More

  ವಿದ್ಯಾರ್ಥಿಯ ಬೆಳವಣಿಗೆಗೆ ಲಲಿತಕಲೆ ಪೂರಕ, ವಿ.ವಿ.ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯ

  ಮಂಗಳೂರು: ಲಲಿತಕಲೆ ಹಾಡು, ನೃತ್ಯಕ್ಕೆ ಸೀಮಿತವಾಗದೆ, ಮಿಮಿಕ್ರಿ, ಸ್ಕಿಟ್‌ನಂತಹ ವಿಶಿಷ್ಟ ಪ್ರತಿಭೆಗಳಿಗೂ ಅವಕಾಶ ಸಿಗಬೇಕು. ಲಲಿತಕಲೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಎಂದು ನಗರದ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಹೇಳಿದರು.

  ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಲಲಿತ ಕಲಾ ಸಂಘದ ವತಿಯಿಂದ ನಡೆದ ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಲಲಿತ ಕಲಾ ಸಂಘದ ಸಂಯೋಜಕಿ ಡಾ. ಮೀನಾಕ್ಷಿ ಎಂ.ಎಂ. ,ವಿದ್ಯಾರ್ಥಿ ಸಂಘದ ಉಪ ನಿರ್ದೇಶಕಿ ಡಾ. ಲತಾ.ಎನ್.ಪಂಡಿತ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜನ್.ವಿ.ಶೆಟ್ಟಿ, ಕಾರ್ಯದರ್ಶಿ ತಶ್ವಿತ್ ಎಂ.ಬಿ, ಸಹ ಕಾರ್ಯದರ್ಶಿ ಯಶಸ್ವಿ ಕೆ, ಲಲಿತಾ ಕಲಾ ಸಂಘದ ಕಾರ್ಯದರ್ಶಿ ಪ್ರತೀಕ್ಷಾ ಪಿ, ಸಹ ಕಾರ್ಯದರ್ಶಿ ಶರಣ್ಯ.ಪಿ.ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts