More

    ಅಪಘಾತಕ್ಕೂ ಮುನ್ನ ಜಾಲಿರೈಡ್?; ಶಾಸಕರ ಪುತ್ರನ ಕಾರು ಅಪಘಾತ ಪ್ರಕರಣ, ಮೊಬೈಲ್​ಫೋನ್​ ನೆಟ್‌ವರ್ಕ್ ಕೊಟ್ಟ ಸುಳಿವು

    ಬೆಂಗಳೂರು: ಇತ್ತೀಚೆಗೆ ಕೋರಮಂಗಲದಲ್ಲಿ ನಡೆದಿದ್ದ ಆಡಿ ಕ್ಯೂ-3 ಕಾರಿನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಏಳು ಮಂದಿಯೂ ಅಪಘಾತಕ್ಕೂ ಮುನ್ನ ಕೋರಮಂಗಲದ ಸುತ್ತಮುತ್ತ ಪ್ರದೇಶ ಹಾಗೂ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲಿ ರೈಡ್ ಮಾಡಿರುವುದು ಮೊಬೈಲ್​ಫೋನ್​ ನೆಟ್‌ವರ್ಕ್ ಪರಿಶೀಲಿಸಿದಾಗ ಗೊತ್ತಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದರ ಬೆನ್ನತ್ತಿ ಹೊರಟಿದ್ದರು. ಅಪಘಾತವಾದ ಸ್ಥಳದಲ್ಲಿ ಮೃತಪಟ್ಟವರ ಬಳಿ ಇದ್ದ 3 ಮೊಬೈಲ್‌ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೊಬೈಲ್ ನೆಟ್‌ವರ್ಕ್ ಟ್ರೇಸ್ ಮಾಡಿ ಕಾರಿನಲ್ಲಿದ್ದ ಏಳು ಮಂದಿ ಎಲ್ಲೆಲ್ಲಿ ಹೋಗಿದ್ದರು? ಎಂಬುದನ್ನು ಪರಿಶೀಲಿಸಿದಾಗ ಅಪಘಾತಕ್ಕೂ ಮುನ್ನ ಕೋರಮಂಗಲದ ಸುತ್ತಮುತ್ತ ಪ್ರದೇಶ ಹಾಗೂ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲಿ ರೈಡ್ ಮಾಡಿರುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.

    ಆ.31ರಂದು ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ್ (25), ಈತ ಮದುವೆ ಆಗಬೇಕಿದ್ದ ಮುರುಗೇಶ್ ಪಾಳ್ಯದ ಯುವತಿ ಬಿಂದು (28) ಸೇರಿ 7 ಮಂದಿ ಮೃತಪಟ್ಟಿದ್ದರು.

    ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!

    ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts