More

    ಮೊಬೈಲ್‌ನ ಅತಿಬಳಕೆ ಬೇಡ

    ಕಂಪ್ಲಿ: ವಿದ್ಯಾರ್ಥಿಗಳು ಮೊಬೈಲ್ ಮಾಯಾಲೋಕದಲ್ಲಿ ಮುಳುಗಬಾರದು ಎಂದು ಗಂಗಾವತಿಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಸದಸ್ಯ ಅಜ್ಮೀರ್ ನಂದಾಪುರ ಹೇಳಿದರು.

    ಇದನ್ನೂ ಓದಿ: ಶಕ್ತಿ ಯೋಜನೆ | ಮೊಬೈಲ್​ನಲ್ಲಿ ದಾಖಲೆ ಕೊಟ್ಟರೂ ಉಚಿತ ಪ್ರಯಾಣಕ್ಕೆ ಅವಕಾಶ

    ಇಲ್ಲಿನ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನವು ಶನಿವಾರ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

    ಮೊಬೈಲ್ ಭವಿಷ್ಯ ರೂಪಿಸುವ ಸಾಧನವನ್ನಾಗಿ ಮಾಡಿಕೊಳ್ಳಿ. ಕೆವಲ ಪದವಿಗಾಗಿ ಓದಾದೆ ಜ್ಞಾನಕ್ಕಾಗಿ ಅಭ್ಯಾಸಿಸಿದಾಗ ಮಾತ್ರ ಅರ್ಥಪೂರ್ಣ ಜೀವನ ಕಟ್ಟಲು ಸಾಧ್ಯ. ಪಠ್ಯಕ್ಕೆ ಜೋತುಬೀಳದೆ ಪಠ್ಯೇತರ ಸಾಹಿತ್ಯ ಅಧ್ಯಯನದಲ್ಲಿ ತೊಡಗಿ ಎಂದು ಸಲಹೆ ನೀಡಿದರು.

    ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಕೃಷ್ಣ ಪೋಳ್ ಮಾತನಾಡಿ, ವಿದ್ಯಾರ್ಥಿಗಳಿಗೆ ಭಾಷೆಯ ಚೌಕಟ್ಟು ಇರಬಾರದು. ಯಾವುದೇ ಮಾಧ್ಯಮದಲ್ಲಿ ಅಭ್ಯಾಸಿಸಿದರೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಕನ್ನಡವನ್ನು ಬೆಳಸಲು ಯುವಜನತೆ ಮುಂದಾಗಬೇಕು ಎಂದರು.

    ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಮಹ್ಮದ್ ಶಫಿ, ಉಪನ್ಯಾಸಕ ಡಾ.ಎಂ.ಆರ್.ವಾಗೀಶ್, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಸಾಹಿತ್ಯ ಸಿರಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಡಿ.ಬಸವರಾಜ, ಪದಾಧಿಕಾರಿಗಳಾದ ರಾಜು ಬಿಲಂಕರ್, ಚಂದ್ರಯ್ಯ ಸೊಪ್ಪಿಮಠ, ಕವಿತಾಳ ಬಸವರಾಜ, ಬಡಿಗೇರ ಜಿಲಾನ್‌ಸಾಬ್, ಎಸ್.ಶ್ಯಾಂಸುಂದರರಾವ್, ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts