More

    ಮುಂಬೈ ಲೋಕಲ್​ ಟ್ರೇನ್​ನಲ್ಲಿ ಮೊಬೈಲ್​ಫೋನ್ ಜುಗಾಡ್ ವೈರಲ್​: ಮೆಟ್ಟಿಲ ಬಳಿ ನಿಂತು ಹಾಡು ಕೇಳಲು ವಿಶಿಷ್ಟ ಐಡಿಯಾ

    ಮುಂಬೈ: ಮುಂಬೈ ಲೋಕಲ್​ನಲ್ಲಿ ಪ್ರಯಾಣಿಸುವುದು ಹರಸಾಹಸದ ಕೆಲಸ. ಸಾಮಾನ್ಯವಾಗಿ ಸಾಕಷ್ಟು ದಟ್ಟಣೆ ಈ ರೈಲುಗಳಲ್ಲಿ ಇರುತ್ತವೆ. ವ್ಯಕ್ತಿಯೊಬ್ಬ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು ರೈಲಿನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸಿದ್ದಾನೆ. ಕಿಕ್ಕಿರಿದ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಫೋನ್ ಹ್ಯಾಂಡ್ಸ್-ಫ್ರೀ ಬಳಸಲು ಈತ ಮಾಡಿದ ‘ಜುಗಾಡ್​’ನ (ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಕಂಡುಕೊಳ್ಳಲು ಅಥವಾ ಅಗ್ಗದ, ಮೂಲ ವಸ್ತುಗಳನ್ನು ಬಳಸಿಕೊಂಡು ಏನನ್ನಾದರೂ ಸರಿಪಡಿಸಲು ಅಥವಾ ಮಾಡಲು ಕೌಶಲ ತೋರುವ ಮತ್ತು ಕಲ್ಪನೆಯ ಬಳಕೆಯನ್ನು ಸ್ಥಳೀಯ ಭಾಷೆಯಲ್ಲಿ ಜುಗಾಡ್​ ಎಂದು ಕರೆಯುತ್ತಾರೆ.) ವಿಡಿಯೋ ಈಗ ವೈರಲ್​ ಆಗಿದೆ.

    ಮುಂಬೈನ ಲೋಕಲ್ ರೈಲಿನಲ್ಲಿ ಡೋರ್ ಪ್ಯಾನೆಲ್‌ಗೆ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್ ಫಿಕ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಂಬೈ ಲೋಕಲ್ ಟ್ರೇನ್​ನಲ್ಲಿ ಈ ಅಸಾಮಾನ್ಯ ಘಟನೆ ವರದಿಯಾಗಿದೆ, ಪ್ರಯಾಣಿಕನೊಬ್ಬ ರೈಲಿನ ಫುಟ್‌ಬೋರ್ಡ್‌ನಲ್ಲಿ (ಮೆಟ್ಟಿಲು) ನಿಂತುಕೊಂಡು ಇಯರ್‌ಫೋನ್‌ ಮೂಲಕ ಸಂಗೀತವನ್ನು ಆಸ್ವಾದಿಸುವುದಕ್ಕಾಗಿ ತನ್ನ ಫೋನ್ ಅನ್ನು ಡೋರ್ ಪ್ಯಾನೆಲ್‌ಗೆ ಅಂಟಿಸುತ್ತಿರುವ ದೃಶ್ಯ ಇದಾಗಿದೆ. ನಿಲ್ದಾಣದ ಎದುರಿನ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಈ ವ್ಯಕ್ತಿಯ ವಿಶಿಷ್ಟ ಟೆಕ್ನಿಕ್​ ಗಮನಿಸಿ ಗಮನಿಸಿ ಇಡೀ ಘಟನೆಯನ್ನು ತಮ್ಮ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ.

    “ಮುಂಬೈನಲ್ಲಿ ಮಾತ್ರ,” ಎಂದು @_aamchi_mumbai_ ಬಳಕೆದಾರರು ಕಿರು ಕ್ಲಿಪ್ ಅನ್ನು Instagram ನಲ್ಲಿ ಹಂಚಿಕಂಡಿದ್ದಾರೆ. “ಯೇ ಟೆಕ್ನಾಲಜಿ ಮುಂಬೈ ಸೆ ಬಾಹರ್ ನಹಿ ಜಾನಿ ಚಾಹಿಯೇ (ಈ ತಂತ್ರಜ್ಞಾನವು ಮುಂಬೈನಿಂದ ಹೊರಹೋಗಬಾರದು),” ಎಂದು ವೀಡಿಯೊದಲ್ಲಿ ಬರೆಯಲಾಗಿದೆ. ಈ ಕ್ಲಿಪ್ ಅನ್ನು ಟ್ರೆಂಡಿಂಗ್ ಹಾಡು ‘ಮೋಯೆ ಮೋಯೆ’ ಜತೆ ಅಪ್‌ಲೋಡ್ ಮಾಡಲಾಗಿದೆ.

    ಆ ವ್ಯಕ್ತಿ ತನ್ನ ಸುರಕ್ಷೆಯನ್ನು ಪಣಕ್ಕಿಟ್ಟು ರೈಲಿನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಕಿಕ್ಕಿರಿದ ಲೋಕಲ್​ ಟ್ರೇನ್​ನಲ್ಲಿ ಪ್ರಯಾಣಿಸುವಾಗ ತನ್ನ ಮೊಬೈಲ್ ಫೋನ್ ಹ್ಯಾಂಡ್ಸ್-ಫ್ರೀ ಬಳಸಲು ಅವನು ‘ಜುಗಾಡ್​’ ಮಾಡಿದ್ದು, ತನ್ನ ಸ್ಮಾರ್ಟ್‌ಫೋನ್ ಅನ್ನು ಎರಡನೇ ದರ್ಜೆಯ ಕಂಪಾರ್ಟ್‌ಮೆಂಟ್‌ನ ಬಾಗಿಲಿನ ಪಕ್ಕದಲ್ಲಿ ಇರಿಸಿದ್ದಾನೆ. ವೀಡಿಯೊದ ಕೊನೆಯಲ್ಲಿ, ಆ ವ್ಯಕ್ತಿ ತನ್ನನ್ನು ಚಿತ್ರೀಕರಿಸಲಾಗುತ್ತಿದೆ ಎಂದು ತಿಳಿದ ತಕ್ಷಣ, ಪೋಸ್ ನೀಡಿದ್ದಾನೆ. ಅಲ್ಲದೆ, ಕ್ಯಾಮೆರಾದತ್ತ ಕೈ ಬೀಸಿದ್ದಾನೆ.

    ಕ್ಲಿಪ್ ಅನ್ನು ಕೇವಲ ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದುವರೆಗೆ 1,10,000 ಕ್ಕೂ ಹೆಚ್ಚು ಲೈಕ್​ಗಳು ಮತ್ತು 55 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಇಂಟರ್​ನೆಟ್​ ಬಳಕೆದಾರರು ವೀಡಿಯೊಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಯಾಣಿಕರು ಮತ್ತು ಅವರ ಸಾಧನದ ಸುರಕ್ಷತೆಯ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರೆ, ಇತರರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ಭರ್ತಿ ಮಾಡಿದ್ದಾರೆ.

    “ಮುಂಬೈ ಆರಂಭಿಕರಿಗಾಗಿ ಅಲ್ಲ” ಎಂದು ಒಬ್ಬ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ. “ಇದರ ನಂತರ ವಿಜ್ಞಾನವು ವಿಜ್ಞಾನವಲ್ಲ” ಎಂದು ಮತ್ತೊಬ್ಬರು ಹಾಸ್ಯಾಸ್ಪದವಾಗಿ ಬರೆದಿದ್ದಾರೆ.

    ಸಂಸತ್ತಿನ​ ಭದ್ರತೆ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

    ಮೋಸ ಮಾಡಲು ಡೀಪ್‌ಫೇಕ್ ಚಿತ್ರ, ವೀಡಿಯೊ ಬಳಸಿಕೊಂಡು ನಕಲಿ ಸಂದರ್ಶನ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಇನ್ಫೋಸಿಸ್​ ನಾರಾಯಣ ಮೂರ್ತಿ

    ಬಿಜೆಪಿ ಕಾರ್ಯಕರ್ತನ ಕೈತುಂಡರಿಸಿದ ವ್ಯಕ್ತಿ ಮನೆ ನೆಲಸಮ: ಮಧ್ಯಪ್ರದೇಶದಲ್ಲಿ ಶುರುವಾಯಿತು ಬುಲ್​ಡೋಜರ್​ ಕಲ್ಚರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts