More

    ಶಾಸಕರಾದರೂ ಮೂಲ ವೃತ್ತಿ ಮರೆತಿರಲಿಲ್ಲ

    ರಾಯಚೂರು: ಸರಳ, ಸಜ್ಜನಿಕೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ನಾಗಪ್ಪ ಅವರ ಆದರ್ಶ ಎಲ್ಲರಿಗೂ ಮಾರ್ಗದರ್ಶಕವಾಗಿದೆ. ನಾವು ಅನುಸರಿಸುವ ಸರಳ, ಸಜ್ಜನಿಕೆ ಸದಾ ಕಾಲ ಸಮಾಜಕ್ಕೆ ಮಾದರಿಯಾಗಲಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

    ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಡಾ.ಎಂ.ನಾಗಪ್ಪ ಪ್ರತಿಷ್ಠಾನದ 19ನೇ ವಾರ್ಷಿಕೋತ್ಸವ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಎಂ.ನಾಗಪ್ಪ ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದಿದ್ದರು. ಶಾಸಕರಾಗಿದ್ದರೂ ವಕೀಲ ವೃತ್ತಿಯನ್ನು ಬಿಟ್ಟಿರಲಿಲ್ಲ. ಈಗಿನ ದಿನಗಳಲ್ಲಿ ಶಾಸಕರಾದ ಮೇಲೆ ಕೆಲವರು ಮೂಲವೃತ್ತಿ ಮರೆತುಬಿಡುತ್ತಾರೆ ಎಂದರು.

    ನಿಜಾಮರ ಆಳ್ವಿಕೆ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಡಿಸಿ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದರು. ಜನರ ನಡುವೆ ನಾಯಕರಾಗಿ ಕೆಲಸ ಮಾಡಿದ್ದಾರೆ. ಇಂದಿನ ಶಾಸಕರು ಬಂಡವಾಳ ಹಾಕಿ ತೆಗೆಯುವ ಕೆಲಸ ಮಾಡುತ್ತಿದ್ದು, ಹಣ ನೋಡಿ ಮಣೆ ಹಾಕುವ ಸ್ಥಿತಿ ಎದುರಾಗಿದೆ ಎಂದು ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿದರು.

    ಪ್ರತಿಷ್ಠಾನದ ಉಪಾಧ್ಯಕ್ಷ ಮಸ್ಕಿ ನಾಗರಾಜ ಮಾತನಾಡಿ, ಎಂ.ನಾಗಪ್ಪ ಜಿಲ್ಲಾ ಶರಣ ತತ್ವದ ಅಧ್ಯಕ್ಷರಾಗಿ, ವಕೀಲರಾಗಿ, ಶಾಸಕರಾಗಿ, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರತಿಷ್ಠಾನ ಸ್ಥಾಪಿಸಿ ಅನೇಕ ಸಾಮಾಜಿಕ ಕೆಲಸ ಮಾಡಿದ್ದಾರೆ ಎಂದರು. ಹಿರಿಯ ಪತ್ರಕರ್ತ ಅರವಿಂದ ಕುಲಕರ್ಣಿಗೆ ಪ್ರತಿಷ್ಠಾನದಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts