More

    ಚಿನ್ನದ ನಾಡಿನಲ್ಲಿ ಮೋದಿ ಮೇನಿಯ

    ಕೋಲಾರದಲ್ಲಿ ನವಕರ್ನಾಟಕ ಸಮಾವೇಶಕ್ಕೆ ಚಾಲನೆ l ಬಿಜೆಪಿ ಮತ್ತೊಮ್ಮೆ ಗೆಲ್ಲಿಸುವಂತೆ ಪ್ರಧಾನಿ ಕರೆ

    ಕೋಲಾರ: ರಾಜ್ಯವನ್ನು ನಂ.1 ರಾಜ್ಯ ಮಾಡುವ ಸಂಕಲ್ಪ ಮಾಡಿದ್ದು, ಜನರು ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಮನವಿ ಮಾಡಿದರು.
    ಕೋಲಾರ ಸಮೀಪದ ಕೆಂದಟ್ಟಿ ಬಳಿ ಭಾನುವಾರ ಆಯೋಜಿಸಿದ್ದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.
    ಅಸ್ಥಿರ ಸರ್ಕಾರಗಳಿಂದ ಭ್ರಷ್ಟಾಚಾರ ಹೆಚ್ಚಾಗಿ ಅಭಿವೃದ್ಧಿ ಕ್ಷೀಣಿಸುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ರಾಜ್ಯದಲ್ಲೂ ಈ ಬಾರಿ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಸುಸ್ಥಿರ ಸರ್ಕಾರ ರಚನೆಗೆ ಸಹಕರಿಸಿದರೆ ರಾಜ್ಯವೂ ಶರವೇಗದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದರು.
    ಸಮಗ್ರ ಅಭಿವೃದ್ಧಿಗಾಗಿ ಮತ ನೀಡಿ: ರಾಜ್ಯವನ್ನು ಭ್ರಷ್ಟ ಕಾಂಗ್ರೆಸ್​ ಕೈಯಿಂದ ರಕ್ಷಿಸುವುದು ನಮ್ಮ ಗುರಿಯಾಗಿದೆ. ಗುಜರಿ ಇಂಜಿನ್​ನಂತಾಗಿರುವ ಕಾಂಗ್ರೆಸ್​ನ್ನು ಮತದಾರರು ತಿರಸ್ಕರಿಸಬೇಕು. ಸದೃಢ ಡಬಲ್​ ಇಂಜಿನ್​ ಸರ್ಕಾರಕ್ಕಾಗಿ ಮತ ನೀಡಬೇಕು. ಈ ಬಾರಿ ನೀವು ಹಾಕುವ ಮತ ಒಬ್ಬ ಶಾಸಕ, ಸಚಿವ ಅಥವಾ ಒಬ್ಬರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಮಾತ್ರವಲ್ಲ, ಸಮಗ್ರ ಅಭಿವೃದ್ಧಿಯ ನಾಡುಕಟ್ಟುವುದಕ್ಕಾಗಿ, 25 ವರ್ಷದ ಭವ್ಯ ಭವಿಷ್ಯಕ್ಕಾಗಿ ಎಂದು ಮೋದಿ ವಿವರಿಸಿದರು.
    ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಎಸ್​.ಮುನಿಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್​, ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್​, ಸಂಸದ ಪಿ.ಸಿ.ಮೋಹನ್​,
    ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ,
    ಅಭ್ಯರ್ಥಿಗಳಾದ ಆರ್​.ವರ್ತೂರು ಪ್ರಕಾಶ್​, ಕೆ.ಎಸ್​.ಮಂಜುನಾಥಗೌಡ, ಎಂ.ನಾರಾ ಯಣಸ್ವಾಮಿ, ಅಶ್ವಿನಿ ಸಂಪಂಗಿ, ಗುಂಜೂರು ಶ್ರೀನಿವಾಸರೆಡ್ಡಿ, ಸೀಗೆಹಳ್ಳಿ ಸುಂದರ್​ ಇತರರು ಇದ್ದರು.

    ಕನ್ನಡದಲ್ಲಿ ಭಾಷಣ ಆರಂಭ: ಚಿನ್ನದ ನಾಡು ಕೋಲಾರ ಜನತೆಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಕನ್ನಡದಲ್ಲಿ ಮಾತು ಪ್ರಾರಂಭಿಸಿ, ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದು ನೋಡಿದರೆ ಕಾಂಗ್ರೆಸ್​, ಜೆಡಿಎಸ್​ ಅನ್ನು ರಾಜ್ಯದಲ್ಲಿ ಕ್ಲೀನ್​ ಬೋಲ್ಡ್​ ಮಾಡುತ್ತಾರೆ ಎಂಬ ವಿಶ್ವಾಸ ಮೂಡುತ್ತಿದೆ. ಇದನ್ನು ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಕಂಠಕಪ್ರಾಯವಾಗಿರುವ ಈ ಪಕ್ಷಗಳನ್ನು ಕಿತ್ತೊಗೆಯಲು ತೀಮಾರ್ನ ಮಾಡಿದ್ದಾರೆ ಎಂದರು. ಕಡೆಯಲ್ಲಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲಿ ಹೇಳಿದರು.

    ಜಾಮೀನು ಮೇಲಿದ್ದಾರೆ: ಕಾಂಗ್ರೆಸ್​ ಆಡಳಿತವಿದ್ದಾಗ ಪ್ರತಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿತ್ತು. ರಾಜಪರಿವಾರದ ಜತೆ ಅವರ ಪಟಾಲಂ ಸಾವಿರಾರು ಕೋಟಿ ರೂಪಾಯಿ ನುಂಗಿ ನೀರುಕುಡಿದಿತ್ತು. ಇದರ ಪರಿಣಾಮ ನ್ಯಾಯಾ ಲಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಎಲ್ಲರು ಜಾಮೀನು ಪಡೆದು ಹೊರಗೆ ಓಡಾಡಿ ಕೊಂಡಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೆ ಸೋನಿಯಾ, ರಾಹುಲ್​, ಪ್ರಿಯಾಂಕಾ ಮತ್ತು ಪರಿವಾರದ ವಿರುದ್ಧ ಮೋದಿ ವಾಗ್ಧಾಳಿ ನಡೆಸಿದರು. ಭ್ರಷ್ಟಾಚಾರ ನಡೆಸಿದ್ದವರ ವಿರುದ್ಧ ಕಾಂಗ್ರೆಸ್​ ಸರ್ಕಾರಗಳು 5 ಸಾವಿರ ಕೋಟಿ ರೂ.ವಸೂಲಿ ಮಾಡಿದ್ದವು. ಆದರೆ ನಮ್ಮ ಸರ್ಕಾರ ಭ್ರಷ್ಟರಿಂದ 1ಲಕ್ಷ ಕೋಟಿ ರೂ.ವಸೂಲಿ ಮಾಡಿದೆ ಎಂದರು.

    ಬಹುರಾಷ್ಟ್ರೀಯ ಕಂಪೆನಿಗಳು ಬರುತ್ತವೆ : ಯಾವುದೇ ಭಾಗ ಅಭಿವೃದ್ಧಿಗೆ ತೆರೆದುಕೊಳ್ಳ ಬೇಕಾದರೆ ರಸ್ತೆ ಸಂಪರ್ಕ ಬಹುಮುಖ್ಯವಾದುದು. ಇದನ್ನು ಗಮನಿಸಿಯೇ ಕೇಂದ್ರ ಸರ್ಕಾರ ಕೋಲಾರದ ಮೂಲಕ ಬೆಂಗಳೂರು&ಚೆನ್ನೆ$ ರಸ್ತೆ ಷಟ್ಪಥವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಹಾದು ಹೋಗುವ ಬೆಂಗಳೂರು&ಚೆನ್ನೆ$ ಎಕ್ಸ್​ಪ್ರೆಸ್​ ವೇ ಕಾಮಗಾರಿ ಭರದಿಂದ ಸಾಗುತ್ತಿದೆ. ಇದು ಪೂರ್ಣವಾಗುತ್ತಿದ್ದಂತೆ ಬಹುರಾಷ್ಟ್ರೀಯ ಕಂಪೆನಿಗಳು ಜಿಲ್ಲೆಗೆ ಬರುತ್ತವೆ. ಮುಳಬಾಗಿಲು ದೋಸೆ ಅದರ ರುಚಿಯಿಂದ ಇವತ್ತು ಹೇಗೆ ಎಲ್ಲ ಕಡೆ ಸಿಗ್ತಿದೆಯೋ ಅದೇ ರೀತಿ ಕೋಲಾರದ ಉತ್ಪನ್ನಗಳು ಮುಂದೊಂದು ದಿನ ಎಲ್ಲೆಡೆ ಸಿಗುವಂತಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಹರಿದುಬಂದ ಜನಸಾಗರ: ಪ್ರಧಾನಿ ನರೇಂದ್ರಮೋದಿ ಅವರನ್ನು ಸಮಾವೇಶದಲ್ಲಿ ಕಾಣಲು ಜನಸಾಗರವೇ ಹರಿದುಬಂದಿತ್ತು. ಕೋಲಾರ ಜಿಲ್ಲೆಗಿಂತ ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೆಚ್ಚಾಗಿದ್ದರು. ಆರೋಗ್ಯ ಸಚಿವ ಡಾ.ಸುಧಾಕರ್​, ಎಂಟಿಬಿ ನಾಗರಾಜ್​, ಬಾಗೇಪಲ್ಲಿ ಅಭ್ಯರ್ಥಿ ಮುನಿರಾಜು, ಕೋಲಾರ ಅಭ್ಯರ್ಥಿ ವರ್ತೂರು ಆರ್​. ಪ್ರಕಾಶ್​ ವೇದಿಕೆ ಮೇಲೆ ಕಾಣುತ್ತಿದ್ದಂತೆಯೇ ಜೈಕಾರ ಮೊಳಗಿದವು. ಸ್ವಾಗತ ದ್ವಾರದಲ್ಲಿ ಬಿಗಿ ತಪಾಸಣೆ ನಡೆಸಿ ಒಳಗಡೆ ಬಿಡಲಾಗುತ್ತಿತ್ತು. 11.35ಕ್ಕೆ ಹೆಲಿಕಾಪ್ಟರ್​ ಮೂಲಕ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಮೋದಿ, ಮೋದಿ ಎಂದು ಜಯಘೋಷ ಮೊಳಗಿಸಿದರು.

    ಚಿನ್ನದ ನಾಡಿನಲ್ಲಿ ಮೋದಿ ಮೇನಿಯ

    ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾ ಜಿಲ್ಲೆಯಲ್ಲಿ 8 ಸ್ಥಾನ


    ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಖಜಾನೆ ಕಾಯುವ ಕಾಳಿಂಗ ಸರ್ಪವಾಗಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್​ನವರು ಹತಾಸೆಗೊಂಡು ನಾಲಿಗೆಗೆ ಬಿಗಿಯಿಲ್ಲದೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್​ ಕಾಂಗ್ರೆಸ್​ನವರ ವಿರುದ್ಧ ಹರಿಹಾಯ್ದರು.
    ಕೋಲಾರ ತಾಲೂಕಿನ ಕೆಂದಟ್ಟಿ ಬಳಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್​ನವರಿಗೆ ಪ್ರಧಾನಿ ಅವರನ್ನು ನಿಂದಿಸುವುದೇ ಕೆಲಸವಾಗಿದೆ. 2014ರ ಚುನಾವಣೆಯಲ್ಲಿ ಮೋದಿ ಅವರನ್ನು ಟೀಕಿಸುತ್ತಲೇ ಇದ್ದರು, ಆದರೆ ಅವರು ಪ್ರಧಾನಿಯಾದರು. ಅವರು ಟೀಕಿಸುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ಸೋನಿಯಾಗಾಂಧಿ ಮತ್ತು ರಾಹುಲ್​ಗಾಂಧಿ ಅವರು ನರೇಂದ್ರ ಮೋದಿ ಅವರ ಸಮುದಾಯವನ್ನು ಕಳ್ಳ ಎಂದು ಕರೆದ ಕಾರಣ 2 ವರ್ಷ ಜೈಲು ಶಿೆ ಅನುಭವಿಸುವಂತಾಗಿದೆ ಎಂದರು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಕೋಲಾರ& ಚಿಕ್ಕಬಳ್ಳಾಪುರ&ಬೆಂಗಳೂರು
    ಗ್ರಾಮಾಂತರ ಜಿಲ್ಲೆಯ
    15 ಸ್ಥಾನಗಳಲ್ಲಿ 8 ಸ್ಥಾನಗಳ ಗೆಲುವು ಗ್ಯಾರಂಟಿ. ಕೋಲಾರ ಜಿಲ್ಲೆಯಲ್ಲಿ 6ಕ್ಕೆ 6 ಸ್ಥಾನಗಳು ಗೆಲುವು ಸಾಧಿಸಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts