More

    ಹಾಸ್ಟೆಲ್‌ ಬಯೋಮೆಟ್ರಿಕ್ ದುರ್ಬಳಕೆ : ಶಾಸಕ ಶ್ರೀನಿವಾಸ್ ಅಸಮಾಧಾನ

    ಗುಬ್ಬಿ : ಸರ್ಕಾರಿ ಹಾಸ್ಟೆಲ್ ನಿರ್ವಹಣೆ…ಗುಬ್ಬಿ ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು….ಸರ್ಕಾರಿ ಆಸ್ಪತ್ರೆಗೆ ಬಂದ ಆಧುನಿಕ ಸಲಕರಣೆ, ತಾಲೂಕಿನಲ್ಲಿ 81 ಶಿಕ್ಷಕರ ಕೊರತೆ ಮತ್ತು ಇನ್ನಿತರ ವಿಷಯಗಳು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಾಸಕ ಎಸ್.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಚರ್ಚೆಯಾದವು.

    ಗುಬ್ಬಿ ಕೆರೆಯಲ್ಲಿ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದ ಘಟನೆ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಾಸ್ಟೆಲ್ ನಿರ್ವಹಣೆ ಮಾಡಬೇಕಾದ ಸಿಬ್ಬಂದಿ ಬಗ್ಗೆ ಶಾಸಕ ಎಸ್.ಆರ್.ಶ್ರೀನಿವಾಸ್ ತರಾಟೆ ತೆಗೆದುಕೊಂಡು ಸಮಾಜ ಕಲ್ಯಾಣಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ನೇರ ಆರೋಪ ಮಾಡಿದರು.

    ಹಾಸ್ಟೆಲ್‌ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿದ್ದರೂ ತಿಂಗಳ ಪೂರ್ತಿ ಹಾಜರಾತಿ ಕಾಣುತ್ತದೆ. ಬಯೋಮೆಟ್ರಿಕ್ ವ್ಯವಸ್ಥೆಯ ನಿರ್ವಹಣೆ ಮಾಡುವ ವಾರ್ಡನ್ ಕೈಯಲ್ಲಿ ಎಲ್ಲವೂ ಅಡಗಿದೆ. ಎಡಿಟಿಂಗ್ ಮಾಡುವ ಅಧಿಕಾರ ಇರುವ ಕಾರಣ ಹಾಜರಿಲ್ಲದ ಮಕ್ಕಳ ಹಾಜರು ಬಯೋಮೆಟ್ರಿಕ್‌ನಲ್ಲಿ ಮಾಡಬಹುದಾಗಿದೆ. ಇಲ್ಲಿ ದುರ್ಬಳಕೆಗೆ ಹೆಚ್ಚು ಅವಕಾಶವಿದೆ ಎಂದು ಜಿಪಂ ಸದಸ್ಯೆ ಡಾ.ನವ್ಯಾಬಾಬು ಆರೋಪಿಸಿದರು.

    ಇಬ್ಬರು ರೋಗಿಗಳಿಗಷ್ಟೇ ಬಳಕೆ: ಸರ್ಕಾರಿ ಆಸ್ಪತ್ರೆಗೆ ಬಂದ ಆಧುನಿಕ ಸಲಕರಣೆ ಅಳವಡಿಸದೇ ಮರಳಿ ವಾಪಸ್ ಕಳುಹಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಡಯಾಲಿಸಿಸ್ ಯಂತ್ರ ಅಳವಡಿಸಿದರೂ ನಿರ್ವಹಣೆಯಲ್ಲಿ ಸೋತಿದೆ. ಕೇವಲ ಇಬ್ಬರು ರೋಗಿಗಳು ಇದರ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. 24 ಗಂಟೆ ಕೆಲಸ ಮಾಡುವ 6 ಆಸ್ಪತ್ರೆಗಳು ತಾಲೂಕಿನಲ್ಲಿವೆ. ಹೆರಿಗೆ ಉದ್ದೇಶದಲ್ಲೇ ಈ ರೀತಿ ಹಗಲಿರುಳು ಆಸ್ಪತ್ರೆ ಚಾಲ್ತಿ ಇರಬೇಕಿದೆ. ಆದರೆ ಕೆಲ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲವಾಗಿದ್ದಾರೆ. ಸಿಬ್ಬಂದಿ ಕೊರತೆ ನಡುವೆ ಆರೋಗ್ಯ ಇಲಾಖೆ ಜನರ ಬಗ್ಗೆ ಕಾಳಜಿವಹಿಸದೇ ಇಲಾಖೆಯ ಕಾಳಜಿವಹಿಸಿಕೊಳ್ಳಬೇಕಿದೆ ಎಂದು ಜಿಪಂ ಸದಸ್ಯ ಜಿ.ಎಚ್.ಜಗನ್ನಾಥ್ ದೂರಿದರು.

    ಜಿಪಂ ಸದಸ್ಯರಾದ ಜಿ.ರಾಮಾಂಜನಯ್ಯ, ಕೆ.ಆರ್. ಭಾರತಿ, ಕೆ.ಯಶೋದಮ್ಮ, ತಾಪಂ ಅಧ್ಯಕ್ಷೆ ಅನಸೂಯ, ತಹಸೀಲ್ದಾರ್ ಎಂ.ಮಮತಾ, ಪ್ರೊಬೆಷನರಿ ತಹಸೀಲ್ದಾರ್ ನಾಗೇಶ್, ತಾಪಂ ಇಒ ನರಸಿಂಹಯ್ಯ ಇದ್ದರು.

    ತಾಲೂಕಿನಲ್ಲಿ 81 ಶಿಕ್ಷಕರ ಕೊರತೆ : ತಾಲೂಕಿನಲ್ಲಿ 81 ಶಿಕ್ಷಕರ ಕೊರತೆ ಕಾಣುತ್ತಿದೆ. ಈ ಸಂದರ್ಭದಲ್ಲಿ 58 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಿ ನಿರ್ವಹಣೆ ಮಾಡಲಾಗುತ್ತಿದೆ. ಉತ್ತಮ ನಿರ್ವಹಣೆ ಎಂಬ ಹೆಗ್ಗಳಿಕೆ ತಾಲೂಕಿಗಿದ್ದು, ಶಿಕ್ಷಕರ ನೇಮಕವನ್ನು ಕೂಡಲೇ ಮಾಡಲು ಸರ್ಕಾರದೊಂದಿಗೆ ಚರ್ಚಿಸುವುದಾಗಿ ಶಾಸಕ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮವಹಿಸಲು ಇಂಜಿನಿಯರ್ ರಮೇಶ್ ಅವರಿಗೆ ಸೂಚಿಸಿದರು. ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲಿ ಶೇ.20 ಕಡಿಮೆ ಟೆಂಡರ್ ಕರೆಯುವ ಗುತ್ತಿಗೆದಾರರು ಗುಣಮಟ್ಟ ಹೇಗೆ ನೀಡುತ್ತಾರೆ. ಕಡಿಮೆ ಟೆಂಡರ್‌ನಲ್ಲಿ ಕಳಪೆ ಕೆಲಸ ಮಾಡಿ ಕಣ್ಮರೆಯಾಗುವ ಗುತ್ತಿಗೆದಾರರ ಬಗ್ಗೆ ನಿಗಾವಹಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts