More

    ಐದು ವರ್ಷದಲ್ಲಿ ಅರ್ಹರಿಗೆ ನಿವೇಶನ

    ಶಾಸಕ ಶರತ್ ಬಚ್ಚೇಗೌಡ ಭರವಸೆ

    292ಎಕರೆಯಲ್ಲಿ ಲಾನುಭವಿಗಳಿಗೆ ಸೈಟ್ ಹಂಚಿಕೆ


    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ತಾಲೂಕಿನಲ್ಲಿ ಈಗಾಗಲೇ ಗುರುತಿಸಿರುವ 292 ಎಕರೆ ಸರ್ಕಾರಿ ಭೂಮಿಯಲ್ಲಿ ವರ್ಷದೊಳಗೆ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು. ತಾಲೂಕಿನಲ್ಲಿ ಐದು ವರ್ಷದಲ್ಲಿ ನಿವೇಶನ ರಹಿತ ಬಡವರೇ ಇರಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರವಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
    ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಫಲಾನುಭವಿಗಳಿಗೆ ಖಾಲಿ ನಿವೇಶನ ವಿತರಿಸುವ ಭರವಸೆ ನೀಡಿತ್ತು. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನಲ್ಲಿ ಸುಮಾರು ಸರ್ಕಾರಿ ಗೋಮಾಳ ಜಾಗ ಗುರುತಿಸಿದ್ದು, ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಜಾಗವನ್ನು ಸೂಕ್ತವಾಗಿ ಸರ್ವೇ ಮಾಡಿಸಿ ಪಂಚಾಯಿತಿ ವ್ಯಾಪ್ತಿಯ ಜಮೀನುಗಳನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮಕ್ಷಮಕ್ಕೆ ಒಪ್ಪಿಸುವ ಕೆಲಸವಾಗಬೇಕು. ನಂತರ ಲೇಔಟ್ ನಿರ್ಮಾಣ ಮಾಡಿ ಅರ್ಹ ಬಡವರಿಗೆ ನಿವೇಶನ ಹಂಚಬೇಕು. ಪ್ರತಿ ದಿನ ಒಂದು ಪಂಚಾಯಿತಿಯಂತೆ ಒಂದು ತಿಂಗಳಲ್ಲಿ ತಾಲೂಕಿನ 28 ಪಂಚಾಯಿತಿಗಳಿಗೆ ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ತಹಸೀಲ್ದಾರ್ ಜತೆಗೆ ಚರ್ಚಿಸಿ ಶೀಘ್ರವೇ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂದು ಕೊರತೆ ಸಭೆ ಆಯೋಜಿಸುವ ಮೂಲಕ ಸ್ಥಳದಲ್ಲೇ ಸಾರ್ವಜನಿರ ಸಮಸ್ಯೆ ಬಗೆಹರಿಸಲಾಗುವುದು ಎಂದರು.


    ಜನರಿಗೆ ಸಮರ್ಪಕವಾಗಿ ಸೇವೆ ನೀಡಿ ತಾಲೂಕಿನ ಜನರು ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ ಶಾಸಕ ಶರತ್ ಬಚ್ಚೇಗೌಡ, ತಾಲೂಕು ಬೆಂಗಳೂರಿಗೆ ಹತ್ತಿರವಿರುವುದರಿಂದ್ದ ಇಂಚಿಂಚು ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲ ವರ್ಷಗಳಿಂದ ಭೂಮಿ ಹೊಂದಿರುವವರಿಗೆ ಸಾಕಷ್ಟು ತೊಂದರೆಗಳಾಗಿದ್ದು, ಸುಳ್ಳು ವ್ಯಾಜ್ಯಗಳು ಹೆಚ್ಚಾಗಿವೆ. ಇನ್ನು ಮುಂದೆ ಕಂದಾಯ ಇಲಾಖೆ ಯಾವುದೇ ರಾಜಕೀಯಕ್ಕೆ ಬಗ್ಗದೆ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts