More

    ಏಪ್ರಿಲ್​ 1ರ ನಂತರ ದುಬಾರಿಯಾಗಲಿವೆ ಮೊಬೈಲ್​ ಫೋನ್​ಗಳು; ಬೇಕಿದ್ದರೆ ಈಗಲೇ ಖರೀದಿ ಮಾಡಿಬಿಡಿ…

    ನವದೆಹಲಿ: ಮೊಬೈಲ್​ ಫೋನ್​ಗಳು ಹಾಗೂ ಅದರ ಬಿಡಿ ಭಾಗಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ನವದೆಹಲಿಯಲ್ಲಿ ಇಂದು ನಡೆದ 39ನೇ ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಮೊಬೈಲ್​ ಫೋನ್​ಗಳು ದುಬಾರಿಯಾಗಲಿವೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಮೊಬೈಲ್​ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಇಷ್ಟು ದಿನ ಶೇ.12 ಇತ್ತು. ಅದನ್ನೀಗ ಶೇ.6ರಷ್ಟು ಹೆಚ್ಚಿಸಲು ಜಿಎಸ್​ಟಿ ಕೌನ್ಸಿಲ್​ನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ಮಾಡಲಾಗಿದೆ. ಈ ಪರಿಷ್ಕೃತ ಜಿಎಸ್​ಟಿ ಏಪ್ರಿಲ್​ 1ರಿಂದ ಅನ್ವಯ ಆಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

    ಹಾಗೇ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಪರಿಶೀಲನಾ ಸೇವೆಗಳ ಮೇಲಿನ ಜಿಎಸ್​ಟಿ ದರವನ್ನು ಶೇ.18ರಿಂದ ಶೇ.5ಕ್ಕೆ ಪೂರ್ಣ ಇನ್​​ಪುಟ್​ ಟ್ಯಾಕ್ಸ್​ ಕ್ರೆಡಿಟ್​ನೊಂದಿಗೆ ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೊಬೈಲ್​ ಫೋನ್​ಗಳ ಮೇಲಿನ ಜಿಎಸ್​ಟಿ ಹೆಚ್ಚಳ ಆಗಿದ್ದರಿಂದ ಬೆಲೆ ಹೆಚ್ಚಳ ಆಗುವುದು ಸಹಜ. ಈ ಬೆಲೆ ಹೆಚ್ಚಳ ಮೊಬೈಲ್​ ತಯಾರಿಕಾ ಕಂಪನಿಗಳ ಮೇಲೆ ಅವಲಂಬಿತವಾಗಿರುತ್ತದೆ. (ಏಜೆನ್ಸೀಸ್​)

    VIDEO: ‘ಕರೊನಾ ಭಜನೆ’ ನೀವು ಕೇಳಿದ್ದೀರಾ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಅದ್ಭುತ ಮ್ಯೂಸಿಕ್​ನೊಂದಿಗಿನ ಈ ಹಾಡು ಕಾಮಿಡಿನಾ? ನಾನ್​ಸೆನ್ಸಾ?

    ಅನ್ನಸಂತರ್ಪಣೆ ಮುಗಿಯುತ್ತಿದ್ದಂತೆ ಅಸ್ವಸ್ಥರಾದ ಮಂದಿ; 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts