More

    ಸಚಿವರ ವಿರುದ್ಧ ಮಾಜಿ ಶಾಸಕ ಗರಂ

    ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ವಿಶ್ವನಾಥಪುರ ಕೆಪಿಎಸ್ ಶಾಲೆಯ ಕಟ್ಟಡ ಜೆಡಿಎಸ್ ಕೊಡುಗೆಯಾಗಿದೆ. 2020ರ ಬಜೆಟ್‌ನಲ್ಲಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ 2 ಕೋಟಿ ರೂ.ಅನುದಾನದಲ್ಲಿ ನಿರ್ಮಾಣವಾದ ಶಾಲೆಯಾಗಿದೆ. ಇದರಲ್ಲಿ ಯಾವುದೇ ಖಾಸಗಿ ಕಂಪನಿಯ ಸಿಎಸ್‌ಆರ್ ಹಣವಿಲ್ಲ. ಈ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ದೂರಿದ್ದಾರೆ.
    ಪಟ್ಟಣದಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಸರ್ಕಾರ ನಿರ್ಮಿಸಿರುವ ವಿಶ್ವನಾಥಪುರ ಶಾಲೆಯ ಭಾವಚಿತ್ರ ಪ್ರಕಟಣೆ ಮಾಡಿ, ಸಿಎಸ್‌ಆರ್ ಯೋಜನೆಯಲ್ಲಿ ಶೈಕ್ಷಣಿಕವಾಗಿ ಪ್ರಗತಿ ಮಾಡುತ್ತೇವೆ. ನನ್ನ ಶಾಲೆ ನನ್ನ ಕೊಡುಗೆ- ಮಾದರಿ ಸರ್ಕಾರಿ ಶಾಲೆ ಎಂದು ಸಚಿವರು ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
    ಸರ್ಕಾರದ ಹಣದಲ್ಲಿ ನಿರ್ಮಾಣವಾಗಿರುವುದನ್ನು ಖಾಸಗಿ ಸಹಕಾರದಿಂದ ಮಾಡಲಾದ ಶಾಲೆ ಎಂದು ಬಿಂಬಿಸುತ್ತಿದ್ದಾರೆ. ಇದರಿಂದ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಕಂಪನಿಗಳು ಸುಳ್ಳು ದಾಖಲೆ ನೀಡಿ ತೆರಿಗೆ ವಂಚಿಸಲು ಬಿಡುವುದಿಲ್ಲ ಎಂದರು.

    ದಾಖಲೆ ಪ್ರದರ್ಶನ:
    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಡ ಮಕ್ಕಳಿಗೆ ಉಚಿತ ಆಂಗ್ಲ ಶಿಕ್ಷಣ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದಾಗಿ ರಾಜ್ಯದೆಲ್ಲೆಡೆ ಕರ್ನಾಟಕ ಪಬ್ಲಿಕ್ ಶಾಲೆ ತಲೆ ಎತ್ತಲು ಕಾರಣವಾಯಿತು. 2020ರ ಬಜೆಟ್‌ನಲ್ಲಿ ಘೋಷಣೆಯಾದ ಅನುದಾನದಡಿ 2021ರಲ್ಲಿ ಸರ್ಕಾರ ಆದೇಶ ಮಾಡಿ ಶಾಲೆಯ ಕಟ್ಟಡ ನಿರ್ಮಿಸಲು ಮುಂದಾಗಿತ್ತು ಎಂದು ಮಾಜಿ ಶಾಸಕರು ದಾಖಲೆ ಪ್ರದರ್ಶನ ಮಾಡಿದರು.
    2022ರ ಏಪ್ರಿಲ್‌ನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು, ಅಂದು ಇಲ್ಲದ ಸಿಎಸ್‌ಆರ್ ಕಂಪನಿಗಳು ಇಂದು ಏಕಾಏಕಿ ಬಂದಿವೆ. ಸರ್ಕಾರದ ಅನುದಾನ ಜನರ ತೆರಿಗೆಯಾಗಿದ್ದು, ಶಿಕ್ಷಣದ ಕೆಲಸಕ್ಕೆ ಬಳಕೆಯಾಗಿರುತ್ತದೆ. ಆದರೆ ಇದನ್ನೆ ಸಿಎಸ್‌ಆರ್ ಎಂದು ಮರೆ ಮಾಚುತ್ತಿರುವ ಸಚಿವರ ನಡೆ ಅನುಮಾನಸ್ಪದವಾಗಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts