು SBI ಅಕೌಂಟ್​ನಲ್ಲಿ 1,27,81, 574 ಫಿಕ್ಸೆಡ್​ ಡೆಪಾಸಿಟ್​ ಇದೆ.

    ಯಾರ ಬಳಿ ಹೆಚ್ಚು ಭೂಮಿ? ಮೋದಿಯವರ ಬಳಿ ಅಫಿಡವಿಟ್​ ಪ್ರಕಾರ ಯಾವುದೇ ಕೃಷಿ ಭೂಮಿ ಇಲ್ಲ. ಕಮರ್ಷಿಯಲ್​ ಬಿಲ್ಡಿಂಗ್​ಗಳೂ ಮೋದಿ ಹೆಸರಿನಲಿಲ್ಲ.

    ಚಿನ್ನ ಎಷ್ಟಿದೆ?

    45 ಗ್ರಾಂನ ನಾಲ್ಕು ಗೋಲ್ಡ್ ರಿಂಗ್​, 1,28, 273 ರೂಪಾಯಿ ಬೆಲೆ ಬಾಳುತ್ತೆ.

    ವಾಹನಗಳು ಏಷ್ಟಿವೆ? ಮೋದಿ ಬಳಿ ಯಾವುದೇ ಸ್ವಂತ ವಾಹನವಿಲ್ಲ

    ನರೇಂದ್ರ ಮೋದಿ ಮೇಲೆ ಯಾವುದೇ ಕ್ರಿಮಿನಲ್​ ಕೇಸ್​​ಗಳೂ ಇಲ್ಲ

    ಶಿಕ್ಷಣ- 1967ರಲ್ಲಿ SSLC, 1978- ದೆಹಲಿ ಯೂನಿವರ್ಸಿಟಿಯಲ್ಲಿ ಬಿಎ ಪದವಿ, 1983ರಲ್ಲಿ ಅಹಮದಾಬಾದ್​ನಲ್ಲಿ ಎಂಎ ಪದವಿ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts