More

    ಮೋದಿ ಸರ್ಕಾರ ಸಮೀಕ್ಷೆ ಜೈಕಾರ

    ನವದೆಹಲಿ: ಭಾರತೀಯರ ಎದೆಬಡಿತ ಹೆಚ್ಚಿಸಿರುವ ಲೋಕಸಭೆ ಚುನಾವಣೆಗೆ ದೇಶ ಸಜ್ಜಾಗಿದೆ. ಏ.19ರಂದು 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುವ ಮೊದಲೇ ಎಬಿಪಿ-ಸಿ ವೋಟರ್ ನಡೆಸಿದ ಕೊನೆಯ ಮತದಾನ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಇದರ ಪ್ರಕಾರ ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಎನ್​ಡಿಎ ಮೈತ್ರಿಕೂಟ 373 ಸ್ಥಾನ ಪಡೆಯುವ ಸಾಧ್ಯತೆ ನಿಚ್ಚಳವಾಗಿದ್ದರೆ, ವಿಪಕ್ಷಗಳ ಇಂಡಿ ಒಕ್ಕೂಟ 155 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಿದೆ.

    ನರೇಂದ್ರ ಮೋದಿ ಮೂರನೇ ಅವಧಿಗೂ ಪ್ರಧಾನಮಂತ್ರಿ ಆಗಿ ದೇಶದ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಮಂಗಳವಾರವಷ್ಟೇ ಹೊರಹೊಮ್ಮಿದ್ದ ಡೈಲಿಹಂಟ್ ಸಮೀಕ್ಷೆಯಲ್ಲೂ ಮೋದಿಗೇ ಅಧಿಕ ಜನಮೆಚ್ಚುಗೆ ಇರುವುದು ಬಯಲಾಗಿತ್ತು. ಇದೀಗ ಎಬಿಪಿ-ಸಿವೋಟರ್ ಸಮೀಕ್ಷೆಯಲ್ಲೂ ಮೋದಿಯೇ ಮುಂದಿನ ಪ್ರಧಾನಿ ಎಂಬ ಮುನ್ಸೂಚನೆ ಲಭಿಸಿದೆ. ಮೋದಿ ಮತ್ತೆ ಪ್ರಧಾನಿ ಆಗುವುದಷ್ಟೇ ಅಲ್ಲ, ಎನ್​ಡಿಎ ಮತಗಳಿಕೆ ಪ್ರಮಾಣ ಕೂಡ ಅಧಿಕವಾಗಿರಲಿದೆ. ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್​ಡಿಎ ಮೈತ್ರಿಕೂಟ 373 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದು, ಒಟ್ಟು ಮತಗಳಿಕೆ ಶೇ. 46.6ಕ್ಕೇ ಏರುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಶೇ. 45.1 ಮತಗಳಿಕೆ ಹೊಂದಿತ್ತು. ಇನ್ನೊಂದೆಡೆ ‘ಐಎನ್​ಡಿಐಎ’ ಒಕ್ಕೂಟ 155 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ. 39.8 ಮತಗಳಿಕೆ ಹೊಂದುವ ನಿರೀಕ್ಷೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಪ್ರಮಾಣ ಶೇ. 36.6 ಆಗಿತ್ತು.

    ದಕ್ಷಿಣ ಭಾರತದಲ್ಲಿ ಏನಿದೆ ಚಿತ್ರಣ?: ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳಗಳಲ್ಲಿ ಮಾತ್ರ ಐಎನ್​ಡಿಐಎ ಕಡೆ ಒಲವಿದೆ. ಆಂಧ್ರ, ತೆಲಂಗಾಣದಲ್ಲಿ ಎನ್​ಡಿಎ ಪರ ಒಲವು ವ್ಯಕ್ತವಾಗಿದೆ.

    ಮೋದಿ ಸರ್ಕಾರ ಸಮೀಕ್ಷೆ ಜೈಕಾರ

    ಮತಗಳಿಕೆಯಲ್ಲೂ ಎನ್​ಡಿಎ ಟಾಪ್: ಈ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎಗೇ ಸಿಂಹಪಾಲು ಎನ್ನುವುದು ಎನ್​ಡಿಟಿವಿ ನಡೆಸಿದ ಪೋಲ್ ಆಫ್ ಒಪಿನಿಯನ್ ಪೋಲ್ಸ್​ನಲ್ಲೂ ಕಂಡುಬಂದಿದೆ. ಈ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್​ಡಿಎ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 365ರಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಐಎನ್​ಡಿಐಎ 122 ಸ್ಥಾನಗಳನ್ನು ಗೆಲ್ಲಲಿದ್ದು, ಉಳಿದ 56 ಕ್ಷೇತ್ರಗಳು ಎನ್​ಡಿಎ-ಐಎನ್​ಡಿಐಎ ಜತೆ ಗುರುತಿಸಿಕೊಳ್ಳದ ಇತರ ಪಕ್ಷಗಳ ಪಾಲಾಗಲಿವೆ. ಕಳೆದ ಎರಡೂ ಅವಧಿಗಿಂತಲೂ ಈ ಸಲದ ಮತಗಳಿಕೆ ಹೆಚ್ಚಿರಲಿದೆ. 2014ರಲ್ಲಿ 336 ಸ್ಥಾನಗಳನ್ನು ಗಳಿಸಿದ್ದ ಎನ್​ಡಿಎ 2019ರಲ್ಲಿ 353 ಸ್ಥಾನಗಳನ್ನು ಗೆದ್ದಿದ್ದು, ಮತಗಳಿಕೆಯಲ್ಲೂ ಶೇ. 5 ಏರಿಕೆ ಆಗಿತ್ತು. ಎನ್​ಡಿಎ ಮತಗಳಿಕೆ ಈ ಚುನಾವಣೆಯಲ್ಲಿ ಇನ್ನೂ ಶೇ. 3.4 ಹೆಚ್ಚಾಗಲಿದೆ ಎಂದು ಈ ಸಮೀಕ್ಷೆ ತಿಳಿಸಿದೆ.

    i

    ಮೊದಲ ಹಂತದ ಸಮರಕ್ಕೆ ಭಾರತ ಸಜ್ಜು: ಒಟ್ಟು ಏಳು ಹಂತದ ಲೋಕಸಭಾ ಚುನಾವಣೆಯ ಪೈಕಿ ಮೊದಲ ಹಂತದ ಮತದಾನ ಏ.19ಕ್ಕೆ ನಡೆಯಲಿದೆ. 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಜನರು ಹಕ್ಕು ಚಲಾಯಿಸಲಿದ್ದಾರೆ. ಏಪ್ರಿಲ್ 26ಕ್ಕೆ ದೇಶದ 2ನೇ ಹಂತ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಒಟ್ಟು 7 ಹಂತದಲ್ಲಿ ನಡೆಯಲಿರುವ ಮತದಾನಕ್ಕೆ ಜೂ.1ರಂದು ತೆರೆ ಬೀಳಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್​ಗಢ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ ಮೊದಲ ಹಂತದ ಮತದಾನ ನಡೆಯುವ ಪ್ರಮುಖ ರಾಜ್ಯಗಳು.

    ಹೇಗಿದೆ ಲೋಕ ಕದನ ಕಣ?

    1. 21 ರಾಜ್ಯ 102 ಕ್ಷೇತ್ರಗಳಲ್ಲಿ ಮತದಾನ

    2. 11 ಮಂದಿ ಘಟಾನುಘಟಿಗಳು ಕಣದಲ್ಲಿ

    3. ಒಟ್ಟು 8 ಕೇಂದ್ರ ಸಚಿವರ ಅದೃಷ್ಟ ಪರೀಕ್ಷೆ

    4. ನಾಗ್ಪುರದಲ್ಲಿ ನಿತಿನ್ ಗಡ್ಕರಿ ಕಣಕ್ಕೆ

    5. ಅರುಣಾಚಲದಲ್ಲಿ ಕಿರಣ್​ರಿಜಿಜು ಸ್ಪರ್ಧೆ

    6. ಅಸ್ಸಾಂನಲ್ಲಿ ಸರ್ಬಾನಂದ ಸೊನೊವಾಲ್ ಸ್ಪರ್ಧೆ

    7. ಮುಜಾಫರ್​ನಗರದಲ್ಲಿ ಸಂಜೀವ್ ಬಲಿಯಾನ್

    8. ಉಧಮ್ುರದಲ್ಲಿ ಜಿತೇಂದ್ರ ಸಿಂಗ್ ಕಣಕ್ಕೆ

    ಎಲ್ಲೆಲ್ಲಿ ಏನು ಸ್ಥಿತಿ?

    1. ಉ.ಪ್ರದೇಶ-80ರಲ್ಲಿ ಎನ್​ಡಿಎಗೆ 73 ಸ್ಥಾನ, ಇಂಡಿಗೆ 7 ಸ್ಥಾನ

    2. ಮಧ್ಯಪ್ರದೇಶ- 29ರಲ್ಲಿ 28 ಎನ್​ಡಿಎ, 1ರಲ್ಲಿ ಇಂಡಿ ಗೆಲುವು

    3. ಮಹಾರಾಷ್ಟ್ರ-48ರಲ್ಲಿ 30 ಎನ್​ಡಿಎ, 18ರಲ್ಲಿ ಇಂಡಿ ಗೆಲುವು

    4.  ಬಿಹಾರ- 40ರಲ್ಲಿ ಎನ್​ಡಿಎ 33, ಇಂಡಿಗೆ 7 ಸ್ಥಾನ

    ಬಾಲಕಿ ಅಪಹರಿಸಿ ಜಮೀನು ಬರೆಸಿಕೊಂಡ ಡಿಕೆ ಶಿವಕುಮಾರ್: ಮಾಜಿ ಪ್ರಧಾನಿ ದೇವೇಗೌಡ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts