More

    ಮತ್ತೊಬ್ಬ ಮಾಡೆಲ್​ ಆತ್ಮಹತ್ಯೆ: 2 ವಾರದಲ್ಲಿ ನಾಲ್ವರು ಸೂಸೈಡ್​​, ಕಾರಣ ನಿಗೂಢ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಾಡೆಲ್​ಗಳ ಸರಣಿ ಸಾವು ಮುಂದುವರಿದಿದೆ. ಇದೂ ಸೇರಿ ಎರಡು ವಾರದಲ್ಲಿ ನಾಲ್ವರು ಮಾಡೆಲ್​​ಗಳು ಆತ್ಮಹತ್ಯೆಗೆ ಶರಣಾಗಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

    ಸರಸ್ವತಿ ದಾಸ್​ (18) ಆತ್ಮಹತ್ಯೆಗೆ ಶರಣಾದ ಮಾಡೆಲ್. ಕೋಲ್ಕತ್ತಾದ ಕಸ್ಬಾದ ತನ್ನ ಮನೆಯಲ್ಲಿ ದುಪ್ಪಟ್ಟಾದಿಂದ ನೇಣಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಡೆಲ್​ ಜತೆಗೆ ಮೇಕಪ್​ ಆರ್ಟಿಸ್ಟ್​ ಆಗಿದ್ದ 18 ವರ್ಷದ ಈಕೆ ಏಕಾಏಕಿ ಆತ್ಮಗಹತ್ಯೆಗೆ ಶರಣಾಗಿದ್ದಾಳೆ.

    ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಕೈಗೊಳ್ಳಲಾಗುವುದು. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸರಸ್ವತಿ ದಾಸ್​ ಇತರೆ ಮಾಡೆಲ್​ ಸೇರಿದಂತೆ ಕಿರುತೆರೆ ನಟ ಜತೆಯೂ ಗಳ ನಿರಂತರ ಸಂಪರ್ಕದಲ್ಲಿದ್ದು, ಉತ್ತಮ ಬಾಂಧವ್ಯ ಹೊಂದಿದ್ದರು. ತೀರಾ ಆಪ್ತರೆನಿಸಿಕೊಂಡಿದ್ದ ಇವರು ಈಕೆಯ ಸಾವು ಆತ್ಮಹತ್ಯೆ ಅಲ್ಲ ಎಂದು ಶಂಕಿಸಿದ್ದಾರೆ. ಸದ್ಯ ಆಕೆಯ ಮೊಬೈಲ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್​)

    ಪೆಟ್ರೋಲ್​ ಬಂಕ್​ಗಳ ಮುಂದೆ ಜನವೋ ಜನ: ನಾಳೆಯೇ ಮುಷ್ಕರ ಎಂದು ಬಂದವರಿಗೆ ಭಾರೀ ನಿರಾಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts