More

    ಮೀನುಗಾರರಿಗೆ 34 ಮನೆಗಳು

    ಸಿರಗುಪ್ಪ: ಹೆರಕಲ್ಲು ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಗೆ ಮೀನುಗಾರಿಕೆ ಇಲಾಖೆಯಿಂದ ಮೂರು ಲಕ್ಷ ಸಾಮಾನ್ಯ ಗೆಂಡೆ ತಳಿಯ ಮೀನಿನ ಮರಿಗಳನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಶುಕ್ರವಾರ ಹರಿಬಿಟ್ಟರು.

    ತಾಲೂಕಿನ ತುಂಗಭದ್ರಾ ನದಿ ಭಾಗದಲ್ಲಿ 400ಕ್ಕೂ ಹೆಚ್ಚು ಜನರು ಮೀನುಗಾರಿಕೆ ಅವಲಂಬಿಸಿದ್ದಾರೆ. 34 ಮನೆಗಳನ್ನು ಅವರಿಗಾಗಿ ಶಿಫಾರಸು ಮಾಡಲಾಗಿದೆ. 15 ಮೀನುಗಾರರಿಗೆ ತಲಾ 10 ಸಾವಿರ ರೂ. ಮೌಲ್ಯದ ಸಲಕರಣೆಯ ಕಿಟ್ ವಿತರಿಸಲಾಗಿದೆ. ತಾಲೂಕಿನಲ್ಲಿ 100 ಹೆಕ್ಟೆರ್ ಪ್ರದೇಶದಲ್ಲಿ ಮೀನಿನ ಕೆರೆ ನಿರ್ಮಿಸುವ ಗುರಿಯಿದೆ. ಈಗಾಗಲೆ 50 ಹೆಕ್ಟೆರ್ ಪ್ರದೇಶದಲ್ಲಿ ಮೀನಿನ ಕೆರೆ ನಿರ್ಮಿಸಲಾಗಿದೆ ಎಂದು ಶಾಸಕ ಹೇಳಿದರು.

    ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಶಿವಣ್ಣ ಮಾತನಾಡಿ, ಮೀನುಗಾರರು ಆರ್ಥಿಕ ಸ್ವಾವಲಂಬಿಗಳಾಲು ನದಿಗೆ ಮೀನು ಮರಿಗಳನ್ನು ಬಿಡಲಾಗಿದೆ. ಪ್ರಧಾನಮಂತ್ರಿ ಮತ್ಸ್ಯಾಸಂಪದ ಯೋಜನೆಯಡಿ ಮೀನು ಹೊಂಡ, ಐಸ್‌ಪ್ಲಾಂಟ್, ಕೋಲ್ಡ್ ಸ್ಟೋರೇಜ್ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲಾಗುವುದು. ಕೆ.ಎಂ.ಆರ್.ಪಿ. ಯೋಜನೆಯಡಿ 2023-24ನೇ ಸಾಲಿನಿಂದ ಪ್ರತಿವರ್ಷ ಕಂಪ್ಲಿ ಮತ್ತು ಸಿರಗುಪ್ಪ ಭಾಗಗಳಲ್ಲಿ ತಲಾ ಆರು ಲಕ್ಷ ಮೀನುಗಳನ್ನು ನದಿಗೆ ಬಿಡಲಾಗುವುದೆಂದು ಹೇಳಿದರು. ಮಣ್ಣೂರು, ನಡಿವಿ, ನಿಟ್ಟೂರು ಸೇರಿದಂತೆ ವಿವಿಧ ಗ್ರಾಮಗಳ ಮೀನುಗಾರರು ಮತ್ತು ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts