More

    ವಿಧಾನ ಪರಿಷತ್ ಚುನಾವಣೆ: ಎರಡು ಗಂಟೆ ಅವಧಿಯಲ್ಲಿ ಸರಾಸರಿ ಶೇಕಡ 8.2 ಮತದಾನ

    ಬೆಂಗಳೂರು: ವಿಧಾನ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಎರಡು ಗಂಟೆ ಅವಧಿಯಲ್ಲಿ ಸರಾಸರಿ ಶೇಕಡ 8.2 ಮತದಾನ ದಾಖಲಾಗಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಕೋವಿಡ್ ನಿಯಮ ಪಾಲಿಸಲಾಗಿದ್ದು, ಮತದಾರರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.

    ಎರಡು ಗಂಟೆ ಅವಧಿಯಲ್ಲಿ ಅಂದರೆ ಬೆಳಗ್ಗೆ 8 ರಿಂದ 10 ಗಂಟೆ ತನಕ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 8.34%, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 10%, ಆಗ್ನೇಯ ಪದವೀಧರ ಕ್ಷೇತ್ರ (ಬೆಂಗಳೂರು)ದಲ್ಲಿ 7%, ಪಶ್ಚಿಮ ಪದವೀಧರ ಕ್ಷೇತ್ರ ( ಬೆಳಗಾವಿ)ದಲ್ಲಿ 7.49% ಮತದಾನವಾಗಿದೆ.
    ಇನ್ನುಳಿದಂತೆ ಮತದಾನ ಶಾಂತಿಯುತವಾಗಿ ಸಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

    ಆಗ್ನೇಯ ಪದವೀಧರ ಚುನಾವಣೆ: ತುಮಕೂರಿನಲ್ಲಿ ಮತದಾನ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts