More

    ಅಮೆರಿಕದಲ್ಲಿ ಮೀರಾಬಾಯಿ ಚಾನು ಚಿಕಿತ್ಸೆ, ತರಬೇತಿಗೆ ಮೋದಿ ನೆರವು!

    ನವದೆಹಲಿ : ಒಲಿಂಪಿಕ್ಸ್​ನಲ್ಲಿ ರಜತ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರಿಗೆ ಟೋಕಿಯೋಗೆ ತೆರಳುವ ಮುನ್ನ ಅಮೆರಿಕದಲ್ಲಿ ವೈದ್ಯಕೀಯ ಶುಶ್ರೂಷೆ ಮತ್ತು ತರಬೇತಿ ಒದಗಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಕೂಲ ಮಾಡಿಕೊಟ್ಟಿದ್ದರು ಎಂದು ಮಣಿಪುರ ಸಿಎಂ ಎನ್​.ಬೈರೆನ್ ಸಿಂಗ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಆಗಮಿಸಿರುವ ಬೈರೆನ್​ ಸಿಂಗ್​, ಈ ವಾರ ಮೋದಿ ಅವರನ್ನು ಭೇಟಿ ಮಾಡಿದಾಗ ಮೀರಾಬಾಯಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಸೂಚಿಸಿದ್ದಾಗಿ ಎಎನ್​ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಮಣಿಪುರದ ಜನರಿಗೆ ಈ ಬಗ್ಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್​ ಹೆಸರು

    ಪದಕ ಪಡೆದ ನಂತರ ವೇಯ್ಡ್​ಲಿಫ್ಟರ್​ ಚಾನು ಅವರನ್ನು ಸನ್ಮಾನಿಸಲು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಲಭಿಸಿದ ಸಹಾಯದ ಬಗ್ಗೆ ಹೇಳಿದರು ಎಂದಿರುವ ಸಿಂಗ್, “ನನಗೆ ಈ ಬಗ್ಗೆ ತಿಳಿದು ಆಶ್ಚರ್ಯವಾಯಿತು. ತಮ್ಮ ಮಸಲ್ ಆಪರೇಷನ್ ಮತ್ತು ಅಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ಆ ಅವಕಾಶ ಸಿಗದಿದ್ದರೆ, ಈ ಗುರಿ ಸಾಧಿಸಲಾಗುತ್ತಿರಲಿಲ್ಲ ಎಂದು ಚಾನು ಹೇಳಿದರು ಎಂದಿದ್ದಾರೆ.

    ಚಾನುಗೆ ಬೆನ್ನು ನೋವು ಉಂಟಾಗುತ್ತಿತ್ತು. ಈ ಬಗ್ಗೆ ಪಿಎಂಒಗೆ ಮಾಹಿತಿ ಸಿಕ್ಕಿದ್ದು, ಪ್ರಧಾನಿ ಮೋದಿ ನೇರವಾಗಿ ಆಸಕ್ತಿ ವಹಿಸಿದರು. ವಿದೇಶದಲ್ಲಿ ಆಕೆಯ ಚಿಕಿತ್ಸೆ ಮತ್ತು ತರಬೇತಿಯ ಎಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರ ಭರಿಸಿತು ಎಂದು ಹೇಳಿರುವ ಸಿಂಗ್​, “ಮತ್ತೊಬ್ಬ ಅಥ್ಲೀಟ್​ಗೂ ಪ್ರಧಾನಿ ಮೋದಿ ಹೀಗೇ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅವರು ಎಲ್ಲೂ ಪ್ರಸ್ತಾಪ ಮಾಡಿಲ್ಲ, ಇದು ಅವರ ದೊಡ್ಡತನ” ಎಂದಿದ್ದಾರೆ. (ಏಜೆನ್ಸೀಸ್)

    ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು

    ನೀರಿನ ಮೇಲೆ ಶೀರ್ಷಾಸನ! ಫಿನ್ಲೆಂಡ್​ ಮಹಿಳೆಯ ವಿಭಿನ್ನ ಪ್ರ’ಯೋಗ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts