More

    ಅರ್ಧಕ್ಕೇ ನಿಂತ ಉಳಗಾ-ಕೆರವಡಿ ಸೇತುವೆ ಕಾಮಗಾರಿ ಶೀಘ್ರ ಪ್ರಾರಂಭಿಸಲು ಶಾಸಕ ಸೈಲ್‌ ಅಧಿಕಾರಿಗಳಿಗೆ ಸೂಚನೆ

    ಕಾರವಾರ: ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರ ಉಳಗಾ-ಕೆರವಡಿ ಸೇತುವೆ ಕಾಮಗಾರಿಯನ್ನು ಮಾಡಿ, ಮುಗಿಸುವಂತೆ ಶಾಸಕ ಸತೀಶ ಸೈಲ್ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್) ಅಧಿಕಾರಿಗಳಿಗೆ ಸೂಚಿಸಿದರು.
    ಅಽಕಾರಿ, ಗುತ್ತಿಗೆದಾರರು ಹಾಗೂ ಜನಪ್ರತಿನಿದಿಗಳ ಜತೆ ಸ್ಥಳ ಪರಿಶೀಲನೆ ಮಾಡಿದ ಅವರು, ಸೇತುವೆ ಕಾಮಗಾರಿ ಅರ್ಧಕ್ಕೇ ನಿಲ್ಲಲು ಕಾರಣಗಳನ್ನು ಅವಲೋಕಿಸಿದರು. 30 ಕೋಟಿ ರೂ.ಗಳ ಕಾಮಗಾರಿ ಇದಾಗಿದ್ದು, 2018 ರಲ್ಲೇ ಪ್ರಾರಂಭವಾಗಿದೆ. ಐದು ವರ್ಷ ಕಳೆದರೂ ಮುಕ್ತಾಯವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
    ಕಂಬಗಳ ನಿರ್ಮಾಣಕ್ಕೆ ನದಿಗೆ ಮಣ್ಣು ಹಾಕಲು ಸ್ಥಳೀಯರು ಬಿಡುತ್ತಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಗುತ್ತಿಗೆದಾರರು ತಮ್ಮ ಸಮಸ್ಯೆ ಹೇಳಿಕೊಂಡರು. ರಾಜಧನ ಕಡಿತ ಮಾಡಿ ಮಣ್ಣು ಹಾಕಲು ಸ್ಥಳೀಯರಿಗೆ ಅವಕಾಶ ನೀಡಿ ಎಂದು ಶಾಸಕರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
    ಸೇತುವೆಯ ಇಕ್ಕೆಲಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕೆರವಡಿ ಭಾಗದಲ್ಲಿ 35 ಗುಂಟೆ ಹಾಗೂ ಉಳಗಾ ಭಾಗದಲ್ಲಿ 29 ಗುಂಟೆ ಜಮೀನನ್ನು ನೇರವಾಗಿ ಖರೀದಿ ಮಾಡಲು 2020 ರಲ್ಲಿಯೇ ಅನುಮೋದನೆ ದೊರೆತಿದೆ. ಆದರೆ, ಹಲವಾರು ಮಾಲೀಕರಿರುವ ಕಾರಣ ಇದುವರೆಗೂ ಪರಿಹಾರ ಕೊಟ್ಟು ಜಾಗ ಸ್ವಾಧೀನ ಮಾಡುವ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ನಿಶ್ಚಲ ನರೋನಾ ವಿವರಿಸಿದರು. ಜಮೀನಿನ ಮಾಲೀಕರಲ್ಲಿ ಒಬ್ಬನಿಂದ ನಷ್ಟ ಭರ್ತಿ ಬಾಂಡ್ ಪಡೆದು, ತಕ್ಷಣ ಪರಿಹಾರ ಹಣ ಹಸ್ತಾಂತರಿಸಲು ಸೈಲ್ ಸೂಚನೆ ನೀಡಿದರು. ಕೆಆರ್‌ಐಡಿಎಲ್ ಇಇ ಬಸವರಾಜ್, ಎಇಇ ಪ್ರಕಾಶ, ಉಳಗಾ ಮಾಡರ್ನ್ ಎಜುಕೇಶನ್ ಸೊಸೈಟಿಯ ದಿಗಂಬರ ಶೇಟ್, ಕೆರವಡಿ, ಉಳಗಾ, ದೇವಳಮಕ್ಕಿ ಗ್ರಾಪಂ ಸದಸ್ಯರು, ಪಿಡಿಒಗಳು ಈ ಸಂದರ್ಭದಲ್ಲಿದ್ದರು.

    ಇದನ್ನೂ ಓದಿ:ಟನಲ್‌ ವಿಚಾರ ಸಚಿವ ಎಂಎಲ್ ಸಿ ಜಗಳಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts