More

    ಆಶಾ ಕಾರ್ಯಕರ್ತೆಯರಿಗೆ ಹಣ, ದಿನಸಿ ಹಂಚಿದ ಶಾಸಕ ಜಮೀರ್!

    ಬೆಂಗಳೂರು: ಕಳೆದ ಒಂದು ತಿಂಗಳಿಂದ ಸಂಬಳ ಬಾರದೆ ಸಂಕಷ್ಟದಲ್ಲಿದ್ದ ಕೆಲವು ಆಶಾ ಕಾರ್ಯಕರ್ತೆಯರಿಗೆ ತಲಾ ಐದು ಸಾವಿರ ರೂ. ಸಹಾಯ ಮಾಡಿರುವುದಾಗಿ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

    “ಆಶಾ ಕಾರ್ಯಕರ್ತೆಯರು ನನ್ನನ್ನು ಭೇಟಿಯಾಗಿ ಕಷ್ಟ ಹೇಳಿಕೊಂಡಿದ್ದರು. ಹಾಗಾಗಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ 3 ವಾರ್ಡ್‌ಗಳ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 5 ಸಾವಿರ ರೂ. ಅನ್ನು ವೈಯಕ್ತಿಕ ಸಹಾಯವಾಗಿ ನೀಡಿದ್ದೇನೆ’’ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿರಿ ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

    ಇದಲ್ಲದೆ ತರಕಾರಿ, 25 ಕಿಲೋ ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ಅಗತ್ಯ ದಿನಸಿ ಪದಾರ್ಥಗಳನ್ನೂ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
    ದೇಶದಲ್ಲಿ ಕರೊನಾ ಹಾವಳಿ ಆರಂಭವಾದ ದಿನದಿಂದ ಜನರ ಜೀವ ರಕ್ಷಣೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ನೆರವಾಗುವ ಪುಟ್ಟ ಪ್ರಯತ್ನ ಇದು ಎಂದು ಜಮೀರ್ ಬಣ್ಣಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಕರೊನಾ ಶಂಕಿತರನ್ನು ತಪಾಸಣೆ ಮಾಡಲು ಜಮೀರ್ ವಿಧಾನಸಭಾ ವ್ಯಾಪ್ತಿಯ ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು ಹೋದಾಗ ಅವರ ಕೆಲಸಕ್ಕೆ ಅಡ್ಡಿ ಉಂಟು ಮಾಡಲಾಗಿತ್ತು. ಅಡ್ಡಿ ಮಾಡಿದವರಿಗೆ ಶಾಸಕ ಜಮೀರ್ ಅವರ ಬೆಂಬಲ ಇದೆ ಎಂಬ ಆರೋಪವೂ ಕೇಳಿಬಂದಿತ್ತು. ಅಂತಹ ಆರೋಪದಿಂದ ಮುಕ್ತಿ ಹೊಂದಲೋಸುಗವೋ ಎಂಬಂತೆ ಜಮೀರ್ ಇಂದು ಆಶಾ ಕಾರ್ಯಕರ್ತೆಯರಿಗೆ ದಿನಸಿ ಹಂಚಿದ್ದಾರೆ.

    ಇದನ್ನೂ ಓದಿರಿ ಬಡವರಿಗೆ ನೀಡಬೇಕಾದ ಅನ್ನಭಾಗ್ಯ ಅಕ್ಕಿ ಎಲ್ಲಿ ಹೋಗ್ತಿದೆ ಗೊತ್ತಾ..!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts