More

    ಮೋಚಿ ಕುಟುಂಬಕ್ಕೆ ತಲಾ 2 ಸಾವಿರ ವಿತರಣೆ ; ಸಮುದಾಯದ ಅಭಿವೃದ್ಧಿಗೆ ಸಂಗ್ರಹಿಸಿದ್ದ ಹಣ ಪುನಾ ಹಂಚಿಕೆ

    ಮಸ್ಕಿ: ಕರೊನಾ ಎಫೆಕ್ಟ್‌ನಿಂದ ಸಂಕಷ್ಟ ಎದುರಿಸುತ್ತಿರುವ ಮೋಚಿ ಸಮುದಾಯದ 110 ಮನೆಗಳಿಗೆ ಪ್ರತಿ ಕುಟುಂಬಕ್ಕೆ ತಲಾ 2000 ರೂ. ನಗದು ಹಾಗೂ ಆಹಾರ ಧಾನ್ಯದ ಕಿಟ್‌ಗಳನ್ನು ಸಮುದಾಯದ ಮುಖಂಡರು ಬುಧವಾರ ವಿತರಿಸಿದರು.

    ಸಮಾಜದ ಅಭಿವೃದ್ಧಿಗಾಗಿ ಮುಖಂಡರು ಈ ಹಿಂದೆ ಸಮುದಾಯದವರಿಂದ ದೇಣಿಗೆ ಸಂಗ್ರಹಿಸಿದ್ದರು. ಕರೊನಾ ಭೀತಿಯಿಂದ ದುಡಿಮೆ ಇಲ್ಲದ ಕಷ್ಟ ಕಾಲಕ್ಕೆ ಸಮಾಜದಲ್ಲಿ ಉಳಿತಾಯ ಮಾಡಿದ 2.20 ಲಕ್ಷ ರೂ. ಅನ್ನು ಮತ್ತೆ ನೀಡುವ ಮೂಲಕ ಸಮುದಾಯದ ಅಧ್ಯಕ್ಷ ಗಂಗಪ್ಪ ಪೂಜಾರಿ ಹಾಗೂ ಪದಾಧಿಕಾರಿಗಳು ಉತ್ತಮ ಕಾರ್ಯ ಮಾಡಿದ್ದಾರೆ.

    ಪಟ್ಟಣದ ಅಗಸಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಬ್ಬ ಮಹಿಳೆಯರಿಗೆ ಧವಸ ಧಾನ್ಯ, ತರಕಾರಿ ಹಂಚಿದರು. ಮುಖಂಡರಾದ ತಾಪಂ ಮಾಜಿ ಸದಸ್ಯ ಹನುಮಂತಪ್ಪ ಮೋಚಿ, ರಾಮಣ್ಣ ಗಡಗಿ, ಶಿಕ್ಷಕರಾದ ಲಕ್ಷ್ಮಣ ಮೋಚಿ, ಶಂಕರ್, ಮಲ್ಲಯ್ಯ ಕಿನ್ನಾಳ, ದುರುಗಪ್ಪ ಕಿನ್ನಾಳ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts