More

    ಶಾಸಕ ರವಿಕುಮಾರ್ ಗಣಿಗ ಸಿಟಿ ರೌಂಡ್: 1ನೇ ವಾರ್ಡ್‌ನಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಕೆ

    ಮಂಡ್ಯ: ಶಾಸಕ ರವಿಕುಮಾರ್ ಗಣಿಗ ಸೋಮವಾರ ಬೆಳ್ಳಂಬೆಳಗ್ಗೆಯೇ 1ನೇ ವಾರ್ಡ್ ಸೇರಿದಂತೆ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಮಾತ್ರವಲ್ಲದೆ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
    ಮೊದಲ ವಾರ್ಡ್‌ನ ಗಲ್ಲಿ, ಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯ ಓಡಾಟ ನಡೆಸಿ ಮಹಿಳೆಯರು, ವಯೋವೃದ್ಧರು, ಸ್ಥಳೀಯ ಸಾರ್ವಜನಿಕರನ್ನು ಮಾತನಾಡಿಸಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಜನರ ವೈಯಕ್ತಿಕ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿದರು. ಶಾಸಕರೊಂದಿಗೆ ಪೌರಾಯುಕ್ತ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಇದ್ದರು. ಅಂತೆಯೇ ಸಾರ್ವಜನಿಕರ ಸಮಸ್ಯೆಗೆ ಸಂಬಂಧಿಸಿದಂತೆ ಹಾಗೂ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಕಾಮಗಾರಿ ಪರಿಶೀಲನೆ: ನಗರದ ಕಾರೆಮನೆ ಗೇಟ್ ಬಳಿಯಲ್ಲಿ ಮಂಡ್ಯ-ಕೌಡ್ಲೆ ರಸ್ತೆಯ ಕಾಮಗಾರಿ ಪರಿಶೀಲನೆ ನಡೆಸಿದರು. ರಸ್ತೆಗೆ ಜಾಗ ನೀಡಿರುವ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ಪರಿಹರಿಸಿಕೊಡಿಸುವ ಭರವಸೆ ನೀಡಿ, ಕಾಮಗಾರಿಗೆ ಸಹಕರಿಸುವಂತೆ ಮಾಲೀಕರ ಮನವೊಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts