More

    ‘ನಮೋ ನಾರಾಯಣ’: ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

    ದುಬೈ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಮಾಡಿದ ಬೆನ್ನಲ್ಲೇ ವಿದೇಶದಲ್ಲಿ ಅದರಲ್ಲೂ ಮುಸ್ಲಿಂ ರಾಷ್ಟ್ರವಾದ ಅಬುಧಾಬಿಯಲ್ಲಿ ಮೊದಲ ಕಲ್ಲಿನ ಹಿಂದೂ ದೇವಾಲಯ ನಿರ್ಮಾಣವಾಗಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

    ಇದನ್ನೂ ಓದಿ: ರೈತರ ‘ದೆಹಲಿ ಚಲೋ’: ಶಂಭು ಗಡಿ ಉದ್ವಿಗ್ನ..ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

    ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಬುಧಾಬಿಯ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ದೇವಸ್ಥಾನವನ್ನು ಉದ್ಘಾಟನೆ ಮಾಡಿದ್ದಾರೆ. ಭಕ್ತರಿಗೆ ಈ ದೇಗುಲದ ಬಾಗಿಲು ಮಾರ್ಚ್ 1ನೇ ತಾರೀಕಿನಿಂದ ತೆರೆಯಲಿದೆ.

    ದೇಗುಲದ ವಿಶೇಷತೆ ಏನು?: ಈ ದೇವಾಲಯವನ್ನು ವೈಜ್ಞಾನಿಕ ತಂತ್ರಗಳೊಂದಿಗೆ ಪ್ರಾಚೀನ ವಾಸ್ತುಶಿಲ್ಪದ ವಿಧಾನಗಳನ್ನು ಬಳಸಿ ನಿರ್ಮಿಸಲಾಗಿದೆ. ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸ್ಥೆಯ(ಬಿಎಪಿಎಸ್​) ಹಿಂದೂ ಮಂದಿರವನ್ನು ತಾಪಮಾನವನ್ನು ಅಳೆಯಲು ಮತ್ತು ಭೂಕಂಪಗಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು 300 ಕ್ಕೂ ಹೆಚ್ಚು ಹೈಟೆಕ್ ಸಂವೇದಕಗಳೊಂದಿಗೆ ನಿರ್ಮಿಸಲಾಗಿದೆ, ದೇವಾಲಯದ ನಿರ್ಮಾಣದಲ್ಲಿ ಯಾವುದೇ ಲೋಹವನ್ನು ಬಳಸಲಾಗಿಲ್ಲ ಮತ್ತು ಅಡಿಪಾಯವನ್ನು ತುಂಬಲು ಹಾರುಬೂದಿಯನ್ನು ಬಳಸಲಾಗಿದೆ.

    ಅಬುಧಾಬಿಯಲ್ಲಿನ ಬಿಎಪಿಎಸ್​ ಹಿಂದೂ ಮಂದಿರವನ್ನು ಯುಎಇ ಸರ್ಕಾರವು ದಾನವಾಗಿ ನೀಡಿದ 27 ಎಕರೆ (11 ಹೆಕ್ಟೇರ್) ಜಾಗದಲ್ಲಿ ನಿರ್ಮಿಸಲಾಗಿದೆ. 2018 ರಲ್ಲಿ ಮೋದಿಯವರ ಯುಎಇ ಭೇಟಿಯ ಸಂದರ್ಭದಲ್ಲಿ ಭಾರತವು ಅದರ ನಿರ್ಮಾಣವನ್ನು ಘೋಷಿಸಿತ್ತು.

    ಉತ್ತರ ಭಾರತದ ನಗರವಾದ ಅಯೋಧ್ಯೆಯಲ್ಲಿ ಹಿಂದೂ ದೇವರು ರಾಮನ ಭವ್ಯವಾದ ದೇವಾಲಯವನ್ನು ಮೋದಿಯವರು ಕಳೆದ ತಿಂಗಳು 22ರಂದು ಉದ್ಘಾಟಿಸಿದ್ದರು.

    ದಶಕಗಳಿಂದ ಯುಎಇಯಲ್ಲಿ ದೇವಾಲಯಗಳು ಅಸ್ತಿತ್ವದಲ್ಲಿದ್ದರೂ, ಸಾಂಪ್ರದಾಯಿಕ ತಂತ್ರಗಳನ್ನು ಬಳಸಿ ನಿರ್ಮಿಸಲಾದ ಮೊದಲ ದೇವಾಲಯವಿದು ಎಂದು ಹೇಳಲಾಗುತ್ತಿದೆ. ರಾಜಸ್ಥಾನ ರಾಜ್ಯದ ಗುಲಾಬಿ ಮರಳುಗಲ್ಲು ಮತ್ತು ಬಿಳಿ ಇಟಾಲಿಯನ್ ಅಮೃತಶಿಲೆಯಿಂದ ಕಲ್ಲುಗಳನ್ನು ಭಾರತದಲ್ಲಿ ಕೆತ್ತಿ ದುಬೈನಲ್ಲಿ ಜೋಡಿಸಲಾಗಿದೆ.

    ಮೀನು ಹಿಡಿಯುವಾಗ ಫಿಶರ್​ಮ್ಯಾನ್​ಮೇಲೆ ಶಾರ್ಕ್​ಡೆಡ್ಲಿ ಅಟ್ಯಾಕ್.. ಆಮೇಲೇನಾಯ್ತು?​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts