More

    ಅತಿಥಿ ಶಿಕ್ಷಕರ ವೇತನ ಹೆಚ್ಚಿಸುವ ಬಗ್ಗೆ ಪರಿಶೀಲನೆ

    ಕಾರವಾರ: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೇಮಕವಾಗುವ ಅತಿಥಿ ಶಿಕ್ಷಕರ ವೇತನವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

    ಕಾರವಾರ ಶಾಸಕ ಸತೀಶ ಸೈಲ್‌ ಅವರು ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು.

    ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಅಂಥ ಸ್ಥಳದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತದೆ. ಆಯಾ ಊರುಗಳಲ್ಲಿರುವ ಪದವೀಧರರು, ಅಥವಾ ಡಿಎಡ್‌, ಬಿಡ್‌ ಓದಿದವರು ಶಿಕ್ಷಕರಾಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಾರೆ.

    ಇದನ್ನೂ ಓದಿ:ಸಿಎಂ ಅವರೇ ಇಲ್ನೋಡಿ-ನಮಗೊಂದು ಸೇತುವೆ ಮಾಡ್ಕೊಡಿ

    ಸರ್ಕಾರ ಅವರಿಗೆ ಮಾಸಿಕ 10 ಸಾವಿರ ರೂ.ಮಾತ್ರ ವೇತನ ನಿಗದಿ ಮಾಡಿದೆ. ಇಂದು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಡಿ ಕನಿಷ್ಠ ವೇತನ 18 ಸಾವಿರ ರೂ. ಇದೆ. ಪಿಎಫ್‌, ಇಎಸ್‌ಐ ಗಳನ್ನು ನೀಡಬೇಕಾಗುತ್ತದೆ. ಖಾಸಗಿಯವರೂ ಈ ಸೌಲಭ್ಯ ನೀಡಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರದಿಂದ ನೇಮಕವಾಗುವ ತಾತ್ಕಾಲಿಕ ಶಿಕ್ಷಕರಿಗೇ ಕನಿಷ್ಠ ವೇತನ ಇರದಿರುವುದು ಬೇಸರದ ಸಂಗತಿ.

    ನಮ್ಮ ಕ್ಷೇತ್ರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಇಂಥ ನೂರಾರು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾವಂತರು ತಮ್ಮ ಊರಿನ ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತಾರೆ. ಅವರಿಗೆ ಸಮರ್ಪಕ ವೇತನ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts