More

    ವಿದ್ಯಾರ್ಥಿಗಳ ಜತೆ ಬಿಸಿ ಊಟ ಸವಿದ ಶಾಸಕಿ

    ಮೂಡಿಗೆರೆ: ಅಕ್ಷರ ದಾಸೋಹ ಯೋಜನೆೆಯಡಿ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿ ಊಟದ ಗುಣಮಟ್ಟ ಪರಿಶೀಲಿಸಲು ಶಾಸಕಿ ನಯನಾ ಮೋಟಮ್ಮ ಬುಧವಾರ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದರು.

    ಶಾಲೆ ಕೊಠಡಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಶಾಲೆ ಸಮಸ್ಯೆ ಹಾಗೂ ಬಿಸಿ ಊಟ ಗುಣಮಟ್ಟದ ಕುರಿತು ವಿಚಾರಿಸಿದರು. ನಂತರ ಅಡುಗೆ ಕೊಠಡಿಯಲ್ಲಿ ತಯಾರಾಗಿದ್ದ ಉಪಾಹಾರ, ದಾಸ್ತಾನು ಕೊಠಡಿಯಲ್ಲಿ ಶೇಖರಿಸಿದ್ದ ತರಕಾರಿ, ಆಹಾರ ಪದಾರ್ಥ, ವಿದ್ಯಾರ್ಥಿಗಳು ಬಳಸುವ ಶೌಚಗೃಹ ವೀಕ್ಷಿಸಿದರು. ವಿದ್ಯಾರ್ಥಿಗಳ ಜತೆ ಕುಳಿತು ಬಿಸಿ ಊಟದ ರುಚಿ ಸವಿದು ಗುಣಮಟ್ಟ ಪರಿಶೀಲಿಸಿದರು.
    ಮಧ್ಯಾಹ್ನ ಬಿಸಿ ಊಟ ಸವಿಯುವ ಮುನ್ನ ವಿದ್ಯಾರ್ಥಿಗಳು ಪಠಿಸಿದ ಶ್ಲೋಕ ಹಾಗೂ 2ರಿಂದ 20ರವರೆಗೆ ಮಗ್ಗಿ ಹೇಳುವುದನ್ನು ಶಾಸಕಿ ನಯನಾ ಮೋಟಮ್ಮ ಆಲಿಸಿ ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಯಾವುದೇ ದೋಷಗಳಿದ್ದರೆ ಪಾಲಕರ ಗಮನಕ್ಕೆ ತರಬೇಕು. ಇಲ್ಲವಾದರೆ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿ ವಿದ್ಯಾರ್ಥಿಗಳಿಗೆ ಅವರ ಮೊಬೈಲ್ ನಂಬರ್ ನೀಡಿದರು.
    ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಿಯಾದ ಬಳಿಕ ತಾಲೂಕಿನ ಅಭಿವೃದ್ಧಿ, ಜನರ ಮೂಲಭೂತ ಸಮಸ್ಯೆ ನಿವಾರಿಸಲು ಆದ್ಯತೆ ನೀಡಿದ್ದೇನೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಬಿಸಿ ಊಟದಲ್ಲಿ ವ್ಯತ್ಯಾಸ ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಪಪಂ ಸದಸ್ಯ ಎಚ್.ಪಿ.ರಮೇಶ್, ಗೋಣಿಬೀಡು ಹೋಬಳಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಉಗ್ಗೇಹಳ್ಳಿ, ಸುನೀತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts