More

    ವಾಹನಗಳ ಮಾರ್ಗ ಬದಲಾವಣೆ

    ಹಾವೇರಿ: ಸಮಾರಂಭಕ್ಕೆ ದಾವಣಗೆರೆ ಕಡೆಯಿಂದ ಬರುವ ವಾಹನಗಳು ದೇವಗಿರಿ ಅಂಡರ್ ಬ್ರಿಡ್ಜ್ ಮೂಲಕ ಸಮಾರಂಭದ ಸ್ಥಳಕ್ಕೆ ಆಗಮಿಸಬೇಕು. ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಹಾನಗಲ್ಲ ಬ್ರಿಡ್ಜ್ ಮೂಲಕ ಹಾವೇರಿ ನಗರ ಪ್ರವೇಶಿಸಬೇಕು.
    ಹಾವೇರಿಯಿಂದ ದೇವಗಿರಿ, ಹುರಳಿಕೊಪ್ಪಿ, ಕೋಳೂರು, ಗಣಜೂರು, ಸವಣೂರಿಗೆ ಹೋಗುವ ಬಸ್ಸುಗಳು ಹಾನಗಲ್ ಬ್ರಿಡ್ಜ್ ಮೂಲಕ ಹೈವೇ ಸೇರಿ ನಂತರ ದೇವಗಿರಿ ಬ್ರಿಡ್ಜ್ ಮೂಲಕ ಸಂಚರಿಸಬೇಕು. ಜಿಲ್ಲಾ ಆಸ್ಪತ್ರೆಯಿಂದ ನೇತಾಜಿ ನಗರ, ದುಂಡಿ ಬಸವೇಶ್ವರ ವೃತ್ತ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುವ ರಸ್ತೆಯನ್ನು ತುರ್ತು ನಿರ್ಗಮನ ರಸ್ತೆಯನ್ನಾಗಿ ಘೋಷಿಸಿದೆ. ಅಜ್ಜಯ್ಯನ ಗುಡಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts