ಬೆಂಗಳೂರು: ಆಪೆಕ್ಸ್ ಬ್ಯಾಂಕ್‌ಗಳ ಜತೆ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ಗಳನ್ನು ವಿಲೀನಗೊಳಿಸಬಾರದು. ಒಂದು ವೇಳೆ ಸರ್ಕಾರ ವಿಲೀನ ಪ್ರಸ್ತಾಪ ಕೈಗೊಂಡರೆ ಸಹಕಾರ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಡಿಸಿಸಿ ಬ್ಯಾಂಕ್‌ಗಳ ಮಹತ್ವ ಮತ್ತು ವಿಲೀನ ಮಾಡಿದರೆ ಮುಂದೆ ಆಗುವ ದುಷ್ಪಾರಿಣಾಮಗಳ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ರಾಜ್ಯ ಸರ್ಕಾರ ಮನವರಿಕೆ ಮಾಡಬೇಕು ಎಂದು ರಾಜ್ಯ ಸಹಕಾರ ಮಹಾಮಂಡಲಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಲಾಭದಾಯಕವಾಗಿ ನಡೆಯುತ್ತಿವೆ. ಅಲ್ಪಾವದಿ, ದೀರ್ಘಾವಧಿ ಕೃಷಿ ಸಾಲ, ಸ್ವಸಹಾಯ ಸಂಘ, ಪಶುಸಂಗೋಪನೆ, ಚಿನ್ನಾಭರಣ ಸೇರಿ ವಿವಿಧ ಸಾಲಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ರಾಷ್ಟ್ರದಲ್ಲಿ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಂದ ಅಂದಾಜು 25 ಲಕ್ಷ ರೈತರಿಗೆ 19 ಸಾವಿರ ಕೋಟಿ ರೂ.ಸಾಲ ನೀಡಿದೆ. ಇದರಲ್ಲಿ 10 ಸಾವಿರ ಕೋಟಿ ರೂ. ಮಾತ್ರ ನಬಾರ್ಡ್ ಮರು ಹಣಕಾಸುವ ಸೌಲಭ್ಯ ನೀಡಿದರೆ, ಉಳಿದ 9 ಕೋಟಿ ರೂ.ಗಳನ್ನು ಸ್ವಂತ ಬಂಡವಾಳದಿಂದ ಡಿಸಿಸಿ ಬ್ಯಾಂಕ್‌ಗಳು ನೀಡಿವೆ.
ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಈ ಬ್ಯಾಂಕ್‌ಗಳನ್ನು ಇನ್ನಷ್ಟು ಬಲಿಷ್ಠಪಡಿಸಬೇಕು. ಅನಗತ್ಯವಾಗಿ ಕೇರಳ ಮಾದರಿಯಲ್ಲಿ ವಿಲೀನ ಮಾಡಕೂಡದು ಎಂದು ಗುರುವಾರ ಜಿಟಿಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಶೈಲದಲ್ಲಿ ಸ್ಥಳೀಯರು-ಕನ್ನಡಿಗ ಯಾತ್ರಿಗಳ ನಡುವೆ ಗಲಾಟೆ: 200 ವಾಹನ ಜಖಂ