More

  ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ

  ಮುಂಡಗೋಡ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಸೂಚಿಸಿದರು.

  ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

  ತಾಲೂಕಿನಲ್ಲಿ ಮಳೆಯಾಗದ ಕಾರಣ ಅಂತರ್ಜಲ ಕುಸಿದಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಉಂಟಾಗುವ ಸಾಧ್ಯತೆಗಳಿದ್ದು, ಯಾವ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

  ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿನ ನೀರು ಖಾಲಿಯಾಗುವ ಹಂತದಲ್ಲಿದ್ದು ಈ ಭಾಗದ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಪ್ರದೀಪ ಭಟ್ ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದರು.

  ದನಗಳಿಗೆ ಕಾಣಿಸಿಕೊಂಡಿದ್ದ ಗಂಟುರೋಗದಿಂದ ತಾಲೂಕಿನಲ್ಲಿ 42 ದನಗಳು ಸಾವನ್ನಪ್ಪಿದ್ದು ಅದರಲ್ಲಿ 28 ದನಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಉಳಿದವರಿಗೆ ಅನುದಾನ ಬಂದ ನಂತರ ಪರಿಹಾರ ವಿತರಿಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿದರು.

  ಮುಂಗಾರು ಆರಂಭವಾಗಲಿದ್ದು ತಾಲೂಕಿನ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ಗೋಬ್ಬರ ದಾಸ್ತಾನು ಮಾಡಲಾಗುತ್ತಿದ್ದು ಹಾಗೂ ಖಾಸಗಿ ಅಂಗಡಿಯವರಿಗೆ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಎಂದು ಸಭೆ ನಡೆಸಿ ಸೂಚಿಸಲಾಗಿದೆ ಎಂದು ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ತಿಳಿಸಿದರು.

  ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ಸದ್ಯ 1800 ಹೆಕ್ಟೇರ್ ಅಡಕೆ ಬೆಳೆಗೆ ನೀರಿನ ಕೊರತೆಯಾಗಿದ್ದು ಸದ್ಯದಲ್ಲಿ ಉತ್ತಮವಾದ ಮಳೆಯಾದರೆ ಅಡಕೆ ಬೆಳೆಗೆ ಅನುಕೂಲವಾಗಲಿದೆ ಮಳೆಯಾಗದಿದ್ದರೆ ಅಡಕೆ ಬೆಳೆಯ ಇಳುವರಿಯ ಮೇಲೆ ಹೆಚ್ಚು ಪರಿಣಾಮ ಬಿರಲಿದೆ ಎಂದು ತೋಟಗಾರಿಕಾ ಅಧಿಕಾರಿ ಅಣ್ಣಪ್ಪ ನಾಯ್ಕ ತಿಳಿಸಿದರು.

  See also  ಕುಚಿಪುಡಿ ರಂಗ ಪ್ರವೇಶ ಜೂ. 24 ರಂದು

  ತಾಲೂಕಿನ 9 ಕಿರು ಅಂಗನವಾಡಿ ಕೆಂದ್ರಗಳನ್ನು ಮೆಲ್ದರ್ಜೆಗೇರಿಸಿ ಹಿರಿಯ ಅಂಗನವಾಡಿಗಳನ್ನಾಗಿ ಮಾಡಲಾಗಿದೆ. ಈ ಅಂಗನವಾಡಿಗಳಿಗೆ ಅವಶ್ಯವಿರುವ ಕಾರ್ಯಕರ್ತೆಯರು ಹಾಗೂ ಸಹಾಯಕರ ಹುದ್ದೆಗಳನ್ನು ಸದ್ಯದಲ್ಲಿಯೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ದೀಪಾ ಬಂಗೇರ ಮಾಹಿತಿ ನೀಡಿದರು.

  ನಂತರ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನೆಯ ವರದಿಯನ್ನನು ಸಭೆಗೆ ನೀಡಿದರು.

  ಈ ವೇಳೆ ತಹಸೀಲ್ದಾರ್ ಶಂಕರ ಗೌಡಿ, ತಾಪಂ.ಅಧಿಕಾರಿ ಪ್ರವೀಣ ಕಟ್ಟಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts