More

    ಬಯಲುಸೀಮೆ ಹಸಿರು ಕ್ರಾಂತಿಗೆ ಯತ್ನ

    ಬೀರೂರು: ಬಯಲುಸೀಮೆ ರೈತರ ನೀರಿನ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಭದ್ರಾ ನದಿಯಿಂದ ತಾಲೂಕಿನ 114 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ದೊರಕಿರುವುದು ರೈತರ ಬದುಕಿಗೆ ಹೊಸ ಭರವಸೆ ಮೂಡಿಸಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

    ಪಟ್ಟಣದ ಶ್ರೀ ರಂಭಾಪುರಿ ಖಾಸಾ ಶಾಖಾ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಮಕ್ಕಳು ಆಧುನೀಕರಣಗೊಳ್ಳುವ ಜತೆಗೆ ನಮ್ಮ ಸನಾತನ ಪರಂಪರೆಯ ಸಂಸ್ಕೃತಿ, ಆಚಾರ, ವಿಚಾರದ ಮೌಲ್ಯಗಳಿಗೂ ಮಹತ್ವ ನೀಡಬೇಕು. ಧರ್ಮ, ಸಂಸ್ಕೃತಿ, ಕಲೆ ಆಚಾರ-ವಿಚಾರದಲ್ಲಿ ಪಟ್ಟಣ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ. ನಮ್ಮದು ಧರ್ಮ ಸಂರಕ್ಷಣೆ ಉದ್ದೇಶದ ರಾಜನೀತಿ. ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಅಸ್ಮಿತೆಯ ಸಂಕೇತ. ನಿಮ್ಮೆಲ್ಲರ ಅಳಿಲು ಸೇವೆಯೇ ನಮಗೆ ಸ್ಪೂರ್ತಿ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಶಾಸಕರ ಕಾಳಜಿಯಿಂದ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗುತ್ತಿವೆ. ಮಠದ ಧಾರ್ವಿುಕ ಕಾರ್ಯಕ್ರಮಗಳು ನಮ್ಮಲ್ಲೂ ಧಾರ್ವಿುಕ ಜಾಗೃತಿ ಮೂಡಿಸುತ್ತಿವೆ ಎಂದು ಹೇಳಿದರು. ಮಠದ ಆವರಣದಲ್ಲಿ ಹೋಮ, ಸಂಕಷ್ಟಹರ ಗಣಪತಿ ಪೂಜೆ ನೆರವೇರಿತು. ಹಣತೆಗಳನ್ನು ಹಚ್ಚಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts